Sunday, August 8, 2010
ಇದು ಅಮ್ಮನಾಗುವ ಖುಷಿ.
ನಾನು ಅಮ್ಮನಾಗುತ್ತಿದ್ದೇನೆ ಕಣೇ, ಎಷ್ಟು ಖುಷಿಯಾಗುತ್ತಿದೆ ಗೊತ್ತಾ? ಎಂದು ಆಕೆ ಕಂಗಳಲ್ಲಿ ಖುಷಿಯ ನೀರು ತುಂಬಿಕೊಂಡು ಹೇಳುತ್ತಿದ್ದರೆ ನಾನು ಒಂದು ಕ್ಷಣ ಗೊಂದಲಕ್ಕೀಡಾಗಿದ್ದೆ. ಒಂದು ವರ್ಷದ ಹಿಂದೆ ಆಕೆಯ ಮದುವೆಯಾಗಿತ್ತು. ಮದುವೆಗೆ ವೊದಲು ನಿತ್ಯ ನನ್ನ ಒಡನಾಡಿಯಾಗಿದ್ದ ನನ್ನ ಗೆಳತಿ, ಆವಾಗಲೆಲ್ಲಾ ಮದುವೆ, ಮಕ್ಕಳು, ಸಂಸಾರ ಎಂದರೆ ಅಯ್ಯೋ ಅದ್ರ ಸಹವಾಸವೇ ಬೇಡಪ್ಪಾ ಅನ್ನುತ್ತಿದ್ದಳು. ಆದರೆ, ಮದುವೆಯ ವೊದಲಿನ ಗೆಳತಿಗೂ, ಈಗಿನ ಗೆಳತಿಗೂ ಅಜಗಜಾಂತರ ವ್ಯತ್ಯಾಸ.
‘ನನ್ನ ಹೊಟ್ಟೆಯಲ್ಲಿ ನನ್ನದೇ ಮಗು’ ಎಂದಾಗ ಎಷ್ಟು ಖುಷಿಯಾಗುತ್ತೆ? ಪುಟ್ಟ ಪುಟ್ಟ ಕೈಗಳು, ಕಾಲುಗಳು, ಹಾಲುಗಲ್ಲ, ಕಂದನ ಅಳು, ಸುಮ್ಮ ಸುಮ್ಮನೆ ನಗುವುದು...ಎಲ್ಲವನ್ನು ನೆನೆಸಿಕೊಂಡು ಹೆಮ್ಮೆಪಡುತ್ತಿದ್ದೀನಿ ಕಣೇ. ನನ್ನ ಹೊಟ್ಟೆಯಲ್ಲಿ ಮಗು ಕೈ-ಕಾಲು ಅಲ್ಲಾಡಿಸಿದಂತೆ ಅನಿಸಿದಾಗ ನನಗಂತೂ ದಿನಾ ಕಂಗಳು ತುಂಬಿಕೊಳ್ಳುತ್ತೆ. ಆ ಪಾಪುನ ಬೇಗ ನೋಡ್ಬೇಕು, ಅದನ್ನು ಮುದ್ದು ಮಾಡುತ್ತಾ ಅದಕ್ಕೆ ಹಾಲುಣಿಸಬೇಕು, ತುತ್ತು ಬಾಯಿಗಿಡಬೇಕು ಅನಿಸುತ್ತೆ....” ಹೀಗೆ ಅವಳು ಹೇಳುತ್ತಲೇ ಇದ್ದಳು.
ಅವಳಿಗಿನ್ನೂ ನಾಲ್ಕು ತುಂಬಿ ಐದರ ಹೊಸ್ತಿಲು...
ಮನದೊಳಗೆ ಅಚ್ಚರಿ. ಒಂದು ಕ್ಷಣ ನೆನಪಾಯಿತು, ಯಾರೋ ಹೇಳಿದ ಮಾತು; ತಾಯ್ತನದ ಸುಖ ಅನುಭವಿಸಿದವರಿಗೇ ಗೊತ್ತು .
ಹೌದು, ನನ್ನನ್ನು ಒಂಬತ್ತು ತಿಂಗಳು ಹೊಟ್ಟೆಯೊಳಗೆ ಹೊತ್ತ ಅಮ್ಮನೂ ಹೀಗೆ ಖುಷಿಪಟ್ಟಿರಬೇಕು ಅಲ್ವಾ? ಅಮ್ಮ ಹೇಳುತ್ತಿದ್ದಳು: “ನೀನು ಹುಟ್ಟಿದ್ದು ನಮ್ಮೂರ ಹೊಳೆ
ಬದಿಯ ದಾರಿ ಮಧ್ಯೆಯಲ್ಲಿ. ನೀನು ಹುಟ್ಟುವಾಗ ಏನೂ ಕಷ್ಟವಿರಲಿಲ್ಲ” ಅಂತ.
ನನ್ನ ಕೇಕೆ, ನಗು, ಅಳು, ಕಿರುಚಾಟ, ರಚ್ಚೆ ಹಿಡಿಯುವಿಕೆ...ಎಲ್ಲವನ್ನೂ ಅಮ್ಮ ಪ್ರೀತಿಸಿದ್ದಾಳೆ. ಅತ್ತಾಗ ಹೊಡೆಯದೆ ಹಾಗೇ ಮುದ್ದು ಮಾಡಿ ಲಾಲಿ ಹಾಡಿದ್ದಾಳೆ.
ಗೆಳತಿ ಅಮ್ಮನಾಗುವ ಸುದ್ದಿ ಕೇಳುತ್ತಲೇ ಯೋಚನಾಲಹರಿಗಳು ಎತ್ತೆತ್ತಲೋ ಹೊರಟವು.
ಅಬ್ಬಾ!
ಬದುಕೇ ವಿಚಿತ್ರಪ್ಪಾ...ಅಮ್ಮನಾದಾಗ ಹೆಣ್ಣೊಬ್ಬಳು ಇಷ್ಟೊಂದು ಖುಷಿ ಪಡುವುದು ಕೂಡ ಸೃಷ್ಟಿಕರ್ತನ ಲೀಲೆಯೇ? ಅದ್ಯಾಕೆ ಹೆಣ್ಣೇ ಅಷ್ಟೊಂದು ಖುಷಿಪಡುತ್ತಾಳೆ? ಆ ಮಗುವಿಗೆ ಜನ್ಮ ನೀಡಿದ ಅಪ್ಪನ ಮುಖದಲ್ಲಿ ‘ಅಮ್ಮನ ಮುಖದ ಸಂತೋಷ’ ಕಾಣಲು ಸಾಧ್ಯವೇ?
ಅಮ್ಮನೆಂದರೆ ಹಾಗೇ...ಎಲ್ಲಾ ಅಮ್ಮನೂ ಹಾಗೇ...ತನ್ನದೇ ಮಗುವಿನ ಹುಟ್ಟಿನಲ್ಲಿ ಆಕೆ ಮರುಹುಟ್ಟು ಪಡೆಯುತ್ತಾಳೆ...ಹೊಸ ಜಗತ್ತಿಗೆ ತೆರೆದುಕೊಳ್ಳುತ್ತಾಳೆ.
ಇದು ಅಮ್ಮನಾಗುವ ಖುಷಿ...
Subscribe to:
Post Comments (Atom)
9 comments:
ammanaaguva kushiyalli appanu kushi paduttaane aadare avaru torisikoLLuvudilla aste...
nimma snehitege shubhashayagaLu
Yes.ಮಾತೃತ್ವವು ಹೆಣ್ಣಿನ ವಿಶೇಷ privilege!
ಚಿತ್ರಾ ಮೇಡಂ,
ಹದೆಯುವುದೆಂದರೆ ಅಮ್ಮನಿಗೆ ಮರು ಹುಟ್ಟು ಹೌದು.
ನಮ್ಮ ಪ್ರತಿಯೊಂದು ಆಗುಹೋಗುಗಳನ್ನು ಪ್ರೀತಿಯಿಂದ ನೋಡಿಕೊಳ್ಳುವ ಅಮ್ಮ ತನ್ನ ಸುಖವನ್ನು ಮಕ್ಕಳ ಮುಖದಲ್ಲೇ ಕಾಣುತ್ತಾಳೆ,
ತುಂಬಾ ಚನ್ನಾಗಿ ವಿವರಿಸಿದ್ದೀರಾ ಅಮ್ಮನಾಗುವ ಸುಖವನ್ನು.
ಸಧ್ಯ ನನ್ನ ಹೆಂಡತಿ ಈ ಕುಶಿ ಅನುಭವಿಸುತ್ತಿದ್ದಾಳೆ ನಾನು ಅಪ್ಪನಾಗುವ...
ಲೇಖನ ಚೆನ್ನಾಗಿದೆ.
ನಿಜ ಧರಿತ್ರಿ,
ಹೆಣ್ಣಿಗೆ ಹೊಸ ಹುಟ್ಟು ಅಮ್ಮನಾದಾಗ ಎನ್ನುತ್ತಾರೆ
ಮಗುವಿನ ಪ್ರತೀ ಹುಟ್ಟಿದ ಹಬ್ಬವೂ ತಾಯಿಗೆ ಮರುಹುತ್ತಿನಂತೆ ಎಂತಲೂ ಅನ್ನುತ್ತಾರೆ
''ಅಮ್ಮ'' ಎಂಬ ಎರಡಕ್ಷರದಲ್ಲಿ ಅದೆಷ್ಟೊಂದು ಶಕ್ತಿಯಿದೆ
lekhana istavaayitu :)
ಶರಧಿ ಅಲ್ಲಿ ನಿಮ್ಮ "ಬಸ್ಸು ಸಾಗುತ್ತಿತ್ತು...ಬದುಕಿನ ಜೊತೆಗೆ.." ಲೇಖನ ಓದಿದೆ.. ನೀವು ಉಜಿರೆ ಅಲ್ಲಿ ಓದಿದ್ದು ಕೇಳಿ ಸಂತೋಷ ವಾಯಿತು. ನನ್ನ ಕಾಲೇಜ್ ದಿನಗಳು ನೆನಪಾದವು.. ಅಲ್ಲಿ ಓದಿದವರು ಪ್ರೀತಿಯ ಉಜಿರೆ ಅನ್ನು ಯಾವತ್ತು ಬದುಕಿನಲ್ಲಿ ಮರೆಯಲಾರರು..
ಚಿತ್ರಾ..ಮೊದಲಿಗೆ ನಿನ್ನ ಸ್ನೇಹಿತೆಗೆ ಮನಃಪೂರ್ವಕ ಅಭಿನಂದನೆಗಳು ಮತ್ತು ಶುಭಾಷಯಗಳು...ಅಮ್ಮ..!! ಓಹ್..ಆ ಶಬ್ದದ ಗಾಂಭೀರ್ಯ, ಮಮತೆಯದೃಶ್ಯ, ಎಂಥ ಹಂತದಲ್ಲೂ ಮಗು ಎಷ್ಟೇ ಬೆಳೆದಿದ್ದರೂ ಅದರ ಸುಖದಲ್ಲಿ ಬಹು ಖುಷಿಪಡುವ ಅದರ ಬೇಸರಕ್ಕೆ ಮಮ್ಮಲ ಮರಗುವ..ಅದು ಕೇವಲ ಅಮ್ಮನಿಗೆ...ಅಪ್ಪ..ಹೌದು ತೋರಿಸೊಲ್ಲ ಕೆಲವೊಮ್ಮೆ ಆತ ಇದನ್ನು ಗಮನಿಸಿಯೂ ಇರ್ಲಾರನು..ಇದೇ ಸೃಷ್ಠಿಯ ನಿಯಮ..ಬಹಳ ಮುದ್ದಾಗಿದೆ ಲೇಖನ ಮಗುವಿನಷ್ಟೇ..
ಪ್ರತಿ ಮಗು ಹುಟ್ಟುವಾಗ ಒಬ್ಬ ಅಮ್ಮನೂ ಹುಟ್ಟುತ್ತಾಳೆ. ಇನ್ನೊಂದು ಜೀವಕ್ಕೆ ಜೀವ ಕೊಡುವ ಅವಳೇ ಗ್ರೇಟ್.
ಸುಂದರ ಬರಹ...
Post a Comment