ಇಂದು ಗಂಡ ಮನೆಗೆ ಕುಡಿದು ಬರಲಾರ ಎಂಬ ಹೆಂಡತಿಯ ಭರವಸೆ , ಇನ್ನು ಸ್ವಲ್ಪೇ-ಸ್ವಲ್ಪ ದಿನ ನನಗೂ ಮದುವೆ ಆಗೇ ಆಗುತ್ತೆ, ನಾಳೆ ನನ್ನನ್ನು ನೋಡ ಬರುವ ಹುಡುಗ ನನ್ನನ್ನು ಒಪ್ಪೇ-ಒಪ್ಪುತ್ತಾನೆ ಎಂಬ ಭರವಸೆ ಹೊತ್ತ 30 ದಾಟಿದ ಯುವತಿ, ಎಂದಾದರೂ ಒಂದು ದಿನ ಆಕೆ ನನ್ನನ್ನು ಇಷ್ಟ ಪಟ್ಟಾಳು ಎಂಬ ಹುಡುಗನ ಸಣ್ಣ ಆಶಾ ಕಿರಣ. ಭರವಸೆಯ ಭಾವಗಳೇ ಹಾಗೆ ನಾವು ಬಿಟ್ಟರು ಅದು ನಮ್ಮನ್ನು ಬಿಡಲಾರವು. "ಭರವಸೆ ಬದುಕಿನ ಪ್ರೀತಿ".. ಬಹುಷಃ ನಾವು ಹುಟ್ಟುವ ಮೊದಲೇ ಬದುಕಿನ ಭರವಸೆಗಳು ನಮಗಾಗಿ ಹುಟ್ಟಿರುತ್ತವೆಯೇನೂ. ಅಡಿಗರು ಅದಕ್ಕೆ ಹೇಳಿರಬೇಕು " ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು ಕರಗೀತು ಮುಗಿಲ ಬಳಗಾ...''
ಹಿಂದಿ ಗೀತಕಾರ ಶೈಲೇಂದ್ರ ಒಂದು ಕಡೆ ಹೀಗೆ ಬರೆಯುತ್ತಾರೆ: " ತು ಜ್ಹಿಂದಾ ಹೈ, ತೋ ಜ್ಹಿಂದಗಿ ಕಿ ಜೀತ್ ಪೆ ಯಕೀನ್ ಕರ್, ಅಗರ್ ಕಹಿ ಹೈ ಸ್ವರ್ಗ್ ತೋ ಉತರ್ ಲಾ ಜಮೀನ್ ಪರ್, ಯೆ ಗಮ್ ಕೆ ಔರ್ ಚಾರ್ ದಿನ್ ಸಿತಮ್ ಕೆ ಔರ್ ಚಾರ್ ದಿನ್ , ಯೆ ದಿನ್ ಭಿ ಜಾಯೆಂಗೆ ಗುಜ್ಹರ್, ಗುಜ್ಹರ್ ಗಯೇ ಹಜ್ಹಾರ್ ದಿನ್"
ನಿಜ ಸಾವಿರಾರು ದಿನಗಳು ಈಗಾಗಲೇ ಕಳೆದು ಹೋಗಿದೆ, ಈಗಿರುವ ಅಳಲು, ಖೇದ, ವೈರ ನಾಚಿಕೆ, ದೋಷ, ಕುಂದು ಕಳೆಯಲೇಬೇಕು. ಯೆ ದಿನ್ ಭಿ ಜಾಯೆಂಗೆ ಗುಜ್ಹರ್. ಈ ಭರವಸೆಯೇ ಹೀಗೆ. ರೆಕ್ಕೆ ಬಿಚ್ಚಿ ಹೃದಯದ ಟೊಂಗೆಯಲ್ಲಿ ಕೂತು ಯಾವ ಪದಗಳಿಲ್ಲದೆ ತನ್ನದೇ ಶೃತಿಯಲ್ಲಿ ನಿರಂತರ ಹಾಡುತ್ತಿರುತ್ತದೆ. ಪರಧಿಯುಳ್ಳ ನಿರಾಸೆಗಳನ್ನು ಬದುಕು ಸ್ವೀಕರಿಸಲೇ ಬೇಕಾಗುತ್ತದೆ , ಆದರೆ ಅನಂತ ಭರವಸೆ, ನಂಬಿಕೆ ಬದುಕಿನ safety vault.
16 comments:
Good one.
bharavase illadiddare bhoomi antya agtittu
ನಿಜವನ್ನು ಹೇಳಿದಿರಿ.ಭರವಸೆಯೇ ಬದುಕಿಗೆ ಬೆಂಬಲ.
ತನ್ನ ಕೃತಿಗೆ ಮನ್ನಣೆ ದೊರೆಯದಿದ್ದಾಗ ಭರ್ತೃಹರಿಯೂ ಇದೇ ರೀತಿ ಹೇಳಿದ್ದ:"ಜಗತ್ತು ವಿಶಾಲವಾಗಿದೆ; ಕಾಲ ಅನಂತವಾಗಿದೆ. ಇಂದಿಲ್ಲ ನಾಳೆ ನನ್ನ ಕೃತಿಯನ್ನು ಮೆಚ್ಚುವವರು ಬಂದಾರು!"
Nijja..
Nambike illada baduku shunya
nivu chenda barithira yendu nambi illi bande..
nanna nambike nijja madidake dhanyavadagalu :)
ಭರವಸೆ ಬದುಕಿನ ನಿರ೦ತರ ತುಡಿತ. ಅದರಿ೦ದಲೇ ಮನ ನಮ್ಮನ್ನು ಬದುಕಿಸಿಟ್ಟಿರುವದು. ಚೆ೦ದದ ಬರಹ.
ಧರಿತ್ರಿ.
ಒಳ್ಳೆಯ ಲೇಖನ,, ನಿಜ, ಭರವಸೆಯೇ ಬದುಕಿಗೆ ಬೆಂಬಲ ಮತ್ತೆ ಸ್ಫೂರ್ತಿ.... ಗುಡ್ article .
ನಿಜ ಚಿತ್ರ ಅವರೇ,
ಭರವಸೆಯ ಬೆಳಕಿನ ಕಿರನ್ದಿಂದಲೇ ನಮ್ಮ ಜೀವನ ಸಾಗಬೇಕು. ಇನ್ದಾಗದ್ದು ನಾಳೆ ಆದೀತೇನೋ ಎಂಬ ಭರವಸೆ ಇರೋದು ಒಳ್ಳೆಯದೇ.
ಧನ್ಯವಾದಗಳು ಭರವಸೆಯ ಭಗ್ಗೆ ತಿಳಿಸಿದ್ದಕ್ಕೆ
ಒಳ್ಳೆಯ ಲೇಖನ, ಭರವಸೆಯೇ ಬದುಕಿಗೆ ಸ್ಫೂರ್ತಿ.
ಭರವಸೆ ಬೇಕು ಬಾಳಿಗೆ...
ಬರಲಿರುವ ಆ ನಾಳೆಗೆ
ಒಳ್ಳೆ ಬರಹ ಧರಿತ್ರಿ ಹಾಗೆಯೇ ನಿಮ್ಮ ಹಿಂದಿ ತಿಳುವಳಿಕೆನೂ ಹೆಚ್ಚಿದೆ....ಅಭಿನಂದನೆಗಳು
ಧರಿತ್ರಿ,
ಭರವಸೆಯೇ ಬದುಕು.
ನಂಬಿಕೆಗಳೇ ಬದುಕನ್ನು ಹಸನುಗೊಳಿಸುತ್ತೆ ಅನ್ನೋದಾದರೆ ಸತ್ಯದ ಹಂಗೇಕೆ ಅಲ್ವ? ದೇವರಿದ್ದನೂ ಇಲ್ವೋ, ಆದರೆ ಇದ್ದಾನೆ ಅನ್ನೋ ಭರವಸೆ ಬದುಕನ್ನು ಕಟ್ಟಿ ಕೊಡುತ್ತೆ, ಹೋರಾಡುವ ಶಕ್ತಿ ನೀಡುತ್ತೆ.
ಅವಳು ನಿಜಕ್ಕೂ ಬರಲಾರಳು, ಆದರೆ ಬರ್ತಾಳೆ ಅಂತ ಕಾಯೋದು ಕೂಡ ಜೀವನ ಅಲ್ವ?
ಒಳ್ಳೆ ಲೇಖನ.
ಬೀchi ತಮ್ಮ 'ಭಯಾಗ್ರಫಿ'ಯಲ್ಲಿ ಹೇಳಿದಂತೆ ಯಾರ ಬಾಳೂ,ಬಾಳಲಾರದಷ್ಟು,ಬಾಳಬಾರದಷ್ಟು,ಕೆಟ್ಟದ್ದಲ್ಲ.
Every thing will take care of itself
ಎನ್ನುವ ಭರವಸೆಯೇ ಬಾಳನ್ನು ನಡೆಸುವ ಚಾಲಕ ಶಕ್ತಿಯಲ್ಲವೇ?ಬರಹ ಚೆನ್ನಾಗಿದೆ.ಧನ್ಯವಾದಗಳು.
ಮರ್ತೇ ಬಿಟ್ಯಾ..ನಿನ್ನ ಜಲನಯನಾನ...? ಚಿತ್ರಮ್ಮಾ...ಮೊದಲ ಹೆಜ್ಜೆ ನನ್ನದೇ ಆಗಲಿ ಆಗಲಾದರೂ ನಿನ್ನ ಹೆಜ್ಜೆ ಜಲದೆಡೆಗೆ ನಯನ ತಿರುಗಿಸುತ್ತೋ ಏನೋ...??
ಗುಜರೆಂಗೆ ಚಾರ್ದಿನ್ ಗುಜರ್ ಗಯೆ ಹಜಾರ್ ದಿನ್ ...ಹೌದಲ್ಲ....ಕಾಲಾತೀತರಿಗೆ ನಿಜ,..ಆದರೆ ನಮಗಲ್ಲ..ಅಲ್ಲವೇ?? ನಮ್ಮದು ಏನಿದ್ರೂ ಭರವಸೆಗಳ ಬದುಕಾಗಬೇಕು...ಅದಿಲ್ಲದಿದ್ರೆ ದುರ್ಭರ ಅನಿಸುತ್ತೆ ಜೀವನ...ನೌಕರಿ ಸಿಗದವ..ನಾಳೆಯೋ ನಾಡಿದ್ದೋ ನೌಕರಿ ಸಿಗುತ್ತೆ ಅನ್ನೋ ಭರವಸೆ ಇಟ್ಕೋತಾನೆ...ಹಾಗೆ...
ಚಿತ್ರಾ ಅವರೆ,
ನಿಜ .. ಭರವಸೆಯಿಲ್ಲದ ಬದುಕು ಬದುಕಲ್ಲ ..
ಚೆನ್ನಾಗಿದೆ ಲೇಖನ.
nice one!!!!!!!!
True,
tumba naija satya
Good one, tumba ista aytu
Post a Comment