Thursday, November 18, 2010
ನೀನು ಕವಿ, ನಾನು ಕವಿತೆ!
ಅದು ನನ್ನ ಮನೆ. ಹುಲ್ಲಿನ ಮಾಡಿನಿಂದ ಮಾಡಿದ ಪುಟ್ಟ ಮನೆ. ಮಣ್ಣಿನ ಗೋಡೆಯ ಚೆಂದದ ಮನೆ. ಅಂಗಳದಲ್ಲಿ ಹೂ ಗಿಡಗಳ ಚಿತ್ತಾರವಿರುವ ಚೆಂದದ ಅರಮನೆ. ನಾನಲ್ಲೇ ಕನಸು ಕಂಡಿದ್ದು. ಅದು ನಿನ್ನ ಕನಸು. ಎಲ್ಲೋ ಓದಿದ ಕವನಗಳು, ಎಲ್ಲೋ Uಚಿದ ಬರಹಗಳು...ಎಲ್ಲವೂ ನನ್ನೊಳಗೊಂದು ಹೊಸ ಭಾವಗಳಿಗೆ ಹುಟ್ಟು.
ನಿನ್ನಲ್ಲಿ ಕವನಗಳು ಹುಟ್ಟಬೇಕು, ನೀನು ಕವಿಯಾಗಬೇಕು. ಮುಗಿಲಲ್ಲಿ ನಿತ್ಯ ಕಾಣುವ ಆ ನೀಲಿ ಬಣ್ಣ ನಿನಗೆ ಹೊಸತೆನಿಸಬೇಕು. ನಿತ್ಯದ ಆ ಹಗಲು ನಿನಗೆ ಹೊಸತಾಗಬೇಕು. ಪ್ರತಿದಿನದ ಆ ಮುಂಜಾನೆ ನಿನ್ನಲ್ಲಿ ಹೊಸ ಬೆಡಗನ್ನು ಹುಟ್ಟಿಸಬೇಕು.ಆಕಾಶದಲ್ಲಿ ಮೂಡುವ ಕಾಮನಬಿಲ್ಲು, ಹಕ್ಕಿಗಳ ಕಲರವ, ನದಿನೀರಿನ ಜುಳುಜುಳು ನಾದ, ನಿಶ್ಚಲ ಸರೋವರಗಳು, ಚಲಿಸುವ ಮೋಡಗಳು, ಕಿವಿಗೆ ಇಂಪಾಗುವ ಸಂUತ...ಎಲ್ಲವೂ ನಿನ್ನಲ್ಲಿ ಕವಿತೆಗಳಾಗಬೇಕು.
ನನ್ನೊಳಗಿನಿಂದ ಹುಟ್ಟುವ ಭಾವಗಳು, ಮಾತಿಲ್ಲದ ಮೌನ ನಿನ್ನಲ್ಲಿ ಕವನಗಳಾಗಬೇಕು. ನನ್ನ ಕಿವಿಯಲ್ಲಿ ಮಿನುಗುವ ಮುತ್ತಿನೋಲೆ, ತುಟಿ ಮೇಲೆ ನಗುವ ಆ ಮೂಗುತಿ ಮಿಂಚು, ಕಣ್ಣರೆಪ್ಪೆಯಲ್ಲಿ ಕನವರಿಸುವ ಆ ಕನಸುಗಳು, ಕಾಲಿಗೆ ನೀ ತೊಡಿಸಿದ ಆ ಬೆಳ್ಳಿ ಕಾಲುಂಗುರ, ನಿನ್ನದೆಯನ್ನು ಖುಷಿಗೊಳಿಸುವ ಆ ಕಾಲ್ಗೆಜ್ಜೆ, ಕೈ ಬಳೆ ಸದ್ದು, ನಿನ್ನ ಕನ್ಸ್ ಮಾಡುವ ಮುಂಗುರುಳು, ತುಟಿಯಂಚಿನ ಮಿನುಗು ನಗು...ನಿನ್ನಲ್ಲಿ ಕವನಗಳಾಗಬೇಕು. ಅಷ್ಟೇ ನಾನು ಬಯಸಿದ್ದು. ಅಂದು ಆ ಪುಟ್ಟ ಮನೆಯಲ್ಲಿ ಹುಟ್ಟಿದ ಕನಸು ನಿಜವಾಗಿದೆ. ಅದು ನನ್ನ ಖುಷಿ, ನನ್ನ ಹೆಮ್ಮೆ. ಇಂದು ನಾನು ಕವನ, ನೀನು ಕವಿ, ಇನ್ಯಾರೋ ಕಿವಿ!!
ಬಾ ಗೆಳತಿ..
ಮಳೆ ಹನಿಯಲಿ
ಅಚ್ಚ- ಅಡವಿಯಲಿ
ನನ್ನ ಅಚ್ಚರಸಿ
ನಿನಗೆ ನನ್ನುಸಿರನು
ಬೆಚ್ಚಗೆ ಆಚ್ಛಾದಿಸಿ
ಒಲವ-ದೀಪ ಹಚ್ಚಿಟ್ಟು
ಜಗದ ಎಲ್ಲ
ಸಂಚಿಗೆ ಕಿಚ್ಚಿಟ್ಟು
ನನ್ನೀ ಕಂಗಳು
ಮುಚ್ಚುವ ತನಕ
ಕಣ್ರೆಪ್ಪೆಯಲಿ ಬಚ್ಚಿಟ್ಟು
ಸಾಕುವೆ ..ಬಾ ನನ್ನಚ್ಚರಸಿ...
ವೊದಲ ನೋಟಕ್ಕೆ ನೀನು ಬರೆದ ಕವನ ನಿನ್ನಂತೆ ನನ್ನಲ್ಲಿ ಹಸಿರು. ಇಲ್ಲಿ ನೀನು ಸೋತು ಗೆದ್ದೆ, ನಾನು ಗೆದ್ದು ಸೋತೆ!!
ಪ್ರಕಟ: http://hosadigantha.in/epaper.php?date=11-18-2010&name=11-18-2010-13
Subscribe to:
Post Comments (Atom)
12 comments:
"ಮೊದಲ ನೋಟಕ್ಕೆ ನೀನು ಬರೆದ ಕವನ ನಿನ್ನಂತೆ ನನ್ನಲ್ಲಿ ಹಸಿರು. ಇಲ್ಲಿ ನೀನು ಸೋತು ಗೆದ್ದೆ, ನಾನು ಗೆದ್ದು ಸೋತೆ!!" ಸುಂದರ ಸಾಲುಗಳು ಚಿತ್ರಾ....
ಧರಿತ್ರಿ, ಲೇಖನ ಮತ್ತು ಕವನ, ಎರಡೂ ಸೊಗಸಾಗಿವೆ...!
ಧರಿತ್ರಿ ಕವಿತೆ ನೀವು ಬರೆದಿದ್ದೋ ಅಥವಾ ನಿಮ್ಮನ್ನು ನೋಡಿ ಯಜಮಾನ್ರು ಬರೆದಿದ್ದೋ..? ಸುಂದರವಾಗಿದೆ
ಶರತ್ ಚಂದ್ರ ಮತ್ತು ಎಸ್ ಎಸ್.ಕೆ. ಪ್ರತಿಕ್ರಿಯೆಗೆ ಧನ್ಯವಾದಗಳು
ಉಮೇಶ್ ದೇಸಾಯಿ ಸರ್, ಧನ್ಯವಾದಗಳು. ಈ ಕವನ ನಮ್ಮವರೇ ಬರೆದಿದ್ದು. ನನ್ನ ನೋಡಿದ ಮೊದಲ ದಿನ ಬರೆದ ಕವನ ಅದು. ಅವರ ಬ್ಲಾಗಿನಲ್ಲೂ ಆ ಕವನ ಇದೆ.
&ಪ್ರೀತಿಯಿಂದ
ಚಿತ್ರಾ
ಚಿತ್ರಾಜಿ,
ಚಿತ್ರಾ ಸಂತೋಷ್ ರಿಗೆ ನಮಸ್ಕಾರ. ಎಂಚ ಉಲ್ಲೇರು. ಸೌಕ್ಯತೆ. ಆರ್ಟ್ ಫೋಟೋ, ಕವಿತೆ ಪೊರ್ಲು ಉಂಡು. ಪುರ್ಲುದ ಬರಹ.
ದನ್ಯವಾದ,
ಮೋಹನ ಹೆಗಡೆ
ಓದ್ತಾ ಇದ್ದ ಹಾಗೆ ಇದು ನಿಜಾನೆ ಇರ್ಬೇಕು ಅನ್ನಿಸ್ತು.. ಕಾಮೆಂಟ್ ನೋಡಿದ ಮೇಲೆ ಕನ್ ಫರ್ಮ್ ಆಯಿತು..:) .. ಚೆನ್ನಾಗಿದೆ ..
ಸುಂದರ ಬರೆಹ/ಕವಿತೆ..
ಚೆನ್ನಾಗಿದೆ.
tumba chennagide ...
ಚಂದದ ಕವನ ,ತುಂಬಾ ಇಷ್ಟವಾಯಿತು.
ಸೊಗಸಾಗಿದೆ ಕವನ. ನಿಮ್ಮನ್ನು ನೋಡಿ ನಿಮ್ಮ ಯಜಮಾನರು ಬರದದ್ದು ಎಂದಮೇಲೆ...
ನನ್ನೀ ಕಂಗಳು
ಮುಚ್ಚುವ ತನಕ
ಕಣ್ರೆಪ್ಪೆಯಲಿ ಬಚ್ಚಿಟ್ಟು
ಸಾಕುವೆ..
really nice..
ಚಿತ್ರಾ ಸೋತು ಗೆಲ್ಲುವ ಅಥವಾ ಗೆದ್ದು ಸೋಲುವ ಮಜಾ ತಗೊಳ್ಳೋದು ಚನ್ನಾಗಿ ಅರ್ಥ ಆಗಿದೆ ಅಂದ್ಕೋತೀನಿ...ದಂ-ಪತಿ, ಅನ್ನೋದು ಅದಕ್ಕೇ..ಅವಳು ದಂ-ಇವ ಪತಿ, ಪತಿ ಹೋದರೆ ದಂ ಹೋಗುತ್ತಂತೆ...ಹಹಹ ಕವನದ ಈ ಸಾಲುಗಳು ಸೂಪರ್
ನನ್ನೀ ಕಂಗಳು
ಮುಚ್ಚುವ ತನಕ
ಕಣ್ರೆಪ್ಪೆಯಲಿ ಬಚ್ಚಿಟ್ಟು
ಸಾಕುವೆ ..ಬಾ ನನ್ನಚ್ಚರಸಿ
Post a Comment