ಆತನ ಹೆಸರು ಸುರೇಶ. ಕಾಸರಗೋಡಿನ ಪುಟ್ಟದೊಂದು ಹಳ್ಳಿ ಅವನ ಮನೆ. ಹೊಲ-ಗದ್ದೆ ಕೆಲಸಗಳನ್ನೇ ನೋಡಿಕೊಳ್ಳುತ್ತಿದ್ದ ಈತ ಮುಗ್ಧ ಯುವಕ. ಪೋಲಿ-ಪುಂಡಾಟಿಕೆಯಿಲ್ಲ, ಹುಡುಗ್ರ ಜೊತೆ ಸೇರಿ ಓಡಾಟವಿಲ್ಲ. ಅಮ್ಮನ ಮುದ್ದಿನ ಮಗ. ಅವನಾಯಿತು, ಹೊಲಗದ್ದೆಗಳ ಕೆಲಸ, ತೋಟದ ಕೆಲಸ, ದನಕರುಗಳನ್ನು ನೋಡಿಕೊಳ್ಳೊದು, ಬೆಳಿಗೆದ್ದು ಹಾಲು ಕರೆದು ಡೈರಿಗೆ ಮಾರಿ ಬರುವುದು..ಈಗ ಹಳ್ಳಿಯ ಸುಂದರ ಸೊಬಗಿನಲ್ಲಿ ಬೆಳೆದ ಮುಗ್ಧ, ಪ್ರಾಮಾಣಿಕ ಸುರೇಶನಿಗೆ ನಗರ ಅಂದ್ರೆ ಅದೇನೋ ಕುತೂಹಲವಂತೆ. ಒಂದು ಸಲ ಅವನ ಸಂಬಂಧಿಕ ಹುಡುಗನೊಬ್ಬ ಸುರೇಶನನ್ನು ಬೆಂಗಳೂರಿಗೆ ಕರೆದುಕೊಂಡು ಬಂದ.
ವಿಲ್ಸನ್ ಗಾರ್ಡ್ನ್ನಲ್ಲಿ ಸುರೇಶನ ಸಂಬಂಧಿಕನ ರೂಮ್. ಎಲ್ಲಾ ಬ್ಯಾಚುಲರ್ ಹುಡುಗ್ರು. ಸುರೇಶನೂ ಒಂದು ವಾರ ಬೆಂಗಳೂರು ಸುತ್ತಿ ಹೋಗೋಣ ಅಂತ ಬಂದಿದ್ದ. ರೂಮ್ ಹುಡುಗ್ರು ಎಲ್ಲಾ ನಿತ್ಯ ಕೆಲಸಕ್ಕೆ ಹೋಗೋರು. ರಜೆಯಿಲ್ಲ. ಸುರೇಶನ ಬಳಿ, ಬೆಂಗಳೂರು ರೌಂಡ್ ಹಾಕೊಂಡು ಬಾ ಅಂದ್ರತೆ. ಮೆಜೆಸ್ಟಿಕ್ ಗೆ ಹೋದ್ರೆ ಬೆಂಗಲೂರು ಸುತ್ತಾಕೆ ತುಂಬಾ ಸುಲಭ..ಎಲ್ಲಾ ಕಡೆಗೂ ಹೋಗುವ ಬಸ್ಸುಗಳು ಮೆಜೆಸ್ಟಿಕ್ ನಿಂದಲೇ ಹೊರಡುತ್ತವೆ ಅಂದ್ರಂತೆ. ಸರಿ ಎಂದ ಸುರೇಶ ಬೆಂಗಳೂರು ಸಿಟಿ ಸುತ್ತೋಕೆ ರೆಡಿಯಾದ. ಬೆಳಿಗ್ಗೆ 10ರ ಸುಮಾರಿಗೆ ಮೆಜೆಸ್ಟಿಕ್ ಗೆ ಹೊರಟ. ಮೆಜೆಸ್ಟಿಕ್ ನಿಂದ ನಿಂತು ನೋಡಿದರೆ ಎದುರುಗಡೆ ಬೆಂಗಳೂರು ಸಿಟಿ ನೈರುತ್ಯ ರೈಲ್ವೆ ಕಾಣಿಸುತ್ತೆ. ಸುರೇಶ ಬೆಂಗಳೂರು ಸಿಟಿ ಅಂದ್ರೆ ಇದೇ ಅಂದುಕೊಂಡು ಸೀದಾ ರೈಲ್ವೆ ನಿಲ್ದಾಣ ಸುತ್ತಾಕೆ ಹೊರಟ.
ಗಿಜಿಗಿಡುವ ಜನರು, ಲಗೇಜುಗಳು, ಕೂಲಿಗಳು...ಇವನಿಗೆ ನೋಡಿಯೇ ತಲೆ ಗಿರ್ರ ಅನಿಸ್ತಂತೆ. ಒಂದೆಡೆ ಹೊಸ ಜಾಗ, ಅಪರಿಚಿತ ಮುಖ. ಆದರೂ ನೋಡಿಕೊಂಡು ಬಿಡೋಣ ಅಂತ ಪ್ಲಾಟ್ ಫಾರ್ಮ್ ಒಳಗೆ ಹೋಗಿದ್ದಾನೆ. ರೈಲುಗಳನ್ನೆಲ್ಲಾ ನೋಡುತ್ತಿದ್ದಾನೆ. ಕೈಯಲ್ಲಿ ಪ್ಲಾಟ್ ಫಾರ್ಮ ಟಿಕೆಟ್ ಇಲ್ಲ. ಅದು ಮಾಡಿಸಿಕೊಬೇಕು ಅಂತ ಅವನಿಗೆ ಗೊತ್ತೂ ಇಲ್ಲ. ಹಾಗಂತ ಯಾರೂ ಹೇಳೂ ಇಲ್ಲ. ತಪಾಸಣೆಗೆ ಬಂದ ಅಧಿಕಾರಿಗಳು ಬಂಧಿಸಿಬಿಟ್ಟರು. ತಪಾಸಣೆ ಮಾಡಿದ್ರು. ಈತ ಅಳೋದು ಬಿಟ್ರೆ ಬೇರೇನೂ ಮಾಡ್ತಿಲ್ಲ. ಸಂಜೆತನಕ ಅತ್ತು ಅತ್ತು ಹಣ್ಣಾದ ಮೇಲೆ ಇವನ ರೂಮ್ ಮೆಟ್ ಗಳು ಹೋಗಿ ಆಮೇಲೆ ಕರೆದುಕೊಂಡು ಬಂದ್ರು. ಅಂದೇ ನಾ ಊರಿಗೆ ಹೋಗ್ತೀನಿ ಅಂತ ರಚ್ಚೆ ಹಿಡಿದ ಸುರೇಶ ಬಸ್ಸು ಹತ್ತಿ ಹೊರಟೇಬಿಟ್ಟ. ಮತ್ತೆಂದೂ ಬೆಂಗಳೂರಿಗೆ ಮುಖ ಹಾಕಿ ನೋಡೇ ಇಲ್ಲ.
ಇತ್ತೀಚೆಗೆ ನನ್ನ ತಮ್ಮನೊಬ್ಬನನ್ನು ಊರಿಂದ ಇಲ್ಲಿಗೆ ಕರೆಸಿದೆ. ಬಂದಿದ್ದೇ ತಡ ಅಕ್ಕಾ ಊರಿಗೆ ಹೋಗ್ತೀನಿ..ಇಲ್ಲಿ ಬೋರ್ ಆಗುತ್ತೆ ಅಂತ ಜಗಳವಾಡಕೆ ಶುರುಹಚ್ಚಿದ. ಎರಡು ದಿನದಲ್ಲಿ ನಾ ಕಳಿಸಿಕೊಟ್ಟೆ. ಅವನ ಬಸ್ಸು ಹತ್ತಿಸಕೆ ಮೆಜೆಸ್ಟಿಕ್ ತನಕ ನಾನು ನಮ್ಮ ಸಂಬಂಧಿಕರೊಬ್ಬರ ಜೊತೆ ಹೋಗುತ್ತಿದ್ದಂತೆ ಅವರು ನನ್ ತಮ್ಮನಿಗೆ ಸುರೇಶ ಬೆಂಗಳೂರು ಸಿಟಿ ನೋಡಿದ ಕಥೆಯನ್ನು ವಿವರಿಸಿದ್ದರು. ಈವಾಗ ಸುರೇಶ ಮದುವೆಯಾಗಿ ಆರಾಮವಾಗಿ ಊರಲ್ಲಿದ್ದಾನೆ.
ನೋಡ್ರೀ ಈ ಸಲ ಧರಿತ್ರಿ ನಿಮ್ ಕಣ್ಣಲ್ಲಿ ನೀರು ತರಿಸಿಲ್ಲ..ನಗೋ ಥರ ಬರೆಯೋಕೆ ಬರಲ್ಲ..ಆದ್ರೂ ಅತ್ತ ನಗೂನು ಅಲ್ಲ ಇತ್ತ ಅಳೂನು ಅಲ್ಲದ ಘಟನೆಯನ್ನು ಬ್ಲಾಗಿಸಿದ್ದೇನೆ. ಆಗಾಗ ನೆನಪಾಗುವ ಸುರೇಶನ ಅವಸ್ಥೆಗೆ ನಂಗೇ ನಗಬೇಕೋ ಅಳಬೇಕೋ ಗೊತ್ತಾಗ್ತಿಲ್ಲ ಮಾರಾಯ್ರೆ.
Subscribe to:
Post Comments (Atom)
17 comments:
ಧರಿತ್ರಿ,
ಚೆನ್ನಾಗಿದೆ. ಅಳು ಬರಲಿಲ್ಲ, ಮುಖದಲ್ಲೊ೦ದು ಕಿರುನಗೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಮು೦ದುವರಿಯಲಿ.
ಪಾಪ ಸುರೇಶ... ಈಗಲೂ ಯಾರಾದ್ರೂ ಬೆಂಗಳೂರ್ ಅಂದ್ರೆ ಅವನಿಗೆ ಬರೀ ರೈಲ್ವೇ ಸ್ಟೇಶನ್ ಮಾತ್ರ ನೆನಪಿಗೆ ಬರುತ್ತೆ ಅನ್ಸುತ್ತೆ.
ನನ್ನ ಸೋದರ ಮಾವನ ಮಗನೊಬ್ಬ ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ನನಗೂ ಆಗ ಬೆಂಗಳೂರು ಅಷ್ಟೊಂದು ಗೊತ್ತಿರಲಿಲ್ಲ. ಅದಕ್ಕೆ ಎಲ್ಲಿಗೆ ಹೋದರೂ ಮೆಜೆಸ್ಟಿಕ್ ಗೆ ವಾಪಸ್ ಬಂದು ಮುಂದಿನ ಸ್ಥಳಕ್ಕೆ ಹೋಗಲು ಬಸ್ ಹಿಡಿಯುತ್ತಿದ್ದೆ. ಅವನಿಗೆ ಮೆಜೆಸ್ಟಿಕ್ ನೋಡಿ ನೋಡಿ ಎಷ್ಟು ತಲೆ ಕೆಟ್ಟಿತ್ತೆಂದರೇ, ಊರಿಗೆ ಹೋದಮೇಲೆ ಬೆಂಗಳೂರಲ್ಲಿ ಏನೇನು ನೋಡಿದೆಯೋ ಅಂತ ಯಾರಾದ್ರೂ ಕೇಳಿದ್ರೆ ಬರೀ "ಮೆಜೆಸ್ಟಿಕ್" ಅಂತ ಮಾತ್ರ ಉತ್ತರಿಸಿದ್ದ!
Dharitri, chennagide
ಧರಿತ್ರಿ...
ಬರಹ ತುಂಬಾ ಚೆನ್ನಾಗಿದೆ. ಬರೆಯುವ ಮೊದಲೇ ನಗಿಸೋದೋ ಅಳಿಸೋದೋ ಅಂತ ಅದರಲ್ಲಿ ಸಿಕ್ಕಿಹಾಕಿಕೊಳ್ಳುವುದಕ್ಕಿಂತ ಸುಮ್ಮನೆ ಇರುವ ವಿಚಾರವನ್ನು ಸರಳಭಾಷೆಯಲ್ಲಿ ಹೇಳಿಕೊಂಡು ಹೋಗಿದ್ದೀಯಾ...ಇದು ಈಗ ನಿನ್ನ ಒಂದೇ ಶೈಲಿಯ ಬರಹಕ್ಕಿಂತ ಸ್ವಲ್ಪ ಭಿನ್ನವಾಗಿದೆ ಅನ್ನಿಸಿತು...ಪ್ರತಿಬಾರಿಯೂ ಇಂಥ ಹೊಸದು ಹುಡುಕಿ ಕೊಟ್ಟರೇ ನಾವು ಖುಷಿಪಡುತ್ತೀವಿ...
ಧನ್ಯವಾದಗಳು....
ಪರಾಂಜಪೆಯಣ್ಣ ..
ಧನ್ಯವಾದಗಳು. ಹಾಸ್ಯಗಳೆಲ್ಲಾ ನಿಮ್ ಥರ ಬರೆಯಕೆ ಬರಲ್ಲ..ಬೈಕೋಬೇಡಿ
@ ಗುರುಮೂರ್ತಿ ಸರ್..ಬಿಡುವು ಮಾಡಿಕೊಂಡು ಭೇಟಿ ನೀಡಿದ್ದಕ್ಕೆ ಕೃತಜ್ಞತೆಗಳು.
@ಉಮೇಶ್..ನಮಸ್ಕಾರ. ಬೆಂಗಳೂರಿಗೆ ಮೆಜೆಸ್ಟಿಕ್ ಅನ್ನೋದು ಪರ್ಯಾಯ ಪದ ಇದ್ದಂಗೆ. ತುಂಬಾ ಜನ ಹಾಗೇ ಹೇಳೊ್ದನ್ನು ಕೇಳಿದ್ದೇನೆ.
ಮತ್ತೆ ನಿರೀಕ್ಷೆಯಲ್ಲಿ..
ಧರಿತ್ರಿ
ಧರಿತ್ರಿ ಅವರೇ,
ಯಾರೇನು ಹುಟ್ಟು ಬರಹಗಾರರಲ್ಲ
ಹಾಡುತ ಹಾಡುತ ರಾಗ ಅಂತಾರಲ್ಲ ಹಾಗೆ... :P
ನಿಮ್ಮ ಈ ಲೇಖನದಲ್ಲಿ ಹೇಳೋದನ್ನ ನೆರವಾಗಿ ಹೇಳಿದ್ದಿರಿ ..
ಚನ್ನಾಗಿದೆ..
ಸ್ವಲ್ಪ twist ಕೊಟ್ಟು ಬರೆದಿದ್ದರೆ ಒಳ್ಳೆ ಹಾಸ್ಯ ಲೇಖನವಾಗುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ..
ಕ್ಷಮಿಷಿ ನಾನೇನು ಬಹಳ ತೆಳಿದವನಲ್ಲ.. :(
ಸುರೇಶನ ಬಗ್ಗೆ ಹೇಳುವುದಾದರೆ,
ಇದು ಅವನ ತಪ್ಪಲ್ಲ, ಅದೇನೋ ಅಂತಾರಲ್ಲ First impression is best impression.
ಅವರಿಗೆ ಆ First impression ಚನ್ನಾಗಿಲ್ಲ.. ಪಾಪ...
ಧರಿತ್ರಿ,
ಸುರೇಶನ ಮುಗ್ಧತೆಯನ್ನು ಓದಿ, ನನಗಂತೂ ನಗುವೋ ನಗು. ನೀವು ನಗಿಸುವ ಹಾಗೂ ಅಳಿಸುವ, ಎರಡೂ ತರಹದ ಕತೆಗಳನ್ನು ಬರೆಯಿರಿ.
ಹಾಯ್ ದರಿತ್ರಿ,
ಪರವಾಗಿಲ್ಲ, ಈ ಸಲ ಸ್ವಲ್ಪ ಚೇಂಜ್ ಇದೆ... ಏನು, ಎಲ್ಲರೂ ನೀವು ಅಳುಬರುವ ಕಥೆ ಬರೆಯುತ್ತೀರಾ ಅಂತ ಹೇಳಿದ್ರು ಅಂತ ಈ ಕತೆ ಬರೆದಿದ್ದೀರ? ಗುಡ್ improvements.....ಹಾ ಹಾ :-)
ಗುರು
ಸುರೇಶನ ಪಜೀತಿ ನೋಡಿ ಮಂಡೆ ಬಿಸಿಯಾಯ್ತು ಮಾರಾಯ್ತಿ.
ಶಿವಣ್ಣ...
ನಮಸ್ಕಾರ. ಖಂಡಿತ ಹೊಸದನ್ನು ಹುಡುಕುವೆ. ಪ್ರತಿಕ್ರಿಯೆಗೆ ಧನ್ಯವಾದಗಳು.
@ಶಿವಪ್ರಕಾಶ್..ಖಂಡಿತಾ ನೀವು ಹೇಳಿದ್ರಲ್ಲಿ ಯಾವ ತಪ್ಪುನೂ ಇಲ್ಲ. ಎಷ್ಟು ಪ್ರಯತ್ನ ಮಾಡಿದ್ರೂ ಥತ್ ಈ ಹಾಸ್ಯ ಬರೆಯೋಕೆ ಬರಲ್ಲಾರಿ.ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ.
@ಸುನಾಥ್ ಸರ್..ನಿಮ್ ಪ್ರೋತ್ಸಾಹ ಸದಾ ಇರಲಿ.
@ಧನ್ಯವಾದಗಳು ಗುರು ಸರ್.
@ರಾಜೇಶ..ಎಂಥದ್ದು ಮಾರಾಯ. ನಂಗೂ ಕೇಳಿ ಮಂಡೆ ಬೆಚ್ಚ ಆಗಿತ್ತು.
-ನಿಮ್ಮ..
ಧರಿತ್ರಿ
ಧರಿತ್ರಿ ಅವ್ರೇ...
ಅಳೋ ಲೇಖನ ಅಲ್ಲ ಅ೦ದುಬಿಟ್ಟು ಈ ಲೇಖನದಲ್ಲಿ ಸುರೇಶನ್ನ ಅಳಿಸಿದ್ದೀರಲ್ಲ:)
ಸುಮ್ನೆ ತಮಾಶೆಗೆ ಹೇಳಿದ್ದು ಮಾರಾಯ್ತಿ. ಮ೦ಡೆ ಬೆಚ್ಚ ಮಲ್ಪಡೆ....
ಹೀಗೆ ಬರೆಯುತ್ತಿರಿ....
ಪಾಪ ಸುರೇಷ :)
@ಸುಧೆಶ್ ಪ್ರತಿಕ್ರಿಯೆಗೆ ಧನ್ಯವಾದಗಳು. ಮಂಡೆ ಬೆಚ್ಚ ಆಗಿಲ್ಲ ಮಾರಾರ್ರೆ.
@ಪಾಲಚಂದ್ರ..ಮತ್ತೆ ಬನ್ನಿ
-ಧರಿತ್ರಿ
:)
ಧರಿತ್ರಿ....
ಬರಲಿಕ್ಕೆ...ತಡವಾಯಿತು....
ಮೆಜೆಷ್ಟಿಕ್ಕಿನ ಟ್ರಾಫಿಕ್......
ನಿಮ್ಮ ಹೊಸತನದ ಬರಹ ಇಷ್ಟವಾಯಿತು...
ನಿಮ್ಮ ಲೇಖನ ಓದಿ ನಾನು..
ಮೊದಲಬಾರಿ ಬೆಂಗಳೂರನ್ನು...
ನೋಡಿದ ಘಟನೆ ನೆನನಪಾಯಿತು...
ಹೀಗೆ ವೈವಿದ್ಯವಿರಲಿ...
ಖುಷಿಯಾಗುತ್ತದೆ...
ಅಭಿನಂದನೆಗಳು...
ಹೊಸದಾಗಿ ಬೆಂಗಳೂರಿಗೆ ಬಂದವರಿಗೆ ಆಗೋ ಅನುಭವ. ಆದರೂ ಅವರ ಸ್ಥಿತಿ ನೋಡಿ ನಗು ಬರಲಿಲ್ಲ. ದುಃಖನೇ ಆಯ್ತು.
ಮತ್ತೊಮ್ಮೆ ನಗು ತರಿಸುವಂತ ಲೇಖನ ಬರೆಯಿರಿ.
@ಹರೀಶ್ ಸರ್..ಅದೇನು ಸಿಂಬಲ್ಲು? ನಂಗಂತೂ ಅರ್ಥವಾಗಿಲ್ಲ
@ಪ್ರಕಾಶ್ ..ಸರ್ ಯಾಕೆ ಪೀಕ್ ಹವರ್ ನಲ್ಲಿ ಹೊರಟ್ರೇನೋ? ಅದಕ್ಕೆ ಟ್ರಾಫಿಕ್ ಜಾಸ್ತಿ ಇದ್ದಿರಬೇಕು. ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ.
@ಜಯಶಂಕರ್..ನಗು ತರಿಸೋ ಹಾಗೆ ಬರೆಯೋಕೆ ನಮ್ ಪ್ರಕಾಶ್ ಸರ್, ಶಂಕ್ರಣ್ಣ, ಕಡಲತೀರದ ಸಂದೀಪ್ ಅಂಥವರು ಈಗಾಗಲೇ ದಾಖಲೆ ಮಾಡಿರುವಾಗ ನಾನು ಪಾಸಾಗುವುದೂ ಗ್ಯಾರಂಟಿ ಇಲ್ಲ ಮಾರಾಯ್ರೆ. ಒಂದು ಕೆಲಸ ಮಾಡೋಣ..ನಾನೇನೋ ಬರೇತೀನಿ..ನೀವು ನಗಿ ಸರೀನಾ ಹಹಹ
-ಧರಿತ್ರಿ
Post a Comment