Tuesday, March 6, 2012

ನನ್ನವನಿಗೆ ಸುಮ್ನೆ ಒಂದು ಪತ್ರ

ಕಳೆದುಹೋಯಿತು ಎರಡು ವಸಂತ. ಸುಖಾಸುಮ್ಮನೆ ಕುಳಿತು ಹಿಂತಿರುಗಿ ನೋಡಿದಾಗ ಅರೆ! ೨ ವರ್ಷ ಅನ್ನೋ ಅಚ್ಚರಿ. ಅಕ್ಷರಗಳಲ್ಲೇ ಬದುಕಿನ ಅರಮನೆ ಕಟ್ಟಿದ್ದು , ಅಕ್ಷರಗಳನ್ನೇ ಪ್ರೀತಿಯ ಮುತ್ತಾಗಿ ಪೋಣಿಸಿದ್ದು ಎಲ್ಲವೂ ಸಿಹಿಸಿಹಿ ನೆನಪು. ಎರಡು ವರ್ಷಗಳ ಹಿಂದೆ ಸಂಬಂಧಗಳ ನಡುವೆ ಹರಿದಾಡಿದ್ದ ಪತ್ರಗಳನ್ನು ಮತ್ತೆ ಬಿಚ್ಚಿ ನೋಡುವ ಖುಷಿ.

ಆರಂಭದಲ್ಲಿದ್ದ ಸಿಟ್ಟು-ಸಿಡುವಿನ ಕಾವು ಈಗಿಲ್ಲ. ಆಗೊಮ್ಮೆ -ಈಗೊಮ್ಮೆ ಗೆಳೆಯರ ಮಧ್ಯೆ ನೆನಪಾಗುತ್ತಿದ್ದ ಸಿಗರೇಟಿನ ಹೊಗೆಯಿಲ್ಲ. ಈಗಲೂ ನೀನು ಆಗಾಗ ನೊರೆ ಉಕ್ಕಿಸುವ ಬಿಯರ್ ಬಾಟಲಿ ಮೇಲೆ ಕೊಂಚ ಮುನಿಸಿದೆ. ಇರಲಿಬಿಡು!

ಸುಖಾಸುಮ್ಮನೆ ರೇಗುವ ನಿನ್ನ ಮುಖದಲ್ಲಿ ನಗುವಿನ ಕಮಲ ಅರಳಿದೆ. ಮಾತು-ಮಾತಿಗೂ ಮುನಿಯುತ್ತಿದ್ದ ನನ್ನಲ್ಲೂ ನಗು ಅರಳಿದೆ, ಬದುಕು ಸುಖಿಸುತ್ತಿದೆ. ಬದುಕು ತುಂಬಾ ಖುಷಿಯ ಸುಗ್ಗಿ ಹರಿಸಿದ್ದಿ. ನನ್ನದೆಯ ತುಂಬಾ ಹೊಸಹೊಸ ಕನಸುಗಳ ಕಸುವು ಮಾಡಿದ್ದಿ. ಹೆಚ್ಚೇನೂ ಹೇಳಲ್ಲ. ಅಕ್ಕರೆಯ ಅರಮನೆಯಲ್ಲಿ ಕವಿ ಹೇಳಿದಂತೆ ನಾನೊಂದು ಪುಟ್ಟಕೊಳ, ನೀನದರ ಜೀವಜಲ.

4 comments:

ಮೌನರಾಗ said...

Hmm.... ನಲ್ಲನ ಪಡೆದವರಿಗೆ ನೆನಪುಗಳಾಗಿ, ಪಡೆಯಬೇಕಿರುವವರಿಗೆ ಪುಳಕವಾಗಿ ಹಿತವಾಗಿ ಕಾಡುವಂತಿದೆ ಬರಹ....
superb..

ಚುಕ್ಕಿ said...

ಸದಾ ಹೀಗೆ ಇರಲಿ ನಿಮ್ಮ ಜೀವನ....

sunaath said...

ಮೂರನೆಯ ವಸಂತ ಪ್ರಾರಂಭವಾಯಿತೆ? ಶುಭಾಶಯಗಳು!

Unknown said...

Congratulations!! Nimma jeevana heege sukhamayavaagirali...