Wednesday, April 29, 2009

ನಿನ್ನ ಪ್ರೇಮದ ಪರಿಯ ನಾನರಿಯೆ...

ಒಲವಿನ ಗೆಳತೀ,
"ನಿದ್ದೆ ಬಾರದ ಕಣ್ಣ ಮೇಲೆ ಕೈಯ ಮುಗಿವೆ, ಚುಂಬಿಸು ಒಮ್ಮೆ..." ಎಂಬ ಹಾಡನ್ನು ನಿನ್ನೆ ನೀ ಫೊನಿನಲ್ಲಿ ಉಲಿದಾಗ ಯಾಕೋ ನಾನೊಮ್ಮೆ ಮೌನಿಯಾದೆ. ನನ್ನ ಮೌನದ ಹಿಂದಿರುವ ಅನಂತ ಚುಂಬನವನ್ನು ನೀ ಕಾಣಲೇ ಇಲ್ಲ ಗೆಳತೀ, ಅಣು ಅಣುವಿನಲ್ಲಿ ದೇವರನ್ನ ಕಂಡ ನನಗೆ, ನನ್ನ ಹೃದಯದಲಿ ಮಾತ್ರ ನೀ ಯಾಕೆ ಆವರಿಸಿರುವೆಯೆಂದು ಇನ್ನೂ ತಿಳಿದಿಲ್ಲ. ಧಮನಿಗಳು ನಿನ್ನ ತಪೋವನದ ಸುತ್ತ ಹರಿಯುವ ಜೀವ ನದಿಗಳಂತೆ ಅನಿಸುತ್ತಿವೆ. ನೆನಪಾದಾಗಲೆಲ್ಲಾ ಹುಣ್ಣಿಮೆಯೆಂದೆನುವ ನೀ, ನನ್ನಂತರಂಗದಲಿರುವ ಅಮವಾಸ್ಯೆಯ ಕತ್ತಲೆಯ ಆಳವನ್ನರಿಯದೆಯೆ ಪ್ರೀತಿಸಿರುವೆ. ಚಂದಿರ ಸೂಸುವ ತಂಪನ್ನು ಮಾತ್ರ ಅನುಭವಿಸಿರುವ ನೀನು, ಮಂಜಿನಾವೃತವಾದ ನನ್ನಂತರಂಗದ ಚಳಿಯನ್ನು ಸಹಿಸುವೆಯಾ? ಹೇಳು ಗೆಳತೀ, ನನ್ನ ಮೌನವನ್ನೇ ನಿನ್ನೆದೆಯ ಸ್ವಾತಿ ಮುತ್ತಾಗಿಸಲು ಹೊರಟಿರುವ ನಿನಗೆ, ನನ್ನ ನಿಶೆ ತುಂಬಿದ ಜೀವನದ ಪರಿಚಯವಿದೆಯೇ?

ನಿನ್ನ ಹೃದಯದ ಏಳಗಲದಲ್ಲಿ ತಲೆಯಿಟ್ಟು ಮಲಗುವ ಅದೃಷ್ಟವಿಲ್ಲದವನು ನಾನು ಗೆಳತೀ. ದಾರಿಯಲಿ ಬಿದ್ದಾಗ ಎದ್ದು ನಿಲಿಸುವ ನಿನ್ನ ಪ್ರೀತಿಯ ಮುಂದೆ ನಾ ಕೈಕಟ್ಟಿ ನಿಂತಿರುವೆ, ನನಗೆ ಮಾತುಗಳಿಲ್ಲ, ಮೌನವಷ್ಟೇ ಗೊತ್ತು. ನೀ ಕೊಟ್ಟ ಅಮ್ಮನ ವಾತ್ಸಲ್ಯ, ಅಕ್ಕನ ಮಮತೆ, ಒಲವಿನ ಗೆಳತಿಯಾಗಿ ಅಕ್ಕರೆಯ ಜೀವನ ಪ್ರೀತಿಗೆ ನಾ ಋಣಿ ಎಂದಷ್ಟೇ ಹೇಳಬಲ್ಲೆ. ನನಗೆ ತಿರುಗಿ ಕೊಡಲು ನನ್ನ ಕೈಯಲ್ಲಿ ಬಂಗಾರದ ಮೂಗುತಿ ಇಲ್ಲ, ಮಲ್ಲಿಗೆಯ ಹಾಸಿಗೆಯಿಲ್ಲ, ಮೊಸರನ್ನದ ಕನಸೂ ಇಲ್ಲ. ನಿನ್ನ ಕನಸ ನನಸಾಗಿಸುವ ಕಸುಬೂ ಇಲ್ಲ. ಸಾಧ್ಯವಿಲ್ಲದ ಕನಸುಗಳ ಕಟ್ಟಿ ಒಂಟಿಯಾಗುವ ನಿನ್ನ, ಹತ್ತಿರದಿಂದ ಸಂತೈಸುವ ಅವಕಾಶವಿದ್ದರೂ, ಮತ್ತೆಲ್ಲಿ ನನ್ನ ಎದೆಗೊರಗಿ ಮತ್ತೊಂದು ಕನಸ ಕಾಣುವೆಯಾ ಎಂಬ ಭಯ ನನ್ನೊಳಗೆ ಆವರಿಸಿಬಿಟ್ಟಿದೆ. ನಿನ್ನ ಬಿಟ್ಟು ಬೇರೆ ಯಾರೇ ನನಗೆ ಬದುಕಿನಾಸರೆ ಆದರೂ ಒಂಟಿಯೆಂದು ನಾನರಿವೆ. ಒಂಟಿ ಜೀವನ ನನ್ನ ವಿಧಿ ಬರಹ ಅಂದುಕೊಳ್ಳುವೆ ಗೆಳತೀ. ಹೃದಯ ತುಂಬಾ ಆವರಿಸಿರುವ ನಿನ್ನ ಬಿಟ್ಟು ಒಂಟಿತನವನ್ನೂ ಪ್ರೀತಿಸಲು ನಾನೊಲ್ಲೆ ಗೆಳತೀ. 'ನನ್ನ ದುಃಖಕ್ಕೆ ಹೆಗಲಾಗೆಂದು' ನಾ ಹೇಳಲಿಲ್ಲ ನಿಜ. ಆದರೆ, ನಿನ್ನ ನೋಡಿದ ಮೇಲೆ, ನಿನ್ನ ಜೀವನ ಪ್ರೀತಿಯ ಕಂಡ ಮೇಲೆ ನಾ ಕಣ್ಣೀರಾಗಲಿಲ್ಲ. ಕತ್ತಲನ್ನು ಮೆಟ್ಟಿ ನಿಂತು ಬೆಳಕನ್ನು ಕಾಣುವ ಪಾಠ ಹೇಳಿದವಳು ನೀನು. ನೀನೂ ನನ್ನ ಪಾಲಿಗೊಂದು ಬೆಳಕಿನ ಗುರು ಅಲ್ವಾ?

ನನ್ನ ಸುತ್ತಮುತ್ತಲಿನ ಜನ ದೇಶ ಭಾಷೆ ಕಲಿಯುವುದು ಭರವಸೆಯ ಹೊಂಗಿರಣವಲ್ಲ, ಹೌದು ಗೆಳತೀ, ನನ್ನ ನಗುವಿಗೆ, ಪ್ರೀತಿಗೆ ಸಂಸ್ಕೃತಿಯ ಕಟ್ಟಲೆಗಳಿರಲಿಲ್ಲ, ಹೌದು. ನಗರ ಚೆನ್ನಾಗಿದೆಯೆಂದು, ಹಳ್ಳಿಯ ಜನರೆಲ್ಲ ನಗರದಲ್ಲಿ ನೆಲೆಸಲಾಗುತ್ತದೆಯಾ? ಹಳ್ಳಿಯಲೇ ಅಲ್ಲವಾ ನೀವು ತಿನ್ನುವ ಭತ್ತ ಗೋಧಿ ಬೆಳೆಸುವುದು? ಅವರೆಲ್ಲಾ ಅಲ್ಲಿದ್ದರೇ ಚಂದವಲ್ಲವಾ? ಅಮ್ಮ, ಸಮಾಜ ಕಲಿಸಿದ 'ಸಂಸ್ಕೃತಿ'ಯನ್ನು ಹ್ಯಾಗೆ ಮೀರಲಿ ಹೇಳು? ಇಲ್ಲೇ ಹುಟ್ಟಿ, ಇಲ್ಲೇ ಬೆಳೆದ ನನಗೆ ಮಬ್ಬು ಬದುಕು ಚಂದವೇ ಗೆಳತಿ. ಇಲ್ಲೂ ಜೀವನ ಪ್ರೀತಿ ಇದೆ ಗೆಳತೀ. ಹುಣ್ಣಿಮೆಯ ಬೆಳದಿಂಗಳು, ಚಂದಿರನ ತಂಪನ್ನು ಅನುಭವಿಸಿರುವ ನಿನ್ನಲ್ಲಿ ಇದೊಂದು ಸತ್ಯವನ್ನು ಬಿಚ್ಚಿಟ್ಟಿರುವೆ.
ನಾ "ತೆರೆದಿದೆ ಮನೆ ಓ ಬಾ ಗೆಳತಿ..." ಎಂದು ಕರೆದೆಯೆನ್ನುವುದು ಸರಿ. ಕತ್ತಲನ್ನೇ ಹೊದ್ದು ಮಲಗಿರುವ ನನ್ನಲ್ಲಿ ನಿನಗೆ ಅದೇನು ಆಕರ್ಷಣೆ? ದೂರದಲ್ಲಿರುವ ಬೆಟ್ಟ ಸುಂದರವೆನ್ನುವ ನಾಣ್ಣುಡಿಯನ್ನು ಮರೆತು ನಿನ್ನ ನೋಡಿ ಮುಗುಳ್ನಕ್ಕೆ, ನಿನ್ನ ಜೀವನಪ್ರೀತಿಯನ್ನು ನೋಡಿ ಮೈಮರೆತೆ. ನೀನು ನಗುವ ಪರಿಯನ್ನು ಕಂಡು ಕನಸ ಕಂಡೆ, ಎಚ್ಚ್ರವಾದಾಗ ನೀ ತುಂಬ ಹತ್ತಿರವಿದ್ದರೂ ನನ್ನೊಳಗಿನ ಕತ್ತಲಿನ ಅರಿವಾಗಿ ಧಡ್! ಅಂತ ಕದ ಮುಚ್ಚಿದೆ. ಕಾಲ ಕಲಿಸುವ ಬದುಕಿಗೆ ನಾ ಯಾಕೆ ಬಂದಿಯಾಗುವೆನು ಎಂದು ಹೇಗೆ ತಿಳಿಯಪಡಿಸಲಿ ನಿನಗೆ? ನೀ ಮದುವೆಯಾಗಿ ಎರಡು ಮಕ್ಕಳ ಹೆತ್ತ ಮೇಲೆ ನೀ ಇದನ್ನೇ ನಿನ್ನ ಇನಿಯನ ಕೇಳು ಗೆಳತೀ.
ಜೋಗ್ ಜಲಪಾತವೇ ನಾಚುವಂತೆ ನಿನ್ನ ಚುಂಬಿಸುವ ನನ್ನ ಕನಸನ್ನು ಹೇಳಿದರೆ, ನೀ ಎಲ್ಲಿ ಹುಸಿಮುನಿಸು ತೋರಿಸುವೆಯೆಂದು ಹೇಳಿಲ್ಲ ನಿನಗೆ. ನಿನ್ನ ಹುಸಿಮುನಿಸೂ ನನ್ನ ಮನಸನ್ನು ಅಲ್ಲೋಲಕಲ್ಲೋಲ ಮಾಡುವಾಗ, ನನ್ನ ದು:ಖವನ್ನು ಹೇಳಿ, ಎಲ್ಲಿ ನಾ ನಿನ್ನ ಮನಸನ್ನು ಬೇಸರಿಸುವಂತೆ ಮಾಡುವೆನೋ ಎನ್ನುವ ದುಗುಡ ನನ್ನದು. ನನ್ನ ದು:ಖಗಳ ಬದುಕನ್ನು ನೀ ಅಪ್ಪಿಕ್ಕೋಳ್ಳುವೆಯೆಂದು ಹೇಳಿದಾಗ, ನನಗೆ ಇಷ್ಟೊಂದು ಪ್ರೀತಿಯ ಧಾರೆಯನ್ನೀಯುವಾಗ, ನಿನ್ನ ಕಾಲುಗಳ ಮುಟ್ಟಿ ನಮಸ್ಕರಿಸಿ ಧನ್ಯನಾಗುವ ಹಂಬಲವಾಗುತ್ತಿದೆ...ಏನೆನ್ನಲೀ ಗೆಳತೀ,
ಮೊಂಬತ್ತಿಯಲ್ಲೇ ಜೀವನ ಪ್ರೀತಿ ಪಡೆಯುವ ನಿನ್ನ ಮಲ್ಲಿಗೆ ಮನಸ್ಸಿನ ಸಣ್ಣ ಬಜೆಟ್ ಕನಸುಗಳಿಗೆ ನಾ ಅನಂತ ಋಣಿ.
ಬೇಸರಿಸದಿರು ಗೆಳತೀ...ನಿನ್ನ ಗುಲಾಬಿ ಹೃದಯದ ಕದ ತೆರೆದು ಒಮ್ಮೆ ಇಣುಕಿ ನೋಡು. ನಾ ನಲ್ಲೇ ನೆಲೆಸಿರುವೆ.
ಮತ್ತದೇ ಹಾಡಿನ ಗುನುಗು,
ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸ್ಸು
ಹುಣ್ಣಿಮೆಯ ರಾತ್ರಿಯಲಿ
ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
ನಿನ್ನೋಳಿದೆ ನನ್ನ ಮನಸ್ಸು
ಇತಿ,
ನಿನ್ನವನು

24 comments:

ಸಾಗರದಾಚೆಯ ಇಂಚರ said...

ಧರಿತ್ರಿ,
ನಿಮ್ಮ ಪ್ರೇಮಪತ್ರಗಳು ದಿನದಿಂದ ದಿನಕ್ಕೆ ಅಧ್ಭುತವಾಗಿ ಬರುತ್ತಿವೆ, ಎಲ್ಲೋ ಒಂದು ಸಣ್ಣ ಡೌಟ್ ಇದೆ. ಯಾರಿಗಾಗಿ ಇ ಪತ್ರ ಅಂತ. ಯಾಕಪ್ಪಾ ಅವಳ ಸತಾಯಿಸ್ತ ಇದಿಯಾ,, ಒಮ್ಮೆ ಹುಡುಗನಾಗಿ ಬರಿತಿರ, ಮತ್ತೊಮ್ಮೆ ಹುಡುಗಿಯಾಗಿ. ಆದರೆ ಬರವಣಿಗೆಯಲ್ಲಿ ಒಂದು ಹಿಡಿತವಿದೆ. ಬರೆಯುವ ಶೈಲಿ ತುಂಬಾ ಹಿಡಿಸಿತು. ಹೀಗೆಯೇ ಪತ್ರಗಳನ್ನು ಬರೆಯುತ್ತಿರಿ, ಬರುತ್ತಿರುತ್ತೇವೆ,

Shankar Prasad ಶಂಕರ ಪ್ರಸಾದ said...

ಯಾಕೋ ಸಖತ್ Boring ಅನ್ಸುತ್ತೆ ಈ ಎರಡೂ ಲವ್ ಲೆಟರುಗಳು.
ಪ್ರೇಯಸಿ ಹಾಗು ಪ್ರಿಯತಮ ಮಾತಾಡುವ ಶೈಲಿ ಬಹಳ ನಾಟಕೀಯ (Dramatic)ಹಾಗು ಪುಸ್ತಕದ ಭಾಷೆಯಲ್ಲಿ ಇದೆ. ಮಾಮೂಲಾಗಿ ಆಡುಭಾಷೆಯಲ್ಲಿ ಬರೆದರೆ ಸ್ವಲ್ಪ ಎಫೆಕ್ಟ್ ಇರ್ತಾ ಇತ್ತು.
ಯಾಕೋ ಬರಹದಲ್ಲಿ ರವಿ ಬೆಳಗೆರೆಯ "ಲವಲವಿಕೆ" ಅಂಶ ಕಾಣುಸ್ತಾ ಇದೆ.
ಇದು ಸಿನ್ಸಿಯರ್ ಆಗಿ ನನ್ನ ಅಭಿಪ್ರಾಯ. ದಯವಿಟ್ಟು ಬೇಜಾರಾಗಬೇಡಿ ಧರಿತ್ರಿ.
ಅದ್ಸರಿ, ನೀವು ಪ್ರೇಯಸಿಯಾಗಿ ಲೆಟರ್ ಬರೆದಾಗ ಎಲ್ರೂ ಡೌಟು ಪಡ್ತಾ ಇದ್ರೂ ಅಂತಾ ಪ್ರಿಯಕರನ
ರಿಪ್ಲೈ ಕೂಡಾ ನೀವೇ ಬರೆದಿರೋ ಹಾಗಿದೆ? ಏನ್ ಸಮಾಚಾರ?
ಏನೀ ಗುಡ್ ನ್ಯೂಸ್ ? ನಿಜ ಹೇಳಿ ಧರಿತ್ರಿ..
ಏನೇ ಇರ್ಲಿ, ಆಲ್ ದಿ ಬೆಸ್ಟ್

ಕಟ್ಟೆ ಶಂಕ್ರ

sunaath said...

ಕೆ.ಎಸ್.ಎನ್. ಅವರ ಕವನದ ಸಾಲುಗಳಿಗೆ ಅದ್ಭುತವಾದ ಹಿನ್ನೆಲೆ ಒದಗಿಸಿದ್ದೀರಿ.

ಮಲ್ಲಿಕಾರ್ಜುನ.ಡಿ.ಜಿ. said...

ನಿಮ್ಮ ದೇವದಾಸನಿಗೆ ಮನೋಭಿಲಾಷೆ ಮತ್ತು ತನ್ನ ಪ್ರೇಮ ಲಭಿಸಲಿ ಎಂದು ಆಶಿಸುತ್ತೇನೆ. ಹಾಗೂ ಈ ಪತ್ರ ಹಾಗೂ ಆಶಯ ಅವನ ಹುಡುಗಿಗೆ ಅರ್ಥವಾಗಲಿ, ವ್ಯರ್ಥವಾಗದಿರಲಿ. ಪ್ರೇಮ ಪತ್ರಗಳ ಹೊಸ ಟ್ರೆಂಡ್ ಸೃಷ್ಟಿಸುತ್ತಿರುವ ಧರಿತ್ರಿಯವರಿಗೆ ಈ ಕೃಷಿಯಿಂದಾಗಿ ಒಂದು ಸಂಕಲನ(ಪುಸ್ತಕ) ತರುವಂತಾಗಲಿ ಎಂಬ ಸವಿ ಹಾರೈಕೆಗಳು.

ಧರಿತ್ರಿ said...

@ಗುರುಮೂರ್ತಿ ಸರ್.. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಸಂಶಯ ಎಲ್ಲಾ ಬೇಡ..ಅಂಥದ್ದೇನೂ ಇಲ್ಲ. ನೀವೇ ಸಲಹೆ ನೀಡಿದ್ರಲ್ಲಾ..ಪ್ರೇಮ ಪತ್ರದಲ್ಲಿ ಪಿಎಚ್ ಡಿ ಮಾಡೀಂತ. ಅದಕ್ಕೆ ಇದೆಲ್ಲ ಸಿದ್ಧತೆ ..(:)

@ಶಂಕ್ರಣ್ಣ..ಛೇ ಛೇ! ಬೋರ್ ಅನಿಸಿಬಿಡ್ತಾ? ಏನು ಮಾಡೋದು ಹೇಳಿ ಶಂಕ್ರಣ್ಣ..ಪ್ರೇಮ ಪತ್ರ ಬರೆಯೋದು ನನ್ನ ಹವ್ಯಾಸಗಳಲ್ಲಿ ಒಂದು. ಕಂಡಿದ್ದನ್ನು, ನೋಡಿದ್ದನ್ನು, ಕೇಳೋ ಸುಂದರ ಭಾವಗೀತೆಗಳನ್ನು 'ಅನುಭವಿಸಿ' ಬರೆಯುತ್ತಾ ಹೋಗಿಬಿಡ್ತೀನಿ ಮಾರಾಯ..ನಿಮಗೆ ಬೋರ್ ಆಗುತ್ತೆ ಅಂತೇಳಿ ನನಗೆ ಬರೆಯದೆ ಇರಕ್ಕೂ ಆಗ್ತಿಲ್ಲ.

ಮತ್ತೆ ರವಿಬೆಳಗೆರೆಯ ಶೈಲಿ ಅಂದುಬಿಟ್ಟಿರಿ. ರವಿ ಬೆಳಗರೆಯ ಬರವಣಿಗೆ ಬಗ್ಗೆ ನನಗೆ ಓದಿ ಗೊತ್ತು..ಆದರೆ ಅವರ ಲವ್ ಲವಿಕೆ ನಾನಿನ್ನೂ ಓದಿಲ್ಲ. ರವಿ ಬೆಳಗೆರೆ ತುಂಬಾ ಸಿಂಪಲ್ಲಾಗಿ ಪದಗಳನ್ನು ಫೋಣಿಸ್ತಾ ಹೋಗ್ತಾರೆ..ಆದರೆ ನನ್ನ ಪ್ರತಿ ಬರಹದಲ್ಲೂ ಕಾಣೋದು ಭಾವನೆಯ ಭಾವಗೀತೆಗಳನ್ನೋದು ನನಗೆ ಚೆನ್ನಾಗಿ ಗೊತ್ತು.

ಇನ್ನು ನಾಟಕೀಯ ಶೈಲಿ..ಇದು ನಿಮ್ಮ ಹೊಸ ವಿಮರ್ಶೆ..ಈ ಕುರಿತಾಗಿ ಮತ್ತೊಮ್ಮೆ ನನ್ನ ಬರಹದ ಬಗ್ಗೆ ಅವಲೋಕಿಸುವೆ. ನಿಮ್ಮ ಅಭಿಪ್ರಾಯಕ್ಕೆ ಮುಕ್ತ ಸ್ವಾಗತ ಶಂಕ್ರಣ್ಣ. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಬರ್ತಾ ಇರಿ ಹೀಗೇ..


@ಸುನಾಥ್ ಸರ್..ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.

@ಮಲ್ಲಿಯಣ್ಣ..ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಮಲ್ಲಿಯಣ್ಣ. ಮತ್ತೆ ದೇವದಾಸ ಎಂಥದ್ದೂ ಇಲ್ಲ..ಸುಮ್ಮ ಸುಮ್ಮನೆ ಗೀಚಿದ್ದು ಅಷ್ಟೇ.

-ಪ್ರೀತಿಯಿಂದ,
ಧರಿತ್ರಿ

PARAANJAPE K.N. said...

ಧರಿತ್ರಿ,
ಇವತ್ತಿನ ಕಾಲದ ಹುಡುಗ-ಹುಡುಗಿಯರಿಗೆ ಪ್ರೇಮಪತ್ರ ಬರೆಯುವುದಿರಲಿ, ಮೊಬೈಲಿನಲ್ಲಿ ಒ೦ದು ಸಾಲಿನ ಮೆಸೇಜ್ ಕುಟ್ಟುವುದಕ್ಕೂ ವ್ಯವಧಾನವಿರುವುದಿಲ್ಲ. ಮೆಸೇಜನ್ನು ಕೂಡ short form ನಲ್ಲಿ ಕಳಿಸುತ್ತಾರೆ. ಬಹುಶಃ ನೀನು ಬರೆದ ಪ್ರೇಮಪತ್ರ ಇ೦ದಿನ ಲವರ್ಸ್ ಗೆ ಅಪಥ್ಯವೆನಿಸಬಹುದು, ಆದರೆ ಪತ್ರದೊಳಗಿನ ಹೂರಣ ಚೆನ್ನಾಗಿದೆ, ಕಾವ್ಯಾತ್ಮಕವಾಗಿದೆ. ಸ್ವಲ್ಪ ನಾಟಕೀಯತೆಯೂ ಇದೆ. ಪ್ರೇಮಿಗಳ ಮಧ್ಯೆ ಅದೂ ಇರುತ್ತದೆಯಲ್ವಾ, ಒಬ್ಬರನ್ನೊಬ್ಬರು ಮೆಚ್ಚಿಸಲು ಬಳಸುವ ತ೦ತ್ರಗಳಲ್ಲಿ ಇದು ಒ೦ದೆನಬಹುದು. ಎರಡೂ ಕಡೆಯ ಪ್ರೇಮಪತ್ರಗಳನ್ನು ನೀನೆ ಬರೆದಿದ್ದಿಯಾದ್ದರಿ೦ದ, ಪ್ರೇಮಪತ್ರ ಎ೦ಬ ವಿಷಯದಲ್ಲಿ ಪಿ.ಎಚ್.ಡಿ ಮಾಡಲು ತಾಲೀಮು ನಡೆಸುತ್ತಿದ್ದಿ ಎ೦ದು ಭಾವಿಸಲೇ ? ಸಾಕಿನ್ನು, ಈ ಪ್ರೇಮಪತ್ರಗಳ ಗು೦ಗಿನಿ೦ದ ಹೊರಗೆ ಬಾ, ಇದು ನನ್ನ ಆಪ್ತ ಸಲಹೆ.

ಧರಿತ್ರಿ said...

ಪರಾಂಜಪೆಯಣ್ಣ...
ಬರಹ ಮೆಚ್ಚಿದ್ದಕ್ಕೆ, ಆಪ್ತ ಸಲಹೆ ನೀಡಿದ್ದಕ್ಕೆ ಧನ್ಯವಾದಗಳು. ಆದರೆ ನಾಟಕೀಯತೆ ಅನ್ನೋ ಶಬ್ದದ ಕುರಿತು ನನಗಿನ್ನೂ ವಿವರವಾದ ಮಾಹಿತಿ ಬೇಕಿದೆ..ನನ್ನ ಬರಹದ ಬೆಳವಣಿಗೆಯ ಉದ್ದೇಶದಿಂದ. ಈಗಿನ ಪ್ರೇಮಿಗಳು ಮೊಬೈಲಿನಲ್ಲೇ ಪ್ರೇಮ ಸಂದೇಶ ಕಳಿಸುತ್ತಿರಬಹುದು..ಹಾಗಾಗಿ ನನ್ನ ಬರಹ ಅವರಿಗೂ ಆಪಥ್ಯವೆನಿಸಬಹುದು..ಇರಲಿ ಬಿಡಿ. ಯಾವ ಪ್ರೇಮಿಗಳೂ ನನ್ನ ಬರಹ ನೋಡಿ ವಾಹ್! ಹೀಗೇ ನಾವು ಬರೆಯಬೇಕು..ಎಂದು ಉದ್ಘಾರ ತೆಗೆಯಬೇಕೆಂದು ನಾನು ಇಚ್ಚಿಸುವುದಿಲ್ಲ. ಪ್ರೇಮ ಪತ್ರ ಬರೆಯುವುದೂ ಒಂದು ಕಲೆ..ಪ್ರೇಮಿಸುವ ಕಲೆ ಗೊತ್ತಿಲ್ಲದಿದ್ದರೂ! ಪ್ರೇಮ ಪತ್ರಗಳ ಗುಂಗಿನಲ್ಲಿ ನಾನಿಲ್ಲ..ಆದರೆ ಕಳೆದ ವಾರ ಬರೆದ ಪತ್ರಕ್ಕೆ ಈ ಪತ್ರದಲ್ಲಿ ಉತ್ತರಿಸಿದರೆ..ಜುಗಲ್ ಬಂದಿ ತರ ಚೆನ್ನಾಗಿರುತ್ತೆ ಅನ್ನೋದು ನನ್ನ ಭಾವನೆಯಾಗಿದ್ರಿಂದ ನಾನು ಬರೆದೆ. ಇನ್ನು ಮುಂದೆಯೂ ಆಗಾಗ ಬರೀತಾ ಇರ್ತೀನಿ..ಯಾಕಂದ್ತೆ ಪ್ರೇಮ ಪತ್ರ ಬರೆಯೋದು ನನಗಿಷ್ಟ. ಹೀಗೇ ಬರ್ತಾ ಇರಿ..ನಿಮ್ಮ ಅಭಿಪ್ರಾಯಕ್ಕೆ ಮುಕ್ತ ಸ್ವಾಗತ.

-ಧರಿತ್ರಿ

ಸುಧೇಶ್ ಶೆಟ್ಟಿ said...

ನಿಮ್ಮ "Ph.D" ಪ್ರೋಗ್ರಾಮಿಗೆ ಧನ್ಯವಾದಗಳು... ಆದಷ್ಟು ಬೇಗ ಡಾಕ್ಟರೇಟ್ ಪದವಿ ಸಿಗಲಿ:)

ಪ್ರೇಮ ಪತ್ರ ಭಾವನಾತ್ಮಕವಾಗಿಯಾಗಿ ಇದ್ದರೂ ಚೆನ್ನಾಗಿರುತ್ತೆ ... ಆಡು ಭಾಷೆಯಲ್ಲಿದ್ರೂ ಚೆನ್ನಾಗಿರುತ್ತೆ. ಪ್ರೇಮಪತ್ರ ತೆಗೆದುಕೊಳ್ಳುವವರು ಯಾವ ಮನಸ್ಥಿತಿಯವರು ಅನ್ನೋದು ಮುಖ್ಯವಾಗುತ್ತೆ...

ಎ೦ದಿನ೦ತೆ ಚೆನ್ನಾಗಿದೆ ಬರಹ...

ಮೂರ್ತಿ ಹೊಸಬಾಳೆ. said...

ಧರಿತ್ರಿ ಅವರೇ ನಿಮ್ಮ ಪ್ರೇಮಪತ್ರ ಗಳನ್ನು ಕಾಪಿರೈಟ್ ರಿಜಿಸ್ಟರ್‍ ಮಾಡಿಸಿಡಿ ಇಲ್ಲವಾದರೆ ನನ್ನಂತವರು ಕದ್ದು ಪ್ರೇಯಸಿಗೆ ಕೊಟ್ಟು ಬಿಟ್ಟಿ ಸ್ಕೋಪ್ ತೆಗೆದುಕೊಳ್ಳುವ ಸಾದ್ಯತೆ ಇದೆ.

ಬಾಲು said...

dharithri avare yaarigaagi e pathra galu?

sikkapatte doubt bartha ide. uthkatavaagi preethisada horathu e thara bareyalu sadya illa ansutte.
nimge good luck.

amele pathra bareetha iri. naavu odi kushi padtha irthivi!!!

ಬಿಸಿಲ ಹನಿ said...

ಧರಿತ್ರಿಯವರೆ,
ನಿಮ್ಮ ಪ್ರೇಮ ಪತ್ರ ಓದಿದ ಮೇಲೆ ನಿಜಕ್ಕೂ ನಿಮ್ಮ ಮೇಲೊಂದು crush ಬೆಳಿತಾ ಇದೆ! I wish I were your lover. Sorry, don't mistake me otherwise. Just kidding!!
ನಿಮ್ಮ ಪತ್ರದಲ್ಲಿನ ಒಂದೊಂದು ಪದವೂ ಒಂದೊಂದು ಹಾಡನ್ನು ಹಾಡುತ್ತದೆ. ನಿಮ್ಮ ಭಾಷೆ ಭಾವಗೀತೆಯಾಗಿದೆ. Keep it up.

Unknown said...

ಧರಿತ್ರಿ,
ನಿಮ್ಮ ಭಾವಗದ್ಯ ಮನಮುಟ್ಟುವಂತಿದೆ, ಪ್ರೇಮಿಸುವ ಜೀವಗಳಿಗೆ ಟಾನಿಕ್ ನ೦ತಿದೆ. ತು೦ಬ ಚೆನ್ನಾಗಿದೆ ಪದಜೋದಣೆ, ಹ್ಯಾಟ್ಸ್ ಅಪ್

ಧರಿತ್ರಿ said...

@ ಸುಧೇಶ್..ನಮಸ್ತೆ. ನಿಮ್ಮ ಹಾರೈಕೆ ನನ್ನ ಬುಟ್ಟಿಗೆ ಹಾಕೋತೀನಿ ಸರೀನಾ?

@ಮೂರ್ತಿ ಸರ್..ಹಿಹಿಹಿ ..ಪರ್ವಾಗಿಲ್ಲ ಕದ್ದುಬಿಡಿ! ಇನ್ನೂ ಚೆನ್ನಾಗಿ ಬರೆದುಬೇಕಾದ್ರೆ ಕೊಡೋಣ..!!! ಧನ್ಯವಾದಗಳು

@ಬಾಲು ಸರ್..ಇದೆಳ್ಲೋ ಕತೆಯಾಯ್ತಲ್ಲಾ...ಎಲ್ಲವೂ ಟೈಂಪಾಸ್ ಮಾಡೋಕೆ. ಸುಮ್ ಸುಮ್ ನೆ!

@ಬಿಸಿಲ ಹನಿ ಉದಯ್ ಸರ್..ಏನ್ ಭಾಳ ತಮಾಷೆ ಮಾಡ್ತಿರಲ್ಲಾ..ಮಾಡಿ! ಎಲ್ರೂ ಕಾಲೆಯೋದ್ರಲ್ಲೇ ನಿಸ್ಸೀಮರು. ಇರಲಿ ಬಿಡಿ..! ಧನ್ಯವಾದಗಳು ಸರ್.

@ಗುರುರಾಜ್..ನಮಸ್ತೆ.
ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಬರ್ತಾ ಇರಿ.

-ಧರಿತ್ರಿ

ಜಲನಯನ said...

ಡಾ. ಧರಿತ್ರಿ ಯವರಿಗೆ ಮುಂಗಡ ಡಾಕ್ಟರೇಟ್ ಕೊಡ್ತೀದ್ದೀನಿ ಅಂದ್ಕೋಬೇಡಿ...
ಈ ನಿಮ್ಮ ನಿವೇದನೆ, ಮನಭಾವ ಸಂಭೋಧನೆ, ಪೋಣಿಸಿದ ಅಂದದ ಮಣಿಗಳಂತೆ ಮಿರುಗುವ ಪದ-ಪದ ವಿಕಾಸ ಸರಣಿ, ಹೇಳಿಯೂ ಹೇಳದಂತೆ ಕಂಡರೂ ಮನಮುಟ್ಟುವ ಸಂವೇದನೆಯನ್ನರಹುವ ಪರಿ,....etc... ಇದು ಕವಿತೆಯೋ, ಕವನವೋ, ಗದ್ಯವೋ..ಪದ್ಯವೋ ಎಂಬ ಜಿಗ್ಯಾಸೆ (ಆ ಅಕ್ಷರ ಸಿಗಲಿಲ್ಲ..sorry)
ಇದಕ್ಕೇ ನಾನು ನಿಮಗೆ ಮುಂಗಡ ಪಿ.ಎಚ್.ಡಿ ಕೊಟ್ಟಿದ್ದು.
ಒಬ್ಬೊಬ್ಬರದೂ ಒಂದೊಂದು ರೀತಿಯ ಶೈಲಿ..ಅದನ್ನು ಹೀಗೆಯೇ ಇದೆ..ಹಾಗಿದ್ದರೆ ಚನ್ನಾಗಿರುತ್ತೆ ಎನ್ನುವುದು ಅವರ ವೈಯಕ್ತಿಕ ಅನಿಸಿಕೆ ಮಾತ್ರ..ಅಲ್ಲವೇ..?
ನಿಮ್ಮ ಈ ಮಿಶ್ರಿತ ಶೈಲಿಯ fan ನಾನು...
ಅಂದಹಾಗೆ...ಲವ್ ಲೆಟರ್ ಬರೆಯುವುದು ಅಭ್ಯಾಸ..ಎಂದಿರುವಿರಲ್ಲ...???!! ಈಗ confusion ಆಗ್ತಿದೆ..ಇದು ಪಿ.ಎಚ್.ಡಿ ಗೋ ಅಥವಾ..ಜೀ.ಎಸ್.ಎಚ್ ಓ..?? ಎಂದು..(ಜಿವನ ಸಂಗಾತಿಯ ಹುಡುಕಾಟ...ಹಹಹಹ)
Final Word
ಬರವಣಿಗೆ ಬೊಂಬಾಟ್ ಧರಿತ್ರಿ..ಮುಂದುವರೆಸಿ..ಹೀಗೇ ನಮ್ಮ ಮನೆಗೂ ಬರುತ್ತಿರಿ...

ಧರಿತ್ರಿ said...

ಜಲನಯನ ಸರ್...ಧರಿತ್ರಿಗೆ ಮುಂಗಡ ಡಾಕ್ಟರೇಟ್ ನೀಡಿದ್ದಕ್ಕೆ ತುಂಬಾ ಕೃತಜ್ಞತೆಗಳು ಸರ್. ನಂಗೆ ತುಂಬಾ ಖುಷಿಯಾಗ್ತಿದ್ದೆ..ಲಂಚ-ಗಿಂಚ ಏನೂ ಕೊಡದೆ ಪುಕ್ಸಟ್ಟೆಯಾಗಿ ಡಾಕ್ಟರೇಟ್ ಸಿಗ್ತಲ್ಲಾ ಅಂತ!!! ಜಿವನ ಸಂಗಾತಿಯ ಹುಡುಕಾಟ..ಅಂತದ್ದೇನೂ ಇಲ್ಲ..ಸರ್. ಸುಮ್ ಸುಮ್ ನೆ ಸಂಶಯದಿಂದ ಹೊರಬಂದುಬಿಡಿ ಸರ್. ಡೌಟು ಏನೂ ಬೇಡ..! ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು ಸರ್. ಬರ್ತಾ ಇರಿ.

-ಧರಿತ್ರಿ

ಅಂತರ್ವಾಣಿ said...

ನಿಮ್ಮ ಗೆಳೆಯ ಕೂಡ ಚೆನ್ನಾಗಿ ಬರಿತಾನೆ ಪ್ರೇಮ ಪತ್ರವ.

ಹರೀಶ ಮಾಂಬಾಡಿ said...

munduvariyali...GURI MUTTIVA TANAKA

ಶಿವಪ್ರಕಾಶ್ said...

ಒಳ್ಳೆ ಲವ್ ಲೆಟರ್.
ನನ್ ಹುಡುಗಿಗೆ ಇದನ್ನೇ ಕೊಡ್ತೀನಿ..
copy rights purchase ಮಾಡಬೇಕಾ ? :P

shivu.k said...

ಧರಿತ್ರಿ,

ಲೇಖನ ತುಂಬಾ ಕಾವ್ಯಾತ್ಮಕವಾಗಿದೆ...ದೇವದಾಸನ ಮನಸ್ಸಿನ ಭಾವನೆಗಳನ್ನು ಕಟ್ಟಿಕೊಟ್ಟಿವೆ. ಅದ್ರೂ ವಾಸ್ತವಿಕ ದೇವದಾಸನ ಅನುಭವ ಹೇಗಿರುತ್ತದೆ ಅಂತ ತಿಳಿಯಲು ನೀನೊಮ್ಮೆ "ಕ್ಯಾಸ್ಟ್ ಆವೇ" ಚಲನಚಿತ್ರವನ್ನು ನೋಡುವುದೊಳಿತು...

ಮುಂದೆ ವಾಸ್ತವಿಕ ಲೇಖನಗಳನ್ನು ನೀರೀಕ್ಷಿಸುತ್ತಾ...

ಧನ್ಯವಾದಗಳು.

ಧರಿತ್ರಿ said...

@ಜಯಶಂಕರ್, ಹರೀಶ್ ಸರ್..ಪ್ರತಿಕ್ರಿಯೆಗೆ ಧನ್ಯವಾದಗಳು.

@ಶಿವಪ್ರಕಾಶ್..ಕೊಡಿ ಕೊಡಿ ನಿಮ್ ಹುಡುಗಿಗೆ. ಕೊನೆಗೆ ಧರಿತ್ರಿ ಬರೆದು ಕೊಟ್ಳು ಅನ್ನಿ ಆಯಿತಾ? ಶುಭವಾಗಲೀ..(:)

@ಶಿವಣ್ಣ...ನೀವು ಹೇಳಿದ ಸಿನಿಮಾ ನೋಡುವೆ. ಧನ್ಯವಾದಗಳು

-ಧರಿತ್ರಿ

NADIPREETI said...

ಪ್ರೀತಿಯ ಧರಿತ್ರಿ
ಹೇಗಿದೀರಾ? ನಿಮ್ಮ ಪ್ರೇಮ ಪತ್ರಗಳನ್ನು ಓದಿದೆ. ಚೆನ್ನಾಗಿವೆ. ಆದರೆ ಎಲ್ಲೂ ಲವಲವಿಕೆ ಇಲ್ಲ. ಇಂಥ ಬರವಣಿಗೆಗೆ ಸ್ವಲ್ಪ ತುಂಟತನ ಬೇಕು ಅನಿಸುತ್ತೆ. ತಾಜಾತನವೂ ಬೇಕು. ಗದ್ಯದಲ್ಲಿ ಚೂರು ಪದ್ಯದ ಮಿಕ್ಸಿಂಗ್ ಇದ್ದರೇ ಚೆನ್ನ.ಅಲ್ಲಿ ಕೆಣಕುವ, ಕಾಡುವ, ರೊಮ್ಯಾಂಟಿಕ್ ತನ ಇರಬೇಕು. ಆಗ ಈ ಥರಹದ ಬರವಣಿಗೆಗೆ ಹದ ಬರುತ್ತದೆ. ಇಲ್ಲ ಅಂದ್ರೆ ಬೋರ್ ಹೊಡೆಸುತ್ತದೆ ಅನ್ನುವುದು ನನ್ನ ಅನಿಸಿಕೆ.
ಪ್ರೇಮ ಪತ್ರಗಳಲ್ಲಿ ತಾಜಾತನ ಕೊಟ್ಟವರು ರವಿಬೆಳಗೆರೆ. ಹಾಗೇ ಬರೀಬೇಕು ಅಂತೇನಿಲ್ಲ. ನಿಮ್ಮದೇ ಶೈಲಿಯಲ್ಲಿ ಪ್ರೀತಿಯ ನವಿರಿಗೆ ಜೀವ ತುಂಬಿದರಾಯ್ತು.
ಇನ್ನೇನಿಲ್ಲ.
ನಿಮ್ಮ ಪ್ರೇಮ ಪತ್ರದ ಪಯಣ ಮುಂದುವರೆಯಲಿ.
ರವಿ ಅಜ್ಜೀಪುರ

ಧರಿತ್ರಿ said...

ಅಜ್ಜಿಪುರ ಸರ್..
ನೀವಂದಿದ್ದು ನಿಜ. ನನ್ನ ಪುಟ್ಟ ಮನೆಗೆ ಬಂದು ಬೆನ್ನು ತಟ್ಟಿದ್ದಕ್ಕೆ ಧನ್ಯವಾದಗಳು ಸರ್. ಟೈಮ್ ಸಿಕ್ಕಾಗ ಬರ್ತಾ ಇರಿ.
-ಧರಿತ್ರಿ

Unknown said...

ನಿಮ್ಮ ಬೇರೆ ಪತ್ರಗಳನ್ನು ಇನ್ನೂ ಓದಿಲ್ಲ..ಸಧ್ಯದಲ್ಲೇ ಓದ್ತೀನಿ.
ಈ ಪತ್ರವನ್ನು ಓದಿ ಮುಗಿಸಿದ ಮೇಲೂ ಮನಸಲ್ಲಿನ್ನೂ ಹಾಡು ಗುನುಗುತ್ತಲೇ ಇದೆ...ಈ ಭಾವಗೀತೆಗಳ ಪ್ರಭಾವವೇ ಇಂಥಾದ್ದು ನೋಡಿ!

ಅಲೆಬಂದು ಕರೆಯುವುದು
ನಿನ್ನೊಲುಮೆ ಅರಮನೆಗೆ
ಒಳಗಡಲ ರತ್ನಪುರಿಗೆ....
ಅಲೆಯಿಡುವ ಮುತ್ತಿನಲೇ
ಕಾಣುವುದು ನಿನ್ನೊಲುಮೆ
ಒಳಗುಡಿಯ ಮೂರ್ತಿಮಹಿಮೆ...

paapu paapa said...

Odalikke khusheeeyaagthide. Bareeeeethaaaaa.... iri aayithaa.

With Love
Preethi