ಹೌದು, ಯಾಕೋ ಸ್ವಾಭಿಮಾನದ ಬಗ್ಗೆ ಬರೆಯೋಣ ಅನಿಸ್ತಾ ಇದೆ. ಸ್ವಾಭಿಮಾನಕ್ಕೆ ಬಿದ್ದ ಪುಟ್ಟ ಪೆಟ್ಟು ಕೂಡ ಆ ಬಗ್ಗೆ ನಮ್ಮನ್ನು ಮತ್ತೆ ಮತ್ತೆ ಈ ಬಗ್ಗೆ ಯೋಚಿಸುವಂತೆ ಮಾಡುತ್ತೆ, ಕಾಡುತ್ತೆ ಅಲ್ವಾ?
ಸ್ವಾಭಿಮಾನ. ..! ನನಗೂ, ನಿಮಗೂ ಅದು ಇದೆ...ಬದುಕುವ ಪ್ರತಿಯೊಬ್ಬರಿಗೂ ಇದೆ. ಹುಟ್ಟುವಾಗ ಸ್ವಾಭಿಮಾನ ಅಂದರೆ ಏನು ಗೊತ್ತಿರಲಿಲ್ಲ. ಅಮ್ಮ ಆಗಾಗ ಬದುಕಿಗೆ ಬೇಕಾಗುವಷ್ಟು ಹೇಳಿಕೊಡುತ್ತಿದ್ದ ಸ್ವಾಭಿಮಾನದ ಪಾಠ ಪ್ರತಿಹೆಜ್ಜೆಯಲ್ಲೂ ನೆನಪಾಗುತ್ತಿದೆ.'ಮಗು ಸ್ವಾಭಿಮಾನ ಬಿಟ್ಟು ಬದುಕಬೇಡಮ್ಮಾ...'ಅನ್ನುತ್ತಿದ್ದಳು ಪ್ರೀತಿಯ ಅಮ್ಮ. ಬಡತನ ಬೇಗೆಯಲ್ಲಿ ನರಳುತ್ತಿರುವಾಗಲೂ ಪ್ರತಿ ಅಮ್ಮ ಹೇಳಿಕೊಡುವ ಪಾಠ ಅದು ಸ್ವಾಭಿಮಾನದ ಬದುಕು. ನಮ್ಮಮ್ಮ ನಿಮ್ಮಮ್ಮ ಹೇಳಿಕೊಡುವ ಬದುಕಿನ ಮೊದಲ ಪಾಠ ಸ್ವಾಭಿಮಾನದ ಬದುಕು ಅಲ್ವೇ?
ಹೌದು,
ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಅದೆಷ್ಟು ನೋವಾಗುತ್ತೆ ಅಲ್ವಾ? ಅದೇ ಆಫೀಸ್ನಲ್ಲಿ ಬಾಸ್, ಆತ್ಮೀಯ ಗೆಳೆಯ, ಪ್ರೀತಿಯ ಗೆಳತಿ....ಯಾರೇ ಆಗಲೀ ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟಾಗ ಮನಸ್ಸೆಷ್ಟು ನೋಯುತ್ತೆ ಅಲ್ವಾ? ಹೌದು, ಹಗಲಿಡೀ ಬೆನ್ನು ಮುರಿದು ಕೆಲಸ ಮಾಡಿದರೂ ಬಾಸ್ ಬೈತಾನೆ..ಥತ್ ನೀನು ಕೆಲಸಕ್ಕೆ ನಾಲಾಯಕ್ಕು ಅಂತಾನೆ. ಯಾರದೋ ಕೋಪವನ್ನು ತಮ್ಮ ಮೇಲೆ ತೀರಿಸಿಕೊಳ್ಳೋ ಬಾಸ್ , ನಮ್ಮ ಹೆಸರಿನ ಮುಂದಿರುವ ಡಿಗ್ರಿಯನ್ನು ಅಣಕಿಸುತ್ತಾನೆ. ಓದಿದ್ದು ವ್ಯರ್ಥ, ಕಲಿತದ್ದು ವ್ಯರ್ಥ, ನಿನ್ನ ಮಿದುಳಿನಲ್ಲಿ ಏನೂ ಇಲ್ಲ..ಅಂತಾ ಬಿಸಿಬಿಸಿಯಾಗಿ ಬೈತಾನೆ. ಹೊಟ್ಟೆಪಾಡು...ಮೈಯೆಲ್ಲಾ ಬೆಂಕಿ ಹರಿದರೂ ಬಾಯಿ ಮೌನವಾಗುತ್ತೆ. ಒಳಗೊಳಗೆ ಮನಸ್ಸು ನೋವು ಪಡುತ್ತೆ ಅಲ್ವಾ?
ನಾನೂ ಅಷ್ಟೇ..ಬದುಕನ್ನು ಪ್ರೀತಿಸಿದಷ್ಟೇ ಸ್ವಾಭಿಮಾನವನ್ನೂ ಪ್ರೀತಿಸ್ತೀನಿ. ಅದೇಕೋ ಗೊತ್ತಿಲ್ಲ..ಯಾರೇ ಆಗಲೀ ಸ್ವಾಭಿಮಾನಕ್ಕೆ ಹರ್ಟ್ ಆಗೋ ಏನು ಹೇಳಿದ್ರೂ ನಂಗೆ ಸಹಿಸಕ್ಕಾಗಲ್ಲ. ಥಟ್ಟನೆ ಎದುರು ಮಾತಾಡ್ತೀನಿ. ಅವರನ್ನು ಅಲ್ಲೇ ನಿರಾಕರಿಸಿ ಬಿಡ್ತೀನಿ. ಮತ್ತೆಂದೂ ಅವರನ್ನು ನನ್ನ ಕಣ್ಣುಗಳು ತಿರುಗಿ ನೋಡಲ್ಲ, ಅವರ ಜೊತೆ ಮಾತಾಡಬೇಕೆಂದು ಮನಸ್ಸಿಗೆ ಹೇಳೊಲ್ಲ, ಅವರ ಕುರಿತು ಕಿಂಚಿತ್ತೂ ಗೌರವ ಮೂಡಲ್ಲ, ಪ್ರೀತಿ ಮೂಡಲ್ಲ, ಕಾಳಜಿ, ಅನುಕಂಪ ಮೂಡಲ್ಲ. ಒಂದು ರೀತಿಯಲ್ಲಿ ಸಮಸ್ತ ಬಾಂಧವ್ಯಗಳು ಅವರಿಂದ ಕಳಚಿಬಿಡುತ್ತೆ. ಇದಕ್ಕೆ ನೀವೂ ಹೊರತಾಗಿಲ್ಲ ಅಂದುಕೊಂಡಿದ್ದೀನಿ.
ಒಂದು ಪುಟ್ಟ ಘಟನೆ. ನಾನು ನಿತ್ಯ ನೋಡೋ ಆಂಟಿ ಒಬ್ರು ಇದ್ದಾರೆ. ಆಂಟಿ ಒಳ್ಳೇ ಮನಸ್ಸಿನವರೇ. ಆದರೆ ಅದೇಕೇ ಗಂಡನಿಗೆ ಹೊಡೀತಾರೆ ಗೊತ್ತಾಗಲ್ಲ. ಪಾಪ, ಗಂಡನಿಗೆ ಹೊಡೆದು ಬಂದು ಅದನ್ನೇ ಅವರಿಗೆ ನಾಲ್ಕು ಕೊಟ್ಟೆ ಅನ್ತಾರೆ. ನಮಗೇ ಅಸಹ್ಯ ಆಗಿಬಿಡುತ್ತೆ. ಪಾಪ ಆ ಗಂಡ ಯಾರ ಮುಖನೂ ನೋಡಲ್ಲ. ನನಗನಿಸೋದು ಆ ಗಂಡನಿಗೆ ಸ್ವಲ್ಪನೂ ಸ್ವಾಭಿಮಾನ ಇಲ್ವಾ? ಅದನ್ನು ಮಾರಿಟ್ಟು ಹೆಂಡತಿ ಜೊತೆ ಬದುಕಬೇಕಾ? ಛೇ! ಅನಿಸುತ್ತೆ. ನೋಡುಗರಿಗೆ ಇದೊಂಥರಾ ತಮಾಷೆ ಅನಿಸಿದ್ರೂನೂ , ಇದರೊಳಗಿನ ಸೂಕ್ಷ್ಮ ತುಂಬಾ ನೋವು ಕೊಡುತ್ತೆ.
ಸ್ವಾಭಿಮಾನ ನಮ್ಮ ಸ್ವತ್ತು, ನಮ್ಮ ಬದುಕು, ಬಿಟ್ಟುಕೊಡಬೇಡಿ, ಹೊಟ್ಟೆಗೆ ತುತ್ತಿಲ್ಲಾಂದ್ರೂ,....ಏನಂತೀರಿ?
Subscribe to:
Post Comments (Atom)
18 comments:
ಎಲ್ಲಿಂದ ಬಂದಳೀ ಸ್ವಾಭಿಮಾನದ ಸಾಹಸಿ ಹೆಣ್ಣು? ಈ ಶತಮಾನದ ಮಾದರಿ ಹೆಣ್ಣು? ...ಹಾಂ..?? ಭಪ್ಪರೇ..!!!.ಒಂದಂತೂ ನಿಜ ಸ್ವಾಭಿಮಾನ ತನ್ನ ಮೇಲೆ ತನಗೆ ಅಭಿಮಾನ ಇದ್ದಾಗ ಮಾತ್ರ ಸಾಧ್ಯ...ತನ್ನ ಮೇಲೆ ತನಗೇ ಜಿಗುಪ್ಸೆ ಇದ್ದರೆ..ನೋ..ಚಾನ್ಸ್..!! ಇದು ಒಂದು ರೀತಿಯ ಆತ್ಮಾಹುತಿಯೇ ಸರಿ...
ಧರಿತ್ರಿಗೆ ಅಭಿನಂದನೆಗಳು..ಅದರ್ಲ್ಲು ದುಡಿವ ಮಹಿಳೆಗೆ ಅದು ಬಹು ಅವಶ್ಯಕ ಇಲ್ಲ ಅಂದ್ರೆ ಗೋಮುಖರು..ಓವರ್ಟೇಕ್ ಮಾಡ್ತಾರೆ...
"ಆಂಟಿ ಒಳ್ಳೇ ಮನಸ್ಸಿನವರೇ. ಆದರೆ ಅದೇಕೇ ಗಂಡನಿಗೆ ಹೊಡೀತಾರೆ ಗೊತ್ತಾಗಲ್ಲ. ಪಾಪ, ಗಂಡನಿಗೆ ಹೊಡೆದು ಬಂದು ಅದನ್ನೇ ಅವರಿಗೆ ನಾಲ್ಕು ಕೊಟ್ಟೆ ಅನ್ತಾರೆ. ನಮಗೇ ಅಸಹ್ಯ ಆಗಿಬಿಡುತ್ತೆ. ಪಾಪ ಆ ಗಂಡ ಯಾರ ಮುಖನೂ ನೋಡಲ್ಲ. ನನಗನಿಸೋದು ಆ ಗಂಡನಿಗೆ ಸ್ವಲ್ಪನೂ ಸ್ವಾಭಿಮಾನ ಇಲ್ವಾ? ಅದನ್ನು ಮಾರಿಟ್ಟು ಹೆಂಡತಿ ಜೊತೆ ಬದುಕಬೇಕಾ?" ಕ್ಷಮಿಸಿ ಧರಿತ್ರಿ ಈ ಪ್ರಶ್ನೆಗೆ ಅವನು ಏನು ತಾನೆ ಮಾಡಬೇಕು? ತಿರುಗಿ ಹೊಡೆದರೆ ಅವಳು ಗಂಡ ದಬ್ಬಾಳಿಕೆ ಮಾಡುತ್ತಿದ್ದಾನೆ ಎಂದು ಮಹಿಳಾ ಸಂಘಟನೆಯ ಮೊರೆ ಹೋಗುತ್ತಾಳೆ. ಡೈವೋರ್ಷ ಕೇಳಿದರೆ ಕೊಡದೆ ಹಿಂಸಿಸುತ್ತಾಳೆ. ಮೊನ್ನೆ ತಾನೆ ಬಂದ ಮುಂಬೈ ಹೈಕೋರ್ಟ್ ತೀರ್ಪೊಂದರ ಪ್ರಕಾರ ಇನ್ನುಮುಂದೆ ಹೆಂಡತಿ ಬಯ್ದರೆ ಬಯಿಸಿಕೊಳ್ಳಬೇಕು ಎನ್ನುವ ಕಾನೂನು ಬಂದಿದೆ. ಮುಂದೆ ಹೊಡೆದರೆ ಹೊಡೆಸಿಕೊಳ್ಳಬೇಕು ಎನ್ನುವ ಕಾನೂನು ಬಂದರೂ ಅಚ್ಚರಿಯಿಲ್ಲ! ಈಗೀಗ ಕಾನೂನುಗಳು ಮಹಿಳೆಯರ ಪರವಾಗಿ ಇರುವಾಗ ಪಾಪ ಪುರುಷರು ತಾನೆ ಏನು ಮಾಡ್ಯಾರು?
ಉಳಿದಂತೆ ಲೇಖನದ ಆಶಯ ಚನ್ನಾಗಿದೆ.
ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸಹಿಸುವುದು ಕಷ್ಟ...ಒಳ್ಳೆಯ ಬರಹ
ನಿಮ್ಮ ಮಾತು ಅಕ್ಷರಷಃ ನಿಜ ಸ್ವಾಭಿಮಾನ ಬಿಟ್ಟು ಬದುಕುವುದು ಕಷ್ಟ. ಅತಿಯಾದರೆ ಅಹಂಕಾರ ಎನಿಸಿಕೊಳ್ಳುವ ಸ್ವಾಭಿಮಾನ ಮನುಷ್ಯನಿಗೆ ಇರಲೇಬೇಕು.
ನೂರು ಪ್ರತಿಶತ ಒಪ್ಪತಕ್ಕ೦ತಹ ಮಾತು ಧರಿತ್ರಿಯವರೇ.....
ಧರಿತ್ರಿ ನೀವು ಹೇಳೋ ಆ ಆಂಟಿ ಯಾರು ಆ ಗಂಡನ ಬಗ್ಗೆ ಅಯ್ಯೋ ಅನಿಸುತ್ತೆ
ಧರಿತ್ರಿ,
ನೀವು ಅನ್ನೋದು ನಿಜ, ಸ್ವಾಭಿಮಾನವಿಲ್ಲದ ಬದುಕು ಅಸಹ್ಯವಾಗಿಬಿಡುತ್ತದೆ. ತುಂಬಾ ಚಂದವಾಗಿ ಬರೆದಿದ್ದೀರಿ.
ಸ್ವಾಭಿಮಾನ ಪ್ರತಿಯೊಬ್ಬರ ಸ್ವತ್ತು, ಅದನ್ನು ಉಳಿಸಿ ಬೆಳೆಸಿಕೊಂಡಾಗ ಮಾತ್ರ ಜೀವನ ಸಾರ್ಥಕ
ಬದುಕೋದು ಮುಖ್ಯವೋ, ಸ್ವಾಭಿಮಾನ ಮುಖ್ಯವೋ? ಬಹಳ ಸೂಕ್ಷ್ಮವಾದ ವಿಷಯ!
ಸ್ವಾಭಿಮಾನಿ ಧರಿತ್ರಿ, ಚೆನ್ನಾಗಿದೆ ಬರಹ
ನಿಜ ಧರಿತ್ರಿ ಯವರೇ..
ನಮ್ಮೆಲ್ಲರ ಮೊದಲಗುರು ಅಮ್ಮ ಎಲ್ಲ ಪಾಠಗಳ ಜೊತೆಗೆ ಸ್ವಾಭಿಮಾನದ ಪಾಠವನ್ನೂ ಕಲಿಸಿರುತ್ತಾಳೆ...
ಅದೆಷ್ಟೋ ಕಷ್ಟದ ಪರಿಸ್ಥಿತಿಗಳಲ್ಲಿ ತನ್ನ ಸ್ವಾಭಿಮಾನ ಬಿಡದ ಅಮ್ಮ ನಮ್ಮಲ್ಲೂ ಆ ಗುಣಗಳನ್ನೇ ತುಂಬಿದ್ದಾಳೆ... ಸ್ವಾಭಿಮಾನಕ್ಕೆ ಯಾರಾದರೂ ಕುಂದು ತರುವಂತೆ ನಡೆದುಕೊಂಡರೆ ಮೈಯೆಲ್ಲಾ ಉರಿಯುತ್ತೆ... ನಾನೂ ಕೂಡಾ ಎಷ್ಟೋ ಭಾರಿ ಜೀವದ ಗೆಳೆಯರಂತಿದ್ದವರ ಜೊತೆ ಸ್ವಾಭಿಮಾನದ ವಿಷಯದಲ್ಲಿ ಜಗಳವಾಡಿಕೊಂಡಿದ್ದೇನೆ... ಸ್ವಾಭಿಮಾನ ಇಲ್ಲಾ ಅಂದ್ರೆ ಅದೊಂದು ಬದುಕೇ ಅಲ್ಲಾ ಅಂತಲೇ ನನ್ನ ಅನಿಸಿಕೆ... ಉತ್ತಮ ಬರಹ.. ಧನ್ಯವಾದಗಳು...
hi,
yesto dinnagala nantara
blog odalu bandavalige olleya barahavee sikithu...
Jeeva adru bidthivi andre swabimana bidolla alwa?
chennagide :)
ಧರಿತ್ರಿ,
ಚೆನ್ನಾಗಿ ಬರೆದಿದ್ದೀರಿ.. ನಿಜಕ್ಕೂ ಯೋಚಿಸುವಂತೆ ಮಾಡಿತು ಲೇಖನ..
-ಗೋದಾವರಿ
gandasaru samsaarakkaagi pettu sahisuttaara/konekaalada bhayadinda pettu sahisuttaara? arthavaaguttilla.
olleya baraha dharithri.
daane parbogu oorugu povara unda?
ನಾನು ಸ್ವಭಿಮಾನಿಯೇ.
ಒಮ್ಮೆ ನಮ್ಮ ಕಾಲೇಜಿನ ಲೆಕ್ಚರ್ ನನ್ನನ್ನು ಅಣುಕಿಸಿದಾಗ, ಅವರಿಗೆ ಸರಿಯಾಗಿ ಪಾಠ ಕಳಿಸಿದ್ದೆ..
ಅದನ್ನು ಒಂದು ಲೇಖನದಲ್ಲಿ ಬರೀತೀನಿ...
ಕೆಲವೊಂದು ಬಾರಿ, ಸತ್ಯ ನಮ್ಮ ಪರವಾಗಿ ಇದ್ದರು, ತಲೆ ತಗ್ಗಿಸಬೇಕಾಗುತ್ತದೆ. ಕಾರಣ ಸನ್ನಿವೇಶ...
ಒಳ್ಳೆಯ ಬರಹ.
ಬರಹ ಚೆನ್ನಾಗಿದೆ... ಆದರೆ,Too much is too bad .... ಯಾವಾಗ , ಎಲ್ಲಿ ಎಷ್ಟು ಬೇಕೋ ಅಷ್ಟೆ ಇದ್ರೆ ಚೆಂದ.. ಇಲ್ಲಾಂದ್ರೆ ಅಹಂಕಾರಿ ಅನ್ನಿಸಿ ಕೊಳ್ಳಬೇಕಾಗುತ್ತೆ..
ಅರ್ಥಪೂರ್ಣವಾದ ಲೇಖನ. ಸ್ವಾಭಿಮಾನಕ್ಕೆ ದಕ್ಕೆ ಆದರೆಂತೂ ನೋವಾಗುವುದು ಖಚಿತ.
ಸ್ವಾಭಿಮಾನ ಬೇಕೆನ್ನುವುದು ಸರಿ...ಅನೇಕ ಬಾರಿ ಸ್ವಾಭಿಮಾನವಿದ್ದರೂ ಸನ್ನಿವೇಶಕ್ಕೆ ತಕ್ಕಂತೆ ವರ್ತಿಸಬೇಕಾಗುತ್ತದೆ. ಇವೆರಡರಲ್ಲೂ ಸಮತೋಲನವಿದ್ದರೆ ಚೆನ್ನ.
ಚೆನ್ನಾಗಿದೆ
ಆದರೆ ಸ್ವಾಭಿಮಾನ ದ ಅತಿರೇಕವೇ ದುರಭಿಮಾನ. ಎಲ್ಲಿಯವರೆಗೆ ಸ್ವಾಭಿಮಾನ ದುರಭಿಮಾನದಿಂದ ದೂರವಿರುತ್ತದೆಯೋ ಅಲ್ಲಿಯವರೆಗೆ ಪ್ರತಿಯೊಬ್ಬರೂ ಸ್ವ ಅಭಿಮಾನವನ್ನು ಪ್ರೀತಿಸಬೇಕು
ಆದರೆ ಒಮ್ಮೆ ದುರಭಿಮಾನ(ಅಂದರೆ ತಮ್ಮತನದ ಬಗ್ಗೆ ಅಹಂಕಾರ) ಕಾಲಿಟ್ಟಿತೆಂದರೆ ಪ್ರೀತಿಸುವ ಮನಸುಗಳು ದೂರಾಗುವ ಸಾಧ್ಯತೆ ಹೆಚ್ಚ್ಜ್
Post a Comment