ಜೀವನ ಪ್ರೀತಿಯ ಅನುಭೂತಿ!
ಒಂದೇ ಒಂದು ಕ್ಷಣಕ್ಕೆ ನೀನು ಕವಿತೆಯಾಗು, ಮಳೆ ಬರ್ತಾ ಇದೆ!
ಬದುಕಿನಲ್ಲಿ ಇಟ್ಟಿದ್ದು ಎರಡನೇ ಹೆಜ್ಜೆ, ಅದರಲ್ಲಿ ಒಂದು ನೀನು!
ಮನಸ್ಸು ಒಣಗಿತ್ತು, ಥಟ್ಟನೆ ನೆನಪುಗಳು ಮುತ್ತಿದವು!
ನಗುಮಳೆಯಲ್ಲಿ ತೊಯ್ದುಬಿಡ್ತೀನಿ, ಕವನ ಬರೇತೀಯಾ ಹೇಳು!
ಒಡೆಯದಿರು ಕನ್ನಡೀನಾ..ಮತ್ತೆ ಒಂದಾಗಿಸೋಕೆ ಆಗೋಲ್ಲ.
ನಾನ್ಯಾಕೆ ನಗಬೇಕು..ನಿನ್ನ ನಗುವೇ ನನ್ನೊಳಗಿರುವಾಗ!
ಅಂದು ತುಂಬಾ ಅತ್ತಿದ್ದೆ. ನೀನು ಅಮ್ಮನಾಗಬೇಕಂದಿತ್ತು ಮನಸ್ಸು!
ನಿನ್ನ ನಗು ಮತ್ತು ಕಣ್ಣುಗಳನ್ನು ಪ್ರೀತಿಸ್ತೀನಿ. ಖುಷಿಯಲ್ಲಿದ್ದಾಗ ಬೆಳಕು ಕೊಡು.
ಯಾಕೋ ಕಾಡುತ್ತಿವೆ ಬಚ್ಚಿಟ್ಟುಕೊಂಡ ನೆನಪುಗಳು, ಆದರೆ ಅವುಗಳಿಗೆ ಜೀವವಿರಲಿಲ್ಲ!
ಕನಸು ಕಲ್ಲಾಗುವ ಮೊದಲು, ಹುಣ್ಣಿಮೆ ಬೆಳದಿಂಗಳು ಸೂಸಿಬಿಡು, ನಾನೂ ನಗುತ್ತೇನೆ..ನಿನ್ನಂತೆ!
ಬೆಳದಿಂಗಳಲ್ಲಿ ಕಲ್ಲು ಬೆಂಚಿನ ಮೇಲೆ ಕುಳಿತ ಎನಗೆ ಅಮ್ಮ ನೀಡಿದ ತುತ್ತು ನೆನಪಾಯಿತು, ಅಲ್ಲಿ ನಗುತ್ತಿದ್ದೆ!
Subscribe to:
Post Comments (Atom)
22 comments:
ವಾಹ್! ಚೆನ್ನಾಗಿದೆ. ಇಷ್ಟ ಆಯ್ತು.
ಅಷ್ಟೂ ಸಾಲುಗಳು ಹಿಡಿಸಿತು. ಮತ್ತಷ್ಟು ಬರೆಯಿರಿ..
ನಮಸ್ಕಾರ ಧರಿತ್ರಿ,
ಮರಳಿನಲ್ಲಿ ಶಂಖ ವಿರುತ್ತಲ್ಲ... ಹಾಗೆ ನಿಮ್ಮ ಕವನ...!
ಶಂಖದ ತುಂಬಾ ಅದ್ಭುತ ತುಂಬಿರುತ್ತೆ... ನಿಮ್ಮ ಬರಹದಲ್ಲೂ ಹಾಗೇ... ಓದಿಕ್ಕೊಂಡಂತೆ ಕುತೂಹಲಿಗಳಗಳಾಗ್ತೀವಿ...
"ಕನಸು ಕಲ್ಲಾಗುವ ಮೊದಲು, ಹುಣ್ಣಿಮೆ ಬೆಳದಿಂಗಳು ಸೂಸಿಬಿಡು, ನಾನೂ ನಗುತ್ತೇನೆ..ನಿನ್ನಂತೆ!"
ಯಾರ್ರೀ.. ಅದು... ? ಹೇಳಿ ಬಿಡಿ... ಪ್ಲೀಸ್...
ಧನ್ಯವಾದಗಳೊಂದಿಗೆ,
-ಗಿರಿ
ಓದುತ್ತಾ ಹೋದಂತೆ ಒಂದೊಂದು ಸಾಲೂ ಒಂದೊಂದು ಕವನ ಅನ್ನಿಸ್ತು. ತುಂಬಾ ಭಾವಪೂರ್ಣವಾಗಿವೆ. ಮನಸ್ಸಿನ ಭಾವನೆಗಳನ್ನೆಲ್ಲ ಹೀಗೆ ಒಂದೊಂದೇ ಸಾಲಲ್ಲಿ ಹೇಳಿದ್ದು ತುಂಬಾ ಇಷ್ಟವಾಯಿತು.
ಭಾವನೆ ತುಂಬಿದ ಸಾಲುಗಳು.
ಮನಸ್ಸನ್ನು ತಟ್ಟುತ್ತವೆ.
Hi..Dharithri,
Naanu kavana astu odalla.But ee lekhana nanna manasige ista haagu novu yeradannu kottide..Good..keep it up...
Shekar suvarna.k
ಹಲವಾರು..ಕಾಡುವ ಭಾವನೆಗಳು...ಕಾಡುವ ವ್ಯಕ್ತಿತ್ವಗಳು..ಅವುಗಳನಡುವೆ ಸಾಂತ್ವನ ನೀಡುವ ಹತ್ತಿರದವರು..ಕೆಲವರು ನಿರ್ವಿವಾದ ಆಪ್ಯರು, ಮತ್ತೆಕೆಲವರು..ವಾದಿಸುವುದರಿಂದ ಆಪ್ಯರು..ಮತ್ತೂ ಹಲವರು ಕಾಡಿಸಲೆಂದೇ ವಾದಿಸುವವರು..ಎಲ್ಲರನ್ನೂ ..ಎಲ್ಲವನ್ನೂ..ಒಟ್ತಿಗೆ ಹಾಕಿ...ಕಲಕಿ ಭಾವನೆಯ ಎಳೆಗಳನ್ನು ತೆಗೆದು ತೋರಿಸುವಂತಿದೆ ನಿಮ್ಮ ಕವನ/ಕವಿತೆ (ನನ್ಗೆ ಈವರೆಗ್ಗೂ ಗೊತ್ತಿಲ್ಲ ಯಾವುದು ಯಾವುದೆಂದು...ಹಹಹ)......ಧರಿತ್ರಿ...ಅಂತೂ ನಮ್ಮ ಸಾಲಿಗೆ ಬಂದುಬಿಟ್ಟಿರಿ...ಈಗ ಒಟ್ಟಿಗೆ ಈಜುವಾಗ..ಗೊತ್ತಾಗುತ್ತದಲ್ಲ..ಹೊರಗಡೆ ನಿಂತು..ಕೈ ಹೀಗೆ ಆಡಿಸು..ಕಾಲು ಹೀಗೆ ಬಡಿ...ಉಸಿರನ್ನು ಹೀಗೆ ನಿಯಂತ್ರಿಸು ಎನ್ನುವುದು ಸುಲಭ..ಅದನ್ನು ಕೊಳದಲ್ಲಿದ್ದು ಮಾಡುವುದು ....ಓಹ್..!!! ಎಂದು...!!!!
ಒಳ್ಳೆಯ ಪೋಸ್ಟ್...
ಆಗಾಗ ಕಾಡುವ ಬಚ್ಚಿಟ್ಟುಕೊಂಡ ನೆನಪುಗಳಿಗೆ ಜೀವವಿರೋದಿಲ್ಲ... ಆದರೆ ಅವು ಹೊಸ ಹುರುಪು, ಹೊಸ ಉತ್ಸಾಹ ಕೊಟ್ಟು ಇಂತಹ ಸುಂದರ ಕವಿತೆಗೆ ಸ್ಪೂರ್ತಿ ನೀಡುತ್ತವೆ... ತುಂಬಾ ಇಷ್ಟವಾಯ್ತು...
ದಿಲೀಪ್ ಹೆಗಡೆ
@ಪ್ರೀತಿಯ ವಿಕಾಸೂ, ಲಕ್ಷ್ಮಿಕಾಂತ್, ಸುನಾಥ್ ಅಂಕಲ್...ಬೆನ್ನುತಟ್ಟಿದ್ದಕ್ಕೆ ಥ್ಯಾಂಕ್ಸ್ಉ...ಬರ್ತಾ ಇರಿ.
@ಗಿರಿ..ಯಾರಿಲ್ಲಾತರಿ ಸುಮ್ ಸುಮ್ಮನೆ ಗೀಚೋದು ಅದೆಲ್ಲ. ಭಾವನೆಗಳಿದ್ರೆ ಸಾಕು ಯಾರೂ ಬೇಕಂತಿಲ್ಲ. ಹೊಗಳಿ ಹೊನ್ನಶೂಲಕ್ಕೇರಿಸಿದ್ದೀರಿ..ಕೋಡು ಬಂದಿದೆ ನಂಗೆ. ಹೆಹೆಹೆ!
@ಉಮೇಶ್..ನಿಮ್ಮ ಪ್ರೋತ್ಸಾಹ ನನಗೆ ಇನ್ನಷ್ಟು ಬರೆಯೋಕೆ ಸ್ಫೂರ್ತಿ.
@ಜಲನಯನ ಸರ್..ಅದು ಕವನನಾ? ದೇವರೇ ಬಲ್ಲ..ಸುಮ್ಮನೆ ಗೀಚಿದ್ದು. ನೀವೆಲ್ಲ ಕವನ ಅಂದಿದ್ದು ನಂಗೆ ತುಂಬಾ ಖುಷಿಯಾಗಿದೆ, ಸ್ಫೂರ್ತಿಯಾಗಿದೆ. ಬರ್ತಾ ಇರಿ.
@ದಿಲೀಪ್ ಹೆಗಡೆ ಸರ್..ಧರಿತ್ರಿಗೆ ಸ್ವಾಗತ. ಬರ್ತಾ ಇರಿ...ನಿಮ್ಮ ಮಾತುಗಳು ನನಗೆ ಮತ್ತಷ್ಟು ಭಾವಗಳನ್ನು ಹನಿಗಳಾಗಿಸೋಕೆ ಸ್ಫೂರ್ತಿಯಾಗಲಿವೆ.
@ಶೇಖರ್..ಕ್ಷಮಿಸಿ, ನೋವು ಕೊಡೋಕೆ ನಾ ಬರೆದಿಲ್ಲ. ಏನೋ ಮನದೊಳಗೆ ಮಡುಗಟ್ಟಿದ ಭಾವಗಳು ಹೊರಬಂದಾಗ ಈ ರೀತಿ ಆಗಿಬಿಡ್ತಾವೆ.ಭಾವಗಳೇ ಬರಹಗಳಾಗುತ್ತವೆ, ಹಾಗಿದ್ದರನೇ ಮನಸ್ಸು ಹಗುರಾಗೋದು, ಖುಷಿಯಾಗೋದು ಅಲ್ವೇ? ಬಂದಿದ್ದಕ್ಕೆ ಧನ್ಯವಾದಗಳು. ಬರ್ತಾ ಇರಿ. ಇನ್ನೊಂದು ಸಲ ಬರುವಾಗ ನೀವು ಖುಷಿಪಡೋ ಬರಹ ನಿಮ್ಮ ಕಾದಿರುತ್ತೆ.
-ಧರಿತ್ರಿ
ಧರಿತ್ರಿ ಎ೦ಬ ಕವಯಿತ್ರಿ
ನೀನು "ಹಾಗೆ ಸುಮ್ಮನೆ" ಗೀಚಿದ ಸಾಲುಗಳು ಅನನ್ಯ ಭಾವನೆಗಳನ್ನು ಸೂಸುವ ಕವನವಾಗಿರುವುದು ಎಷ್ಟು ನಿಜವೋ, ನಿನ್ನೊಳಗೆ ಅತ್ಯುತ್ತಮ ಕಾವ್ಯ ರಚನಾ ಶಕ್ತಿ ಇರುವುದು ಕೂಡ ಅಷ್ಟೇ ನಿಜ. ಮು೦ದುವರಿಸು.
"ಯಾಕೋ ಕಾಡುತ್ತಿವೆ ಬಚ್ಚಿಟ್ಟುಕೊಂಡ ನೆನಪುಗಳು, ಆದರೆ ಅವುಗಳಿಗೆ ಜೀವವಿರಲಿಲ್ಲ!"
ಅದ್ಯಾಕೋ ಗೊತ್ತಿಲ್ಲ .. ಈ ಸಾಲನ್ನ ಓದುತ್ತಿದ್ದಂತೆ ಮನದ ಮೂಲೆಯಲ್ಲೆಲೋ ಹುದುಗಿದ್ದ ಕೆಲವು ನೆನಪುಗಳು
ದುತ್ತೆಂದು ಕಣ್ಣೆದುರಿಗೆ ಬಂತು ... ಕಂಬನಿ ಸುರಿಯಿತು ..
ಆಪ್ತವಾದ ಬರಹ ..
ನನ್ನ ಬ್ಲಾಗ್ ಫಾಲೋ ಮಾದುತ್ತಿರುವಿರೆಂದು ನೋಡಿ ಸಂತೋಷವಾಯಿತು .. ಸದ್ಯದಲ್ಲೇ ಬಿದಿವು ಮಾಡಿಕೊಂಡು
ಒಂದು ಬ್ಲಾಗ್ ಬರೆಯುತ್ತೇನೆ .. ಬರೆಯಬೇಕು ಅಂತ ಬಹಳ ಆಸೆ ಇದೆ .. ಆದರು ಮನದ ತುದಿಯಲ್ಲೊಂದು ಆತಂಕ .. ಮೀರಿ ನಿಲ್ಲಬೇಕು !! , ಆಗುತ್ತಿಲ್ಲ ..ಆದರು ಪ್ರಯತ್ನಿಸುತ್ತೇನೆ . ನಿಮ್ಮ ಖಾಲಿ ಪುಟಗಳ ಮೇಲೆ ಲೆಕನವೇ ನನಗೆ ಸ್ಪೂರ್ತಿಯಾಗಲಿ .
ಮೊದಲ ಪ್ರಯತ್ನಕ್ಕೆ ನಿಮ್ಮೆಲ್ಲರ ಸಲಹೆ ಅಗತ್ಯ ..
ಹೀಗೆ ಬರೆಯಿತ್ತಿರಿ ...
ಏನು..?? ಧರಿತ್ರಿ ಮೇಡಂ...ಡಲ್ಲು ಮೂಡನ್ನ ಒದ್ದು ದಬ್ಬಿ ಡಬ್ಬಕ್ ಹಾಕಿರೋ ಹಾಗಿದೆ..??!! ಗುಡ್...ಪೇಜ್ ಸೆಟ್ ಅಪ್ ಸಹ ಬದಲಾಯಿಸಿದ್ದೀರಿ...
ಒಳ್ಳೆಯದಾಗಲಿ...ಬದಲಾವಣೆ..ಚಾಲನೆಯ ಸಂಕೇತ ಅಂತಾರೆ....ರೈಟ್..???
ನಗುಮಳೆಯಲ್ಲಿ ತೊಯ್ದುಬಿಡ್ತೀನಿ, ಕವನ ಬರೇತೀಯಾ ಹೇಳು!
ಪ್ರಯತ್ನ ಮಾಡುತ್ತೀನಿ :)
ನನ್ನ ಬ್ಲಾಗುಕಡೆ ಬನ್ನಿ ಮೇಡಂ
ಮಳೆ ಹೊರಗೆ ಹನಿಯಾಗುತ್ತಿದ್ದರೆ... ಒಳ್ಳೊಳ್ಳೆ ಇಬ್ಬನಿ ಹನಿಗಳ ಹೊರತಂದಿದ್ದೀರೀ... ಚೆನ್ನಾಗಿವೆ...
ಎಲ್ಲಾ ಸಾಲುಗಳೂ ತು೦ಬಾ ಇಷ್ಟವಾಯಿತು... ಅದರಲ್ಲಿ "ಬದುಕಿನಲ್ಲಿ ಇಟ್ಟಿದ್ದು ಎರಡನೇ ಹೆಜ್ಜೆ, ಅದರಲ್ಲಿ ಒಂದು ನೀನು!" ಇದ೦ತೂ ತು೦ಬಾ ಆಪ್ತವೆನಿಸಿತು...
ಧೋ.. ಎ೦ದು ಸುರಿಯುವ ಮಳೆಯಲ್ಲಿ ಬೆಚ್ಚಗೆ ಕಾಫೀ ಹೀರುತ್ತಾ ಮೆಲುಕು ಹಾಕಿಕೊಳ್ಳಬೇಕಾದ ಸಾಲುಗಳು ಇವು...
chennaagide
ಮುಖಪುಟ ತುಂಬಾ ಸುಂದರವಾಗಿದೆ. ಒಂದು ನ ಕಳುಹಿಸಿದ ಫೋಟೋನ ಅಂತ ಅಲ್ವ? ಚೆಂದವೋ ಚಂದವಪ್ಪ.
ದನ್ಯರಿ,
ಧರಿತ್ರಿ ,
ತುಂಬಾ ತುಂಬಾ ಕೆಲಸದ ಒತ್ತಡದ ನಡುವೆ ಈಗ್ಗೆ ಕೆಲವು ದಿನಗಳಿಂದ ಬ್ಲಾಗ್ ಬರೆಯಲು ಅಥವಾ ಓದಲು ಸಮಯ ಸಿಕ್ಕಿರಲಿಲ್ಲ... ... ಕವನ / ಗದ್ಯ ಚೆನ್ನಾಗಿತ್ತು...
ಹಾಯ್
ದರಿತ್ರಿ
ಒಂದೇ ಒಂದು ಕ್ಷಣಕ್ಕೆ ನೀನು ಕವಿತೆಯಾಗು, ಮಳೆ ಬರ್ತಾ ಇದೆ!
ನಗುಮಳೆಯಲ್ಲಿ ತೊಯ್ದುಬಿಡ್ತೀನಿ, ಕವನ ಬರೇತೀಯಾ ಹೇಳು!
ಎನ್ನುವ ಕವಿತೆಯಂತ ಸಾಲುಗಳು ಎಷ್ಟೋಂದು ಚೆನ್ನಾಗಿವೆ..!!
ವಂಡರ್ ವಂಡರ್....
ಮತ್ತೊಂದು ಭಾವಪೂರ್ಣ ಬರೆಹ
ಚೆನ್ನಾಗಿದೆ
ಬದುಕಿನಲ್ಲಿ ಇಟ್ಟಿದ್ದು ಎರಡನೇ ಹೆಜ್ಜೆ, ಅದರಲ್ಲಿ ಒಂದು ನೀನು
ella saalugalu ishta aaytu...:) aadare melina saalu tumba tumba..:)
preetiyinda
navilgari huduga
adhuta kavana dharitri.......
Post a Comment