Sunday, April 26, 2009

ಕನಸು ಕಲ್ಲಾಗುವ ಮೊದಲು...!!

ಗೆಳೆಯಾ,
ನಿನ್ನ ನೆನಪಾದಾಗ ಅಮಾವಾಸ್ಯೆಯೂ ಹುಣ್ಣಿಮೆಯಂತೆ. ನೀ ನನ್ನೊಳಗೆ ಮಾತಿಗಿಳಿದಾಗ ಸುಡುವ ನೇಸರನೂ ತಂಪು ಸೂಸುವ ಚಂದಿರನಂತೆ. ನಿನ್ನ ಮೌನದ ದನಿ ಎದೆ ತಟ್ಟಿದಾಗ ಭಾವಗಳೂ ಜೀವ ಪಡೆಯುತ್ತವೆ. ಯಾಕೋ ನೀನಿಟ್ಟ ಪ್ರೀತಿಯ ಕಚಗುಳಿ ಮತ್ತೆ ಮತ್ತೆ ಹೃದಯದಲ್ಲಿ ಮಾರ್ದನಿಸುತ್ತದೆ ಗೆಳೆಯಾ. ಅನನ್ಯವಾದ ಬದುಕನ್ನು, ಅಮ್ಮನೆಂಬ ಶ್ರೇಷ್ಠ ಸತ್ಯವನ್ನು ಪ್ರೀತಿತಿಸಲು ಮಾತ್ರ ಅರಿತಿದ್ದ ನಾನು ನಿನ್ನನ್ನೂ ಪ್ರೀತಿಸಲು ಕಲಿತೆ. ನಿನ್ನಲ್ಲೂ ಜೀವನಪ್ರೀತೀನ ಕಂಡೆ. ನಿನ್ನಲ್ಲೂ ಬದುಕಿನ ಪ್ರತಿಬಿಂಬ ಕಂಡೆ. ನಾನಂದುಕೊಂಡಿರಲಿಲ್ಲ ಗೆಳಯಾ...ನೀ ಮೌನದಲ್ಲೇ ಪ್ರೀತಿಯಾಗಿ ನನ್ನೆದೆಯಲ್ಲಿ ಸ್ವಾತಿ ಮುತ್ತಾಗುವೆಂದು!

ಕಳೆದ ಬದುಕಿನ ಹಾದಿಯಲ್ಲಿ ನಂಬಿಕೆಯ ಪುಷ್ಪ ಹರಿಸಿ ನನ್ನೊಡನೆ ಹೆಜ್ಜೆಯಾಗಿದ್ದವನು ನೀನು. ಮನದೊಳಗೆ ಅವಿತಿದ್ದ ಶೋಕವನ್ನೇ ಶ್ಲೋಕವನ್ನಾಗಿಸಿ, ಅಳಲಿನ ಅಲೆಗಳನ್ನೇ ಸವಿಹಾಡಾಗಿಸಿದ ಗೆಳೆಯನೇ, ನಿನ್ನ ಖುಷಿಗೆ ನಾ ಬೆಳಕಾಗಬೇಕಾದರೆ ನಿನ್ನ ದುಃಖದ ಕತ್ತಲಲ್ಲೂ ನಾ ಕರಗಿ ಕಣ್ಣೀರಾಗಬೇಕು. 'ನಿನಗೆ ಬೆಳಕಷ್ಟೇ ನೀಡುತ್ತೇನೆ ಗೆಳತೀ..' ಎನ್ನುತ್ತಾ ದುಃಖವನ್ನೇಲ್ಲಾ ಬದುಕ ಮೇಲೆ ಹೊದ್ದು ಮಲಗುತ್ತೇನೆ ಎನ್ನುವ ಘನ ವ್ಯಕ್ತಿತ್ವ ನಿನ್ನದಾದರೂ ನಿನ್ನ ತುಂಬಾ ಪ್ರೀತಿಸುವ ಗೆಳತಿಯಾಗಿ, ಅಕ್ಕರೆಯ ಸಹೋದರಿಯಾಗಿ, ನೋವು-ನಲಿವಿಗೆ ಅಮ್ಮನಾಗಿ ಮಮತೆಯ ಮಡಿಲಾಗುವ ಅವಕಾಶ ಕೊಡ್ತೀಯಾ ಹೇಳು..?! ಬೆಳದಿಂಗಳ ಮಳೆಗೆ ಮಾತ್ರವಲ್ಲ ಬೆಂಕಿಮಳೆಯ ಕಾಳರಾತ್ರಿಯಲ್ಲೂ ನಿನ್ನ ಜೊತೆ ನಾ ಹೆಜ್ಜೆಯಾಗಬೇಕು. ಕಂಗಳಿಂದ ಜಾರೋ ಹನಿಬಿಂದು ಪಾದತಳಕ್ಕೆ ಬಿದ್ದು ಮಣ್ಣಾಗುವ ಮೊದಲು ಒಂದೇ ಒಂದು ಸಲ ಹೇಳಿಬಿಡು ಗೆಳಯಾ, "ಗೆಳತೀ ನನ್ನ ದುಃಖಕ್ಕೂ ಹೆಗಲಾಗಲೆಂದು..!"

ಹೃದಯ ತುಂಬಾ ದುಗುಡ-ಕಾರ್ಮೋಡವನ್ನು ಹೊತ್ತು 'ಮರೆತುಬಿಡು' ಎನ್ನುವಷ್ಟು ಸುಲಭವಲ್ಲ ಪ್ರೀತಿ-ಭಾವದ ಬಂಧನ. ನಿನ್ನ ಹುಣ್ಣಿಮೆ ನಗುವಿಗೆ, ಪ್ರೀತಿಯ ಕಚಗುಳಿಗೆ ಸಂಸ್ಕೃತಿ-ಕಟ್ಟಳೆಗಳ ಹಂಗಿರಲಿಲ್ಲ. ಸುತ್ತಮುತ್ತಲ ಜನ ದೇಶ ಭಾಷೆ ಕಲಿಯಬಹುದು..ಎನ್ನುವುದು ಭರವಸೆಯ ಹೊಂಗಿರಣವಲ್ಲ ಗೆಳೆಯಾ. 'ತೆರೆದಿದೆ ಮನೆ ಓ ಬಾ ಗೆಳತೀ..' ಎಂದು ಕೈಬೀಸಿ ಕರೆದು ಧಡ್ ! ಎಂದು ಮನದ ಕದ ಮುಚ್ಚದಿರು. ಅಂತರಂಗದ ಬಾಗಿಲು ತೆರೆದುಬಿಡು...ಪ್ರೀತಿಯ ಗಾಳಿ ಒಳಕ್ಕೆ ಹರಿದುಬಿಡಲಿ. ಬಣ್ಣ ತುಂಬಿಬಿಡು..ನೆನಪುಗಳಿಗೆ, ಪ್ರತಿ ರಾತ್ರಿಯ ಕನಸುಗಳಿಗೆ..ಜೀವನ ರಂಗೋಲಿಗೆ! ತಡವೇಕೆ..ಕಾಲ ಕಲಿಸುವ ಬದುಕಿಗೆ ನೀನ್ಯಾಕೆ ಬಂಧಿಯಾಗುತ್ತೀಯಾ ಹೇಳು? ಮನತುಂಬಿ ನಕ್ಕು ಬಿಡು..ಚಂದಿರನೂ ನಸು ನಾಚುವಂತೆ, ಅರಳುವ ಜಾಜಿಯೂ ಹುಸಿಮುನಿಸು ತೋರುವಂತೆ! ಅನನ್ಯ ಬದುಕಿನಲ್ಲಿ ಸ್ವಚ್ಚಂದ ಹಕ್ಕಿಯಾಗಿ ಆಕಾಶಕ್ಕೆ ಹಾರೋ ಆಡಂಬರತೆ ಬೇಡ..ನಮ್ಮದೇ ಬಿದಿರ ಹುಲ್ಲಿನ ಗುಡಿಸಲಿನಲ್ಲಿ ಪ್ರೀತಿಯ ಗೂಡು ಕಟ್ಟಿ ಕಲರವಗುಟ್ಟೋಣ. ಮೊಂಬತ್ತಿಯಡಿಯಲ್ಲೇ ಜೀವನಪ್ರೀತಿಯ ಅನುಭೂತಿ ಪಡೆಯೋಣ. ನಿನ್ನ ಬದುಕಿನಾಗಸದಲ್ಲಿ ಪುಟ್ಟ ನಕ್ಷತ್ರವಾಗೋ ಅವಕಾಶ ಕೊಡ್ತೀಯಾ ಹೇಳು ಗೆಳೆಯಾ....ಕನಸು ಕಲ್ಲಾಗುವ ಮೊದಲು..!!ಇಂತೀ,
ನಿನ್ನವಳೇ

25 comments:

Rajesh Manjunath - ರಾಜೇಶ್ ಮಂಜುನಾಥ್ said...

Dharitri,

Chennagide, tumbaane ishtavaaytu. Prati bhaavanegalu tumbaane fresh annisuvashtara mattige sogasaagive.

ಶರಶ್ಚಂದ್ರ ಕಲ್ಮನೆ said...

ಮನ ತಟ್ಟುವ ಬರಹ ಧರಿತ್ರಿ ಅವ್ರೆ... ಈ ಪ್ರಪಂಚದಲ್ಲಿ ಕೆಲವರು ಇರುತ್ತಾರೆ, ಅವರು ಕೇವಲ ಸಂತಸವನ್ನೇ ಹಂಚಿ ದುಃಖಗಳನ್ನೆಲ್ಲ ತಮ್ಮ ಒಡಲಲ್ಲೇ ಮುಚ್ಚಿಟ್ಟುಕೊಳ್ಳುವವರು.... ನಿಮ್ಮ ಗೆಳೆಯನೂ ಅಂತ ಮನುಷ್ಯನೇ ಇರಬೇಕು :) "ಅನನ್ಯ ಬದುಕಿನಲ್ಲಿ ಸ್ವಚ್ಚಂದ ಹಕ್ಕಿಯಾಗಿ ಆಕಾಶಕ್ಕೆ ಹಾರೋ ಆಡಂಬರತೆ ಬೇಡ..ನಮ್ಮದೇ ಬಿದಿರ ಹುಲ್ಲಿನ ಗುಡಿಸಲಿನಲ್ಲಿ ಪ್ರೀತಿಯ ಗೂಡು ಕಟ್ಟಿ ಕಲರವಗುಟ್ಟೋಣ. ಮೊಂಬತ್ತಿಯಡಿಯಲ್ಲೇ ಜೀವನಪ್ರೀತಿಯ ಅನುಭೂತಿ ಪಡೆಯೋಣ. ನಿನ್ನ ಬದುಕಿನಾಗಸದಲ್ಲಿ ಪುಟ್ಟ ನಕ್ಷತ್ರವಾಗೋ ಅವಕಾಶ ಕೊಡ್ತೀಯಾ ಹೇಳು ಗೆಳೆಯಾ....ಕನಸು ಕಲ್ಲಾಗುವ ಮೊದಲು..!!" ಈ ಸಾಲುಗಳು ತುಂಬಾ ಇಷ್ಟ ಆದವು... ಆದಷ್ಟು ಬೇಗ ನೀವು ಇಚ್ಛೆ ಪಟ್ಟಿದ್ದು ನಿಮಗೆ ಸಿಗಲಿ ಎಂದು ಹಾರೈಸುವೆ :)

ಶರಶ್ಚಂದ್ರ ಕಲ್ಮನೆ

PARAANJAPE K.N. said...

ಖ೦ಡಿತ, ಇ೦ತಹ ಪತ್ರ ಪಡೆದ ಆ ವ್ಯಕ್ತಿ ಅದೆ೦ಥ ಅರಸಿಕನಾಗಿದ್ದರೂ, ಕಲ್ಲು ಹೃದಯದವನಾಗಿದ್ದರೂ, ಮ೦ಜಿನ೦ತೆ ಕರಗಿ ಬಿಡಬಲ್ಲ. ಪದಜೋಡಣೆ,ಲಾಲಿತ್ಯ, ಕಾವ್ಯಾತ್ಮಕ ಶೈಲಿ, ಎಲ್ಲ ದೃಶ್ಟಿಕೋನದಿ೦ದಲೂ ನಿನಗೆ ಫುಲ್ ಮಾರ್ಕ್ಸ್. ತು೦ಬ ಚೆನ್ನಾಗಿದೆ. ಏನಮ್ಮಾ ವಿಷ್ಯ ?? ಯಾರಾತ ?ಅಣ್ಣನಿಗೂ ಗುಟ್ಟಲ್ಲಿಯಾದರು ಹೇಳಲಾರೆಯಾ ?

ಧರಿತ್ರಿ said...

@ರಾಜೇಶ್ ..
.ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೇ ಬರುತ್ತಿರಿ.

@ಪರಾಂಜಪೆಯಣ್ಣ..
ನನ್ನನ್ನು ಹೊಗಳಿ ಅಟ್ಟಕ್ಕೇರಿಸಿದ್ದಕ್ಕೆ ಧನ್ಯವಾದಗಳು ನನ್ನ ಮೇಷ್ಟ್ರು ಕೂಡ ಫುಲ್ ಅಂಕಗಳನ್ನು ಕೊಟ್ಟಿರಲಿಲ್ಲ..ನೀವು ಕೊಟ್ರಲ್ಲಾ..ಭಾಳ ಖುಷಿಯಾಗುತ್ತಿದೆ. ಮತ್ತೆ ಇದೆಲ್ಲ ರೀಲು..ನಾಟ್ ರಿಯಲ್! ಗುಟ್ಟಿದ್ದರೆ ಹೇಳ್ತೀನಿ..ಸದ್ಯಕ್ಕೆ ಗುಟ್ಟೇನಿಲ್ಲ. ಸುಮ್ಮನೆ ಗೀಚಿದ್ದೇನೆ ಅಷ್ಟೇ.

@ಶರತ್..ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಯಾವಾಗಲೂ ನಾನು ಹುಡುಗನಾಗಿ ಪ್ರೇಮ ಪತ್ರ ಬರೀತಾ ಇದ್ದೆ. ಇವತ್ತು ಹುಡುಗಿಯಾಗಿ ಬರೆದೆ...ಇದೆಲ್ಲಾ ರೀಲು..ನಾಟ್ ರಿಯಲ್ಲೂ!! ನಿಮ್ಮ ಹಾರೈಕೆಯನ್ನು ಮಾತ್ರ ಹಾಗೇ ಜೋಪಾನವಾಗಿಟ್ಟುಕೊಂಡು..ಭವಿಷ್ಯದಲ್ಲಿ ಬಳಸಿಕೊಳ್ತೀನಿ ಆಯಿತಾ. ಬರ್ತಾ ಇರಿ.

-ಧರಿತ್ರಿ

ಸಾಗರದಾಚೆಯ ಇಂಚರ said...

ಧರಿತ್ರಿ,
ಅಂತೂ ಪ್ರೇಮಪತ್ರದ ರಿಸರ್ಚ ಜೋರಾಗಿ ನಡೀತಾ ಇದೆ ಎಂದಾಗೆ ಆಯಿತು, ತುಂಬಾ ಸುಂದರವಾಗಿ ಬರಿತಿರ, ತುಂಬಾ ಖುಷಿ ಆಗುತ್ತೆ ಓದೋಕೆ,

ಸಾಗರದಾಚೆಯ ಇಂಚರ said...

ಧರಿತ್ರಿ,
ಅಂತೂ ಪ್ರೇಮಪತ್ರದ ರಿಸರ್ಚ ಜೋರಾಗಿ ನಡೀತಾ ಇದೆ ಎಂದಾಗೆ ಆಯಿತು, ತುಂಬಾ ಸುಂದರವಾಗಿ ಬರಿತಿರ, ತುಂಬಾ ಖುಷಿ ಆಗುತ್ತೆ ಓದೋಕೆ,

shivu.k said...

ಧರಿತ್ರಿ,

ಬರಹ ತುಂಬಾ ಕಾವ್ಯಾತ್ಮಕವಾಗಿದೆ..

ಖುಷಿಯ ಸಮಯದಲ್ಲಿ ಎಲ್ಲರೂ ಪ್ರೀತಿಯನ್ನು ಬಯಸಿದರೆ ನಿನ್ನ ಲೇಖನದಲ್ಲಿ ದುಃಖ, ನೋವಿನ ಕ್ಷಣಗಳಲ್ಲೂ ಪ್ರೀತಿ ಬಯಸುವುದು..ಕೊಡುವುದು ಈ ಲೇಖನದ ವಿಶೇಷ.

good keep it up...

ಧನ್ಯವಾದಗಳು...

ಮನಸು said...

preeti-prema mooduva modale prema patra bareyo kale chennagide..

chennagide baraha..good
all the best

ಬಾಲು said...

hudugaru haage dharithri,
"ನೀನು ಬಿಸಿಲಲ್ಲಿದ್ದರೆ ನಾನು ನೆರಳಾಗುತ್ತೇನೆ. ನೀನು ನೆರಳಲ್ಲಿದ್ದರೆ ನಾನು ತಂಪಾಗುತ್ತೇನೆ.ನಿನ್ನ ಹನಿಗಳಿಗೆ ನಾನು ಕಣ್ಣಾಗುತ್ತೇನೆ.ನಿನ್ನ ಮಾತುಗಳಿಗೆ ನಾನು ದ್ವನಿ.ನಿನ್ನ ಕನಸುಗಳಿಗೆ ನಾನು ಕಣ್ಣು.ಈ ಬದುಕು ಅನ್ನುವುದರ ಜೊತೆಗೆ ನಾನು ನೀನು ಒಂದಾಗಿ ಹೋಗುವುದಾದರೆ ಹೋಗೋಣ. ಆದರೆ ಇಲ್ಲಿ ಬರುವ ನೋವು ನಿರಾಸೆ ದುಃಖಗಳಲ್ಲಿ ನೀನು ಪಾಲು ಕೇಳುವುದಿಲ್ಲವೆಂದರೇ ಮಾತ್ರ..." idu ello odiddu....

ishta patta hudugi yavattu sukhavagi irabeku antha hudugara bayake.

innu nimma pathra galu thumba kaavyathmakavagi, manasina bhavane na abhivyakthigolisuvalli saphala vagide!!!

Anonymous said...

ಭಾವ ಇರಲಿ ಆದರೆ ಭಾವುಕತೆ ಬೇಡ. ತನ್ಮಯತೆ ಇರಲಿ ಆದರೆ ಏಕತಾನತೆ ಬೇಡ. ಸೃಜನಶೀಲತೆ ಇರಲಿ ಆದರೆ ಚಟ ಬೇಡ. ಸ್ನೇಹ ಇರಲಿ ಆದರೆ ಮುಲಾಜು ಬೇಡ. ಇದು ನಿಮ್ಮ ಬರವಣಿಗೆಯ ಕುರಿತು ನನ್ನ ವಿಮರ್ಶೆ. ಸ್ವೀಕರಿಸುವುದು ಬಿಡುವುದು ತಮ್ಮ ಸಹೃದಯ ಪ್ರಜ್ಞೆಗೆ ಬಿಟ್ಟಿದ್ದು. :-)

Guruprasad said...

ಧ ರಿ ತ್ರಿ ...
ಚಂದಿರನೂ ನಸು ನಾಚುವಂತೆ, ಅರಳುವ ಜಾಜಿಯೂ ಹುಸಿಮುನಿಸು ತೋರುವಂತೆ! ನಿಮ್ಮ ಬ್ಲಾಗಿನ ಗೆಳೆಯ/ಗೆಳೆತಿಯರು ಖುಷಿ ಪಡುವಂತೆ (ಕೆಲವರು ಸಂಕಟ ಪಟ್ಟು ಕೊಳ್ಳುವಂತೆ........ :-) )!! ಸ್ವೀಟ್ ಆಗಿ.... cute ಆಗಿ ..... ನೀಟ್ ಆಗಿ ಬರೆದಿದ್ದೀರ........ ವೆರಿ ನೈಸ್.....very much impressed... ಹೀಗೆ ಮುಂದುವರಿಸಿ.....
ಹೌದು,, ಮೊದಲಿಗೆ ಅಮ್ಮನ ಮೇಲೆ ಆಮೇಲೆ ಅಕ್ಕ, ಆಮೇಲೆ ನಿಮ್ಮ ತಮ್ಮ (ಇದರಲ್ಲಿ ನಿಮ್ಮ ಬಗ್ಗೆನೇ ಜಾಸ್ತಿ ಹೇಳ್ಕೊಂಡ್ ಇದ್ದೀರಾ....) ಇವಾಗ,,, ನಿಮ್ಮ ಗೆಳೆಯ...... next turn ಯಾರದು.....?
and lastly....... ರೀಲೋ ರಿಯಲ್ಲೋ .... ನಿಮ್ಮ ಭಾವನಾತ್ಮಕ ಮನಸಿನ ಭಾವನೆಗಳಿಗೆ ಸ್ಪಂದಿಸುವಂಥ ಒಳ್ಳೆ ಗೆಳೆಯನೆ ಸಿಗಲಿ.....ಆಲ್ ದಿ ಬೆಸ್ಟ್...

ಗುರು

ದಿವ್ಯಾ ಮಲ್ಯ ಕಾಮತ್ said...

ಧರಿತ್ರಿಯವರೇ,
ಗೆಳೆಯನ ಮನದಿಂದ ಒಂದು ಪ್ರೇಮ ಪತ್ರವಾಯಿತು; ಇದೀಗ ಗೆಳತಿಯ ಕಡೆಯಿಂದ... ನಿಮ್ಮ ಕಲ್ಪನೆಗೆ ಮೆಚ್ಚಬೇಕಾದ್ದೆ ! ಬರಹದಲ್ಲಿ ಆ ನೋವಿನ ನಡುವೆಯೂ ರಮ್ಯತೆ ಇದೆ...

Mohan Hegade said...

ಸ್ನೇಹಿತೆ,
ಕನಸು ಕಲ್ಲಾಗುವ ಮೊದಲು !!
ನಾ ಬೇಡಿಕೊಳ್ಳುವೆ ದೇವರಲ್ಲಿ ಆದಷ್ಟು ಬೇಗ ನಿಮ್ಮ ಗೆಳಯ ಸಿಗಲೆಂದು,
ಹಾಗೆ ನಿಮಗೂ ಬೇರೆಯರ ಬಾವನೆಗಳನ್ನು ಅರ್ಥಮಾಡಿಕೊಳ್ಳುವ ವಿಶಾಲತೆ ಇರುವ ಕಾರಣ
ನಿಮ್ಮವನೇ ಪುಣ್ಯವಂತ.
ದನ್ಯರಿ,

ಧರಿತ್ರಿ said...

@ಗುರುಮೂರ್ತಿ ಸರ್...
ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು, ಹಾಗೇ ಕಳೆದ ಪ್ರೇಮ ಪತ್ರಕ್ಕೆ ನಿಮ್ಮ ಸಲಹೆ ಪಿಎಚ್ ಡಿ ಮಾಡಿ ಅಂದ್ರಲ್ಲಾ..ಇದೀಗ ಸಿದ್ಧತೆ ನಡೆಸ್ತಾ ಇದ್ದೀನಿ. ಮೊದಲೇ ಸಂಶೋಧನೆಯಲ್ಲಿ ತೊಡಗಿರುವ ನಿಮ್ಮಂಥೋರು ಗೈಡ್ ಮಾಡಿದ್ರೆ ಬಹುಶಃ ನನ್ನ ಪ್ರೇಮ ಪತ್ರ ಪಿಎಚ್ ಡಿ ದಾಖಲೆ ಮಾಡಬಹುದೇನೋ!! ಮುಂದಿನ ಬರಹ ಓದಲು ತಪ್ಪದೇ ಬನ್ನಿ.

@ಶಿವಣ್ಣ..ಪ್ರೀತಿಯಿಂದ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು. ನೋವು-ನಲಿವಿನಲ್ಲಿ ಪ್ರೀತಿಸುವುದೇ ನಿಜವಾದ ಪ್ರೀತಿ ಅಲ್ವೇ?

@ಮನಸ್ಸು ಮೇಡಂ..ನಮಸ್ತೆ. ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.

@ಬಾಲು ಸರ್...
ಎಲ್ಲೋ ಓದಿದ್ದನ್ನು ಇಲ್ಲಿ ಗೀಚಿದ್ದೀರಿ..ತುಂಬಾ ಥ್ಯಾಂಕ್ಸ್! ಮುಂದಕ್ಕೆ ನಂಗೂ ಉಪಯೋಗಕ್ಕೆ ಬರಬಹುದು. ಬರಹ ಮೆಚ್ಚಿದ್ದಕ್ಕೆ, ಬೆನ್ನುತಟ್ಟಿದ್ದಕ್ಕೆ ಧನ್ಯವಾದಗಳು.. ಬರ್ತಾ ಇರಿ ಸರ್.

@ದಿವ್ಯಾ....
ಗೆಳತಿ/ಗೆಳಯನ ಕಡೆಯಿಂದ ಪ್ರೇಮ ಪತ್ರ..ಇನ್ನು ನೋಡೋಣ..ತಂಗಿಗೆ ಅಣ್ಣ ಬರೆಯುವ ಪತ್ರ..ಅಮ್ಮ ಮಗಳಿಗೆ ಬರೆಯುವ ಪತ್ರ..ಹೀಗೇ ಸಂಬಂಧಗಳನ್ನು ಬರಹಗಳಲ್ಲಿ ನಿರೂಪಿಸುವ ಪ್ರಯತ್ನ ಮಾಡ್ತೀನಿ. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

@ಮೊಹನ್ ಅವರೇ...ಎಂಥದ್ದು ಮಾರಾಯ್ರೆ? ಇದೆಲ್ಲ ರಿಯಲ್ಲು ಅಲ್ಲ ಮಾರಾಯ...ನಿಮ್ದು ಒಳ್ಳೆ ಕತೆ..! ಎಲ್ರೂ ಶುಭ ಹಾರೈಸ್ತಾ ಇದ್ದೀರ..ಇರಲಿ ಬಿಡಿ..ಬೇಕಾಗುತ್ತೆ ಮುಂದಿನ ದಿನಕ್ಕೆ. ಪ್ರತಿಕ್ರಿಯೆಗೆ ಧನ್ಯವಾದಗಳು.

@ಗುರು ನಮಸ್ತೆ...
ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹಾಗೇ ನನ್ನ ಬಗ್ಗೆನೇ ಹೇಳಿಕೊಳ್ತಾ ಇದೀನಿ ಅನ್ನೋ ಪುಟ್ಟ ಆರೋಪ ಮಾಡಿದ್ದೀರಿ..ನಿಮ್ಮ ಆರೋಪ ನನಗೆ ಟಾನಿಕ್..ನೋ ಬೇಜಾರು ಆಯಿತಾ? ಅದೇನೋ ಯಾವುದೇ ಬರಹ ನಾ ಬರೆಯುತ್ತಾ ಹೋದಂತೆ ಅಲ್ಲಿ ನಾ ಪೂರ್ತಿ ಹುದುಗಿನಬಿಡ್ತೀನಿ. ಹಾಗಾಗಿ ಬರಹದೊಳಗೆ ನಾನೂ, ನಾ ಹೇಳುವ ವಸ್ತುವಿನೊಂದಿಗೆ ನೇರವಾಗಿ ಮಾತಿಗಿಳಿಯುತ್ತೇನೆ. ಅಷ್ಟೇ. ಧನ್ಯವಾದಗಳು ಪ್ರೋತ್ಸಾಹಕ್ಕೆ. ಹೀಗೇ ಬರುತ್ತಿರಿ.

-ಧರಿತ್ರಿ

ಧರಿತ್ರಿ said...

@ಅನಾಮಧೇಯ ಓದುಗ ಮಿತ್ರರಿಗೆ ನಮಸ್ಕಾರಗಳು. ನಿಮ್ಮ ವಿಮರ್ಶೆ ಓದಿ ಭಾಳ ಖುಷಿ ಆತು. ನಾನು ಬರಹಲೋಕದಲಿ ಈಗತಾನೇ ಅಂಬೆಗಾಲಿಡುತ್ತಿರುವ ಮಗು ಆದ್ರಿಂದ ಇಂಥದ್ದೆಲ್ಲ ಬೇಕೇ ಬೇಕು....ಅದೂ ಒಂಥರಾ ರೋಗಿಗೆ ಟಾನಿಕ್ ಇದ್ದಂತೆ.

ನನ್ನ ಬರಹದಲ್ಲಿ ಭಾವುಕತೆಯನ್ನು ನಾ ಒಪ್ಪಿಕೋತೀನಿ..ಆದರೆ ಭಾವನೆಗಳಿರುವಾ ಭಾವುಕತೆಯನ್ನು ಬಿಟ್ಟು ಬರೆಯಲಾಗುವುದಿಲ್ಲ ಅನ್ನೋದು ಸತ್ಯ. ನನ್ನಲ್ಲಿ ಸೃಜಶೀಲತೆ ಇದೆಯೋ ಅಥವಾ ಚಟ ಇದೆಯೋ ನನಗೇ ಗೊತ್ತಿಲ್ಲ. ಅದನ್ನು ನಿಮ್ಮಂಥ ವಿಮರ್ಶಕರೇ ಹೇಳಿದ್ದರೆ..ಇನ್ನೂ ಸ್ವಲ್ಪ ಬಿಡಿಸಿ ಹೇಳಿದರೆ ಚೆನ್ನ.
ಆದರೆ, ವಿಮರ್ಶಕರು ಬರೆಯುವ ಭರದಲ್ಲಿ ಹೆಸರು ಹಾಕೋದನ್ನು ಮರೆತಿದ್ದೀರಾ? ಅಥ ವಾ ಉದ್ದೇಶಪೂರ್ವಕವಾಗಿ ಹೆಸರು ಹಾಕುತ್ತಿಲ್ಲವೋ ಗೊತ್ತಾಗಲಿಲ್ಲ. ಉದ್ದೇಶಪೂರ್ವಕವಾದರೆ ದಯವಿಟ್ಟು ವಿಮರ್ಶಕರು ಎದುರು ನಿಂತು ವಿಮರ್ಶೆ ಮಾಡುವುದು ಒಳಿತು. ಬರ್ತಾ ಇರಿ..ನಿಮ್ಮ ಮಾತುಗಳಿಗೆ ಧರಿತ್ರಿ ಸ್ವಾಗತಿಸುತ್ತಾಳೆ.
-ಧರಿತ್ರಿ

ಗಿರಿ said...

ಧರಿತ್ರಿಯವರೇ,

"ನಿನ್ನ ತುಂಬಾ ಪ್ರೀತಿಸುವ ಗೆಳತಿಯಾಗಿ, ಅಕ್ಕರೆಯ ಸಹೋದರಿಯಾಗಿ, ನೋವು-ನಲಿವಿಗೆ ಅಮ್ಮನಾಗಿ ಮಮತೆಯ ಮಡಿಲಾಗುವ ಅವಕಾಶ ಕೊಡ್ತೀಯಾ ಹೇಳು..?!" ಗೆಳತಿಯನ್ನಲ್ಲದೆ ಅಮ್ಮ, ಅಕ್ಕನಾಗಿಯೂ ಗೆಳೆಯನ ಜೊತೆಯಾಗುವ ನಿಮ್ಮ ಪ್ರೀತಿಗೆ ಹಾಗೂ ಅದರ ಅನುಭೂತಿಗೆ ಪರಿತಪಿಸುವ ನಿಮ್ಮ ನೋಡಿ ಒಂಥರಾ ಅಸೂಯೆ ಮೂಡುತ್ತಿದೆ..! ಈ ಪತ್ರ ಓದಿ ನಿಮ್ಮ ಗೆಳೆಯ ಖಂಡಿತ ಕರಗುತ್ತಾನೆ. ಕನಸು ಕಲ್ಲಗುವ ಮೊದಲು ಆ ನಿಮ್ಮ ಗೆಳೆಯ ಖುಷಿಯ ಜೊತೆ ದು:ಖವನ್ನೂ ಹಂಚಿ, ಪ್ರೀತಿಯ ಧಾರೆಯೆರೆದು ಸಮರಸದ ಬಳ್ವೆಯಲಿ ಮುನ್ನಡೆಯಲಿ ಎಂದು ಹರೈಸುವೆ...

ಪತ್ರ ಸೂಪರ್...

ಧನ್ಯವಾದಗಳು...
-ಗಿರಿ

ಶಿವಪ್ರಕಾಶ್ said...

ತುಂಬಾ ಚನ್ನಾಗಿದೆ ರೀ.
ಚನ್ನಾಗಿ ಪದಗಳನ್ನು ಪೋಣಿಸಿದ್ದಿರಿ...

sunaath said...

ಧರಿತ್ರಿ,
ಭಾವನೆಯ ಪೂರವೇ ತುಂಬಿ ಹರಿದಿದೆ ಈ ಲೇಖನದಲ್ಲಿ. ಲೇಖನದ ಶೀರ್ಷಿಕೆ ಸಹ ಹೃದ್ಯವಾಗಿದೆ:"ಕನಸು ಕಲ್ಲಾಗುವ ಮೊದಲು!"
ನಿಮ್ಮ ಕನಸುಗಳೆಲ್ಲವೂ ನನಸಾಗಲಿ ಎಂದು ಹಾರೈಸುತ್ತೇನೆ.

ಸುಧೇಶ್ ಶೆಟ್ಟಿ said...

ಧರಿತ್ರೀ ಅವರೇ...

ಶೀರ್ಷಿಕೆ ಯಾರನ್ನಾದರೂ ಬರಹವನ್ನು ಓದುವ೦ತೆ ಆಕರ್ಷಿಸುತ್ತದೆ. ಹೆಚ್ಚಾಗಿ ನಾನು ಆಫೀಸಿನಲ್ಲಿ ಯಾರೆಲ್ಲಾ ತಮ್ಮ ಬ್ಲಾಗಿನಲ್ಲಿ ಹೊಸಬರಹಗಳನ್ನು ಹಾಕಿದ್ದಾರೆ ಎ೦ದು ನೋಡಿ ನ೦ತರ ಮನೆಯಲ್ಲಿ ಒ೦ದೊ೦ದಾಗಿ ಓದುತ್ತಾ ಬರುತ್ತೇನೆ... ಆದರೆ ಈ ಬರಹದ ಶೀರ್ಷಿಕೆ ನೋಡಿದ ಮೇಲೆ ಆಫೀಸಿನಲ್ಲೇ ಇದನ್ನು ಓದಿಬಿಟ್ಟೆ.

ಕಾವ್ಯಾತ್ಮಕವಾದ ಪ್ರೇಮಪತ್ರ ಮನಸಿಗೆ ಮುದನೀಡುವುದು ಸತ್ಯದ ಮಾತು....

- ಸುಧೇಶ್

shivu.k said...

ಧರಿತ್ರಿ....

ಅನಾಮದೇಯ ಹೆಸರಿನಲ್ಲಿ ಬಂದಿರುವ ಪ್ರತಿಕ್ರಿಯೆ ಚೆನ್ನಾಗಿದೆ...ಅವರು ಹೇಳುವುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ...ಅದು ಬರಹಗಾರರನ್ನು ತಿದ್ದುವ ಕಲೆಯೂ ಕೂಡ...

ಆದರೆ ಹೇಳುವ ಉದ್ದೇಶದಲ್ಲಿ ಹೆಸರನ್ನು ಹಾಕದಿದ್ದಲ್ಲಿ ಬರೆದಿರುವವರಿಗೆ ಅಂದರೆ ನಿನಗೆ ಬಂದ ಸಂಶಯ ನನಗೂ ಬರುತ್ತದೆ...ದಯವಿಟ್ಟು ಹೇಳುವ ಉದ್ದೇಶ ಸರಿಯಿದ್ದಮೇಲೆ ದೈರ್ಯವಾಗಿ ಹೆಸರು ಹಾಕಬಹುದಲ್ಲ....

ಧರಿತ್ರಿ said...

@ಗಿರಿ ನಮಸ್ತೆ. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಅಸೂಯೆ ಪಡಬೇಡಿ ಮಾರಾಯ್ರೆ..! ನಿಮ್ಮ ಹಾರೈಗೆಕೂ ಧನ್ಯವಾದಗಳು. ಎಲ್ರೂ ಬರೋಬ್ಬರಿ ಶುಭ ಹಾರೈಸಿಬಿಟ್ಟಿದ್ದೀರಾ..ಭಾಳ ಖುಷಿ ನಂಗೆ. ಬುಟ್ಟಿ ತುಂಬಾ ಹಾರೈಕೆ ಹೂವುಗಳಿವೆ..ಮುಂದೆ ಪ್ರಯೋಜಕ್ಕೆ ಬರಬಹುದೆಂದು! ಬರ್ತಾ ಇರಿ.

@ಸುಧೇಶ್..ಬರಹ ಮೆಚ್ಚಿದ್ದಕ್ಕೆ, ಪುರುಸೋತ್ತು ಮಾಡಿಕೊಂಡು ಅಫಿಸಿನಲ್ಲೇ ಓದಿದ್ದಕ್ಕೆ ಧನ್ಯವಾದಗಳು. ಬರೋಂದುಪ್ಪುಲೆ..ಮೋಕೆ ಉಪ್ಪಡ್. ಸೊಲ್ಮೆಲು.

@ಶಿವಪ್ರಕಾಶ್..ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

@ಶಿವಣ್ಣ..ಪ್ರೀತಿಯಿಂದ ಬೆನ್ನುತಟ್ಟಿದ್ದಕ್ಕೆ, ನನ್ನ ಬರಹದ ಕುರಿತು ವಸ್ತುನಿಷ್ಠ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.

-ಪ್ರೀತಿಯ,
ಧರಿತ್ರಿ

ಧರಿತ್ರಿ said...

@ಸುನಾಥ್ ಸರ್..
ಖುಷಿಯಾಗಿಬಿಟ್ಟೆ..ತುಂಬಾ ಮದುವೆ ಗೌಜಿಯಲ್ಲಿ ಬ್ಲಾಗಿಗೆ ಬರಲೇ ಇಲ್ಲವಲ್ಲ. ತುಂಬಾ ಥ್ಯಾಂಕ್ಸ್ ಸರ್. ಬರ್ತಾ ಇರಿ.
ಪ್ರೀತಿಯಿರಲಿ,
ಧರಿತ್ರಿ

Unknown said...
This comment has been removed by a blog administrator.
ಅಂತರ್ವಾಣಿ said...

ಪ್ರೇಮ ಪತ್ರ ಚೆನ್ನಾಗಿ ಬರೆಯುತ್ತೀರ.

ಧರಿತ್ರಿ said...

ಥ್ಯಾಂಕ್ಯೂ ಜಯಶಂಕರ್..
-ಧರಿತ್ರಿ