Saturday, June 12, 2010
ಅಳೋದು ವೀಕ್‌ನೆಸ್ ಅಲ್ಲ
ಅಳೋದು ನಿನ್ನ ವೀಕ್‌ನೆಸ್!
ಎಂದು ಬೈಯಬಹುದು, ಆದ್ರೆ ಅಳೋದ್ರಲ್ಲೂ ಒಂಥರಾ ಖುಷಿಯಿದೆ. ಅಂದು ಸ್ಕೂಲಿಗೆ ಹೋಗಲ್ಲ ಎಂದು ಅಮ್ಮನ ಸೆರಗು ಹಿಡಿದು ರಚ್ಚೆ ಹಿಡಿದಾಗ ಅಮ್ಮ ಉದ್ದ ಕೋಲಿನಲ್ಲಿ ಹೊಡೆದು ಶಾಲೆಗೆ ಕಳಿಸಿದ್ದು ನೆನಪಾಗುತ್ತೆ. ಕ್ಲಾಸಿನಲ್ಲಿ ನನ್ನ ಊದಿಕೊಂಡ ಮುಖ ನೋಡಿ ಮುಖ ಏಕೆ ಹೀಗಿದೆ ಎಂದಾಗ ಕಣ್ಣಿಗೆ ಕಸ ಬಿದ್ದಿದೆ ಎಂದು ಹಸಿ ಹಸಿ ಸುಳ್ಳು ಹೇಳಿದ್ದೆ. ಟೀಚರ್ ಬಳಿ ಹೇಳದಿದ್ರೂ ಅತ್ತು ಅತ್ತು ಸಮಾಧಾನ ಮಾಡಿಕೊಂಡಿದ್ದೆ. ಅಮ್ಮ ನೀಡಿದ ಬೆತ್ತದ ರುಚಿನೂ ಮರೆತೇ ಹೋಗಿತ್ತು.
ಹೌದು,ಅಳೋದ್ರಲ್ಲಿ ನಗುವಿಗಿಂತಲೂ ಹೆಚ್ಚಿನ ಸುಖ ಇದೆ. ಥೂ! ಅಳ್ತೀಯಾ ಎಂದು ಎಲ್ರೂ ನಮ್ಮ ಮೇಲೆ ರೇಗಬಹುದು. ಆದರೆ, ಅಳು ನನ್ನ ಶಕ್ತಿ, ಅಳು ನನಗೆ ಮತ್ತೆ ನಗುವಾಗುವ ಚೈತನ್ಯ, ಅಳು ನನ್ನೆಲ್ಲಾ ನೋವುಗಳನ್ನು ಮರೆಯೋಕಿರುವ ದಾರಿ. ಅಳು ಯಾವ ಹೆಣ್ಣಿನ ವೀಕ್ ನೆಸ್ ಕೂಡ ಅಲ್ಲ, ಹೆಣ್ಣಲ್ಲದೆ ಗಂಡು ಅಳೋಕ್ಕಾಗುತ್ತಾ? ಅಳು ಹೆಣ್ಣಿನ ಹುಟ್ಟು ಶಕ್ತಿ ಎಂದು ಹೇಳೋದು ನಂಗೆ ಹೆಮ್ಮೆನೇ.
ನಾನು ಅಮ್ಮನ ಮನೆಯಿಂದ ಗಂಡನ ಮನೆಗೆ ಬರುವಾಗ ಅತ್ತಿದ್ದೆ. ಅದು ಅಮ್ಮನ ಜೊತೆಗೆ, ಮನೆ ಜೊತೆಗೆ ಆಕೆ ಕಟ್ಟಿಕೊಂಡ ಅನನ್ಯ ಬಾಂಧವ್ಯ. ಗಂಡನೆದುರು ಗಳಗಳನೆ ಅಳಬಹುದು, ಅದು ಹೆಣ್ಣಿನ ವೀಕ್‌ನೆಸ್ ಅಲ್ಲ, ಗಂಡನ ಮೇಲಿನ ಪ್ರೀತಿ. ಮಕ್ಕಳು ತಪ್ಪು ಮಾಡಿದಾಗ ಕಣ್ಣೀರು ಒರೆಸುತ್ತಾ ಬುದ್ಧಿ ಹೇಳೋ ಅಮ್ಮ, ತನ್ನ ಗಂಡ ತಪ್ಪು ಮಾಡಿದಾಗಲೂ ಅಳುತ್ತಲೇ ಅವನೆದೆಯಲ್ಲಿ ಆಸರೆ ಪಡೆಯೋ ಪತ್ನಿ, ಅದು ಅವಳ ವೀಕ್ ನೆಸ್ ಅಲ್ಲ. ತನ್ನವರಲ್ಲದವರ ಎದುರು ಹೆಣ್ಣೊಬ್ಬಳು ಎಂದೂ ಅಳಲಾರಳು. ಅಳೋದ್ರ ಹಿಂದೆ ನೋವು, ಕಾಳಜಿ, ಪ್ರೀತಿ, ವಿಶ್ವಾಸ ಎಲ್ಲನೂ ಇರುತ್ತೆ.
ಕಳೆದುಕೊಂಡ ಅಜ್ಜ-ಅಜ್ಜಿಯ ನೆನಪು ಅಳು ತರಿಸಿಲ್ವಾ? ಎಲ್ಲೋ ಮರೆಯಾದ ಗೆಳತಿ ಅಥವಾ ಗೆಳೆಯನ ನೆನಪು ಕಾಡಿದಾಗ ಕಂಗಳು ಹನಿಗೂಡೋಲ್ವಾ? ತವರು ಮನೆಯ ನೆನಪಾದಾಗ ಗಂಡನ ಮಡಿಲಲ್ಲಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿಲ್ವಾ? ಈ ಅಳು ಕೂಡ ಬರೋದು ಎದುರಿಗೆ ನಮ್ಮ ಅಳುವನ್ನೂ ಸ್ವೀಕರಿಸುವವರು ಇದ್ದಾರೆ ಎಂದಾಗ ಮಾತ್ರ. ಕಣ್ಣಿರಿನ ಬೆಲೆ ತಿಳಿಯೋರು ನಮ್ಮೆದುರು ಇದ್ದಾಗ ಮಾತ್ರ. ಅದು ವೀಕ್ ನೆಸ್ ಅಲ್ಲ. ಪ್ರೀತಿ, ಸ್ನೇಹ, ಅನನ್ಯ ಬಾಂಧವ್ಯದ ಬೆಸುಗೆಯೊಂದಿದ್ದಲ್ಲಿ ಅಳು ಬರುತ್ತೆ. ಅದು ಯಾವ ಹೆಣ್ಣಿನ ವೀಕ್‌ನೆಸ್ ಅಲ್ಲ, ಅಳು ತನ್ನೊಳಗೆ ಪರಿಹಾರ ಕಂಡುಕೊಳ್ಳುವ ಪರಿ ಅಷ್ಟೇ.
ಪ್ರಕಟ: (http://hosadigantha.in/epaper.php?date=06-03-2010&name=06-03-2010-21)
Subscribe to:
Post Comments (Atom)
20 comments:
ಧರಿತ್ರಿ ಯವರೇ ;ನಿಮಗೆ ಇನ್ನೊಂದು ವಿಷಯ ಗೊತ್ತಾ?ಹೆಣ್ಣು ಗಂಡಿಗಿಂತ ಹೆಚ್ಚಿಗೆ ದಿನ ಬದುಕಿರೋ ಕಾರಣವೇ ಅಳು!
ಗಂಡಿಗೆ ಅಳೋಕೆ ಬರದೆಇರೋದರಿಂದಲೇ ಬೇಗ ಸಾಯೋದು!ಚಿಂತೆ,ಸಂತಾಪ ಒಳಗೆ ಕಾಡದೆ ಹೊರಗೆ ಬರೋಕೆ ಕಣ್ಣೀರೇ ದಾರಿ! so you are hundred percent right when you say crying is not a weakness.In fact it is your STRENGTH!ನನ್ನ ಬ್ಲಾಗಿಗೂ ಭೇಟಿ ಕೊಡಿ.ಧನ್ಯವಾದಗಳು.
ಮನಸ್ಸಿನ ಅಳಲು ಹೊರಚೆಲ್ಲೋದೇ ಅಳುವದರ ಮೂಲಕ. ಅಳೋದು weakness ಹೇಗಾಗುತ್ತೆ? ಸರಿಯಾಗಿ ಬರೆದಿದ್ದೀರಿ.
ಚಿತ್ರಾ...ಇದು ಅಳು ಮಾತ್ರ ಅಲ್ಲ ಮಹಾ ಅಸ್ತ್ರ..ಹೆಣ್ಣಿಗೆ....ಹಹಹ...ನಿಜ ನೋಡಿ ಗಂಡಿಗೆ ಸಾಧ್ಯನೇ ಇಲ್ಲ ಇದನ್ನ ಅಸ್ತ್ರ ಮಾಡ್ಕೊಳ್ಳೋಕೆ,,,,ಹಾಗೆ ಮಾಡಿದ್ರೆ....
ಯಾವೋನ್ಲೋ ಇವ್ನು ಹೆಣ್ಗ...ಅಂತ ಮೂದಲಿಸುತ್ತಾರೆ. ...
ಎಷ್ಟೂ೦ತ ಅಳ್ತೀಯಾ, ಸಾಕಮ್ಮ ಇನ್ನು ಅಳು ಬಗ್ಗೆ ಬರೀಬೇಡ, ಬೇರೇನಾದ್ರೂ ಬರಿ, ಆಗದೆ??
ಚೆನ್ನಾಗಿದೆ.ಅಳೋದು ಸ್ವಾಬಾವಿಕ ಮತ್ತು ಸಹಜತೆ.
@ಕೃಷ್ಣಮೂರ್ತಿ ಅವರೇ...ಹೆಣ್ಣಿನ ಆಯುಷ್ಯಕ್ಕೂ ಅಳುವೇ ಕಾರಣ ಅಂತ ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದಗಳು.
ಸುನಾಥ್ ಅಂಕಲ್....ಧನ್ಯವಾದ. ತುಂಬಾ ಜನ ಹೆಣ್ಣುಮಕ್ಕಳು ಅತ್ರೆ ಅಳುಮುಂಜಿ. ಅದು ಹೆಂಗಸರ ವೀಕ್ ನೆಸ್ ಅನ್ನೋದನ್ನು ಕೇಳಿದ್ದೀನಿ.
ಅಜಾದಣ್ಣ..ನೀವಂದಿದ್ದು ನಿಜ. ಅದಕ್ಕೆ ಗೌರೀಶ ಕಾಯ್ಕಿಣಿ ತುಂಬಾ ಚೆನ್ನಾಗಿ ಹೇಳುತ್ತಾರೆ. ಮರಳಿ ಯತ್ಬವ ಮಾಡು ಗಂಡಿನ ಗೆಲುವಿನ ಗುಟ್ಟು, ಮರಳಿ ಅತ್ತು ನೋಡು ಹೆಣ್ಣಿನ ವಶದ ಸೂತ್ರ ಅಂತ!
ಪರಾಂಜಪೆಯಣ್ಣ...ನಾನು ಅಳ್ತಿಲ್ಲ. ಸುಮ್ಮನೆ ಬರೆದೆ.
ಕೂಸು ಮುಳಿಯಾಲ...ಧನ್ಯವಾದ
ಎಲ್ಲರಿಗೂ ಧನ್ಯವಾದಗಳು
&ಚಿತ್ರಾ ಸಂತೋಷ್
ಧರಿತ್ರಿ ಹೋದರವಿವಾರ ನಾನು ನನ್ನ ಕನಸು ನೋಡಿ ಅತ್ತಿದ್ದೆ ಮತ್ತೆ ಈಗ ಅದನ್ನು ನೆನಪಿಸಿದೀರಿ....
ನನಗೋ ಅನಾಯಾಸವಾಗಿ ಅಳು ಬರುತ್ತದೆ..."ಆನಂದ" ಚಿತ್ರ ನೋಡಿಗಾಗೊಮ್ಮೆ ಅಳುತ್ತೇನಿ...
ಹಾಗೆಯೇ ಲತಾ ಹಾಡಿದ " ಪಿಯಾ ಬಿನಾ ಪಿಯಾ ಬಿನಾ ಬಾಸಿಯಾ ಬಾಜೆನಾ....."ಕೇಳಿದಾಗೊಮ್ಮೆ....
ಅಳೂದು ವೀಕನೆಸ್ಸು ಅಲ್ಲ...
ಅಳು ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯ ಇರಬಹುದು, ವೈದ್ಯ ವಿಜ್ಞಾನ ಕೂಡ ಅತ್ತರೆ ಮನಸ್ಸಿನ ಒತ್ತಡ ಕಡಿಮೆ ಆಗುತ್ತದೆ ಎನ್ನಬಹುದು. ಆದರೆ ಅಳು ಎನ್ನುವುದು ಒಂದು ಚಟ ಆಗುವ ಸಾದ್ಯತೆ ಇದೆ, ಹಾಗು ಅದು ಅತಿ ದುರ್ಬಲ ಮನಸ್ಸಿನ ರೂಪವು ಆಗಿರಬಹುದು.
ಬೇರೆಯವರ ನೆನಪಲ್ಲಿ ಕಣ್ಣು ತುಂಬಿ ಬರೋದು ಬಹಳಷ್ಟು ಸಮಯದಲ್ಲಿ ಅಳು ಆಗಿರಲೆಬೇಕು ಅಂತ ಏನಿಲ್ಲ. ಯಾಕೆ ಅಂದರೆ ಮನಸ್ಸಿಗೆ ತೀರ ಕುಶಿ ಆದಾಗ ಕೂಡ ಕಣ್ಣು ತುಂಬಿ ಕೊಳ್ಳುತ್ತೆ. ಉದಾ: ಭೀಮ ಸೇನಾ ಜೋಷಿ ಹಾಡು ಕೇಳ್ತಾ ಇರಬೇಕಾದ್ರೆ, ವಸಂತ ಲಕ್ಷ್ಮಿ ಹಾಡ್ತಾ ಇರಬೇಕಾದ್ರೆ ಕಣ್ಣು ತುಂಬಿ ಬರೋಲ್ವೇನು?
ಒಳ್ಳೆ ಬರಹ, ಓದಿಸಿಕೊಂಡು ಹೋಯಿತು. :) :) :) :)
ಚಿತ್ರ ಅವರೇ
ನಿಮ್ಮ ಮಾತು ನಿಜ, ಅಳುವಿಗೆ ಅಂತಹ ಶಕ್ತಿ ಇದೆ. ಅಳುವೇ ಸುಖ.
ಅದಕ್ಕೆ ಅಲ್ವೇ ಹೇಳೋದು, ಅತ್ತು ಹಗುರಾಗು ಅಂತ!
Nice.
But, I second Paranjape sir. ;)
ಚೆನ್ನಾಗಿ ಇದೆ ಬರಹ..... ಗುಡ್.
ಏನೋ ನಂಗೊತ್ತಿಲ್ಲಪ್ಪ... ಆದ್ರೆ ಅಳೋರು ತುಂಬಾ ಜನ "ಅಳೋದು ವೀಕ್ ನೆಸ್ಸ್ ಅಲ್ಲ" ಅಂತ ಹೇಳೋದನ್ನ ಕೇಳಿದ್ದೀನಿ :-)
so aLodhu weekness alla :)
chennagittu baraha :)
attaga manasu haguravagutte... :)
nanage alu barolla ri... :)
nice article :)
ಅಳೋದರ ಬಗ್ಗೆ ಚೆನ್ನಾಗಿ ಬರೆದಿದ್ದಿರಾ...
chennagi bardiddeeri...:))
ಚಿತ್ರ,
ನಿಜ...ನೋವಾದಾಗ್, ದುಃಖವಾದಾಗ ಅಳುವುದು ವೀಕ್‌ನೆಸ್ ಅಲ್ಲಾ...ಅವೆಲ್ಲವನ್ನೂ ಹೊರಹಾಕಿ ಮತ್ತೆ ಹೊಸತನವನ್ನು ಪಡೆದುಕೊಳ್ಳುವ ಒಂದು ಸಾಧನ...ಮಾಧ್ಯಮ ಅಷ್ಟೇ. ಆದರೆ ವಿನಾಕಾರಣ ಅಳುವುದು, ಸಣ್ಣ ಪುಟ್ಟ ವಿಷಯಕ್ಕೂ ಕಣ್ಣೀರ್‌ಗೈಯುವುದು ಕೂಡ ಒಳ್ಳೆಯದಲ್ಲ. ಆದರೆ ಒಂದು ಸಂಶೋಧನೆಯ ಪ್ರಕಾರ ಹೆಣ್ಣಿನ ಈ ದುಃಖವನ್ನು ತೋಡಿಕೊಳ್ಳುವ ಪರಿಯಿಂದಾಗಿಯೇ ಆಕೆಗೆ ಹಾರ್ಟ್‌ಅಟೇಕ್ ಬರುವುದು ಕಡಿಮೆಯಂತೆ (ಗಂಡಿಗೆ ಹೋಲಿಸಿದರೆ).
ಉತ್ತಮ ಲೇಖನ. ಇಷ್ಟವಾಯಿತು.
ಚಿತ್ರ ಅವರೇ,
ಅಳುವಿನ ಬಗ್ಗೆ ಚೆನ್ನಾಗಿ ಬರೆದಿದ್ದೀರಿ..
ಅಳೋದೊಂದು weakness ಅಲ್ಲ... ಅದೊಂದು ಅವಶ್ಯಕತೆ, ಅನಿವಾರ್ಯ..
ನೋವನ್ನು ಮರೆಯಲು (ಸ್ವಲ್ಪ ಮಟ್ಟಿಗಾದರೂ) ಒಂದು ಒಳ್ಳೆ ಸಾಧನ ಅಂತಲೇ ಹೇಳಬಹುದು..
ಅಳುವವರ ನೋವನ್ನು ಎದುರಿನವರು ಅರ್ಥ ಮಾಡಿಕೊಂಡಾಗ "ಅಳುಮುಂಜಿ" ಎಂಬ ಮಾತುಗಳು ಹೊರಡುವುದಿಲ್ಲವೇನೋ ಅಲ್ಲವ?
ಮನಸ್ಸಿನ ಭಾವನೆ ಒಮ್ಮೆ ಅಳು ಮೂಲಕ ಬರತ್ತೆ...... ಇದು ಕೆಲವೊಬ್ಬರ ವೀಕ್ನೆಸ್ಸ್ ಕೂಡ..... ಅದನ್ನೇ ಉಪಯೋಗ ಮಾಡಿ ಕೊಳ್ಲೋರೂ ಇದ್ದಾರೆ........... ಅವರನ್ನ ಕಂಡರೆಹೆದರಿಕೆ....
ravi kulal , pls irna book malpule atha . plssssssss
Post a Comment