ನನ್ನ ಕೊಡೆಗೆ ಮೂರನೇ ಮಳೆಗಾಲ. ಬೆಂಗಳೂರಿನ ಬಿಸಿಲಿಗೆ ಬಾಡಿ ಬಸಳೆಯಂತೆ ಬಾಗುವ ಕೊಡೆ ಮಂಗಳೂರ ಮಳೆಗೆ ಖುಷಿ-ಖುಷಿಯಿಂದ ಕೆಂದಾವರೆಯಾಗಿದೆ. ಮೆರೂನ್ ಬಣ್ಣದ ಕೊಡೆ ನನ್ನದು. ೨೦೦೯ರ ಫೆಬ್ರುವರಿ ಕೊನೆಯ ವಾರ ಮಲ್ಲೇಶ್ವರಂನ ೮ನೇ ಕ್ರಾಸ್‌ನಲ್ಲಿ ಚೌಕಾಸಿ ಮಾಡಿ ತೆಕೊಂಡಿದ್ದೆ. ಮುನ್ನೂರು ಹೇಳಿದವ ಕೊನೆಗೆ ನೂರರ ಎರಡು, ಐವತ್ತರ ಒಂದು ನೋಟು ಕೊಟ್ಟಾಗ ಸುಮ್ಮನಾಗಿದ್ದ. ವಿಶೇಷ ಅಂದ್ರೆ ಅದು ನನ್ನ ಮದ್ವೆಗೆ ತೆಕೊಂಡ ಕೊಡೆ. ಎರಡು ಮಳೆಗಾಲದಲ್ಲಿ ಈ ಕೊಡೆ ನನಗೆ ಆಸರೆ ನೀಡಿದೆ.
ಮೊನ್ನೆ ಮೊನ್ನೆ ಏಪ್ರಿಲ್ ೨೬. ಮಂಗಳೂರಿಗೆ ಹೋಗಿದ್ದೆ. ಬೆಳ್ಳಂಬೆಳಿಗ್ಗೆಯೇ ಮಳೆಶುರುವಾಗಿತ್ತು. ಕದ್ರಿ ದೇವಾಲಯದ ಹತ್ತಿರದ ಸಣ್ಣ ಬೆಟ್ಟ ಹತ್ತುವಾಗಲೇ ಜೋರು ಮಳೆ ಬರಬೇಕೇ? ನನ್ನ ಮೆರೂನ್ ಕೊಡೆ ಬ್ಯಾಗಿನಿಂದ ಹೊರತೆಗೆದೆ. ಬೆಂಗಳೂರಿನಲ್ಲಿ ಮಳೆಗಾಲಕ್ಕಿಂತ ಬರೀ ಬಿಸಿಲನ್ನೇ ನೋಡಿದ ನನ್ನ ಕೊಡೆ ಖುಷಿಯಿಂದ ಬಿಡಿಸಿಕೊಂಡಿತ್ತು. ಧಾರಾಕಾರ ಮಳೆ. ನಾನು-ನನ್ನವರು ಇಬ್ಬರಿಗೂ ಕೊಡೆಯ ಆಸರೆ. ಹೊಟೇಲ್ ರೂಮ್‌ನಲ್ಲಿ ಫ್ಯಾನ್ ಗಾಳಿಗೆ ಒಣಗಿಸಿ ಮತ್ತೆ ಮಡಚಿಟ್ಟಿದೆ. ಬೆಂಗಳೂರಿನಲ್ಲಿ ಎರಡು ಮೂರು ದಿನಗಳಿಂದ ಬರೀ ಮೋಡ. ಪುಟ್ಟ ಬ್ಯಾಗ್‌ನೊಳಗೆ ಬೆಚ್ಚಗೆ ಮಲಗಿರುವ ನನ್ನ ಕೊಡೆಗೆ ಮತ್ತೆ ಮತ್ತೆ ಜೋರುಮಳೆಗೆ ಮೈಯೊಡ್ಡುವ ತವಕ
*****
ನಮ್ಮವ್ರ ರೈನ್ ಕೋಟ್!
ಅಪ್ಪ ತಂದು ಕೊಟ್ಟ ರೈನ್‌ಕೋಟ್‌ಗೆ ಇದು ಎರಡನೇ ಮಳೆಗಾಲ. ಆಗೋಮ್ಮೆ-ಈಗೊಮ್ಮೆ ಬೀಳುವ ಬೆಂಗಳೂರ ಮಳೆಗೆ ಈ ಕೋಟ್ ಇನ್ನೂ ಪೂರ್ತಿ ಒದ್ದೆಯಾಗಿಲ್ಲ. ಈ ವರ್ಷವಾದರೂ ಮಳೆಯಲ್ಲಿ ನೆನೆಯುವ ಅದೃಷ್ಟ ರೈನ್‌ಕೋಟ್‌ಗೆ ಸಿಗಬಹುದೇನೋ ಎನ್ನುತ್ತಾರೆ ನಮ್ಮೆಜಮಾಜನ್ರು. ಬೆಳ್ಳಂಬೆಳಿಗ್ಗೆ ಆಕಾಶ ತುಂಬಾ ಕಪ್ಪುಮೋಡ ಮುಸುಕಿದ್ದನ್ನು ನೋಡಿ ಕೂಡಿಟ್ಟ ರೈನ್‌ಕೋಟ್ ಅನ್ನು ಕೊಟ್ಟು ಕಳಿಸಿದ್ದೀನಿ. ಆದರೆ, ದಿನ ಮೂರಾದರೂ ರೈನ್‌ಕೋಟ್ ಒದ್ದೆಯಾಗಿಲ್ಲ.
**-*-*-*-*-*-*-*-*-*
ಉದ್ದ ಕಾಲಿನ ದೊಡ್ಡ ಕೊಡೆ
ಸ್ಕೂಲ್‌ಗೆ ಹೋಗುತ್ತಿದ್ದಾಗ ಕೊಡೆಗೆ ಮನೆಯಲ್ಲಿ ಕುರುಕ್ಷೇತ್ರವೇ ನಡೆಯುತ್ತಿತ್ತು. ನನ್ನ ಬಣ್ಣದ ಕೊಡೆ ಬೇಕೆಂದು ತಮ್ಮನ ಹಠ. ಬಣ್ಣದ ಕೊಡೆ ಹುಡುಗಿಯರಿಗೆ ಮಾತ್ರ ಎಂಬ ನನ್ನ ತಿಳುವಳಿಕೆಯ ವಾದ.ಕೊನೆಗೆ ತಮ್ಮನದೇ ಕೈ ಮೇಲು. ನಾನು ಅವನ ಉದ್ದ ಕಾಲಿನ ದೊಡ್ಡ ಕೊಡೆ ಹಿಡಿದು ಹೊರಟರೆ, ತಮ್ಮ ಬಣ್ಣದ ಕೊಡೆ ಹಿಡಿದು ನಗುತ್ತಿದ್ದ. ಬಸ್‌ನಲ್ಲಿ ಹೋಗುವಾಗ ದೊಡ್ಡ ಕೊಡೆ ನೋಡಿ ಕಂಡಕ್ಟರ್ ಕಿರಿ. ಊರುಗೋಲು ತರ ಹಿಡಿದುಕೊಂಡು ರಶ್‌ನಲ್ಲಿ ಬಸ್ ಹತ್ತಿದರೆ ಸಿಕ್ಕ ಸಿಕ್ಕವರಿಗೆಲ್ಲ ಕೊಡೆ ತಾಗುತ್ತಿತ್ತು. ಎಲ್ಲರದೂ ಬೈಗುಳವೇ. ಅದಕ್ಕೆ ಒಂದು ದಿನ ದೊಡ್ಡ ಕೊಡೆಯ ಕಡ್ಡಿ ಮುರಿದು ಅಮ್ಮಂಗೆ ಸುಳ್ಳು ಹೇಳಿದ್ದೆ. ಕೊಡೆಯ ಕಡ್ಡಿ ಮುರಿದಿದೆ. ನನಗೆ ಸ್ವಿಚ್ ಕೊಡೆ ಬೇಕೆಂದು! ಸ್ವಿಚ್ ಕೊಡೆ ಅಂದ್ರೆ ಮಾಮೂಲಿ ಸ್ವಿಚ್ ಒತ್ತಿದರೆ
ಬಿಡಿಸಿಕೊಳ್ಳುವ ಕೊಡೆ. ಅಮ್ಮ ಅದನ್ನೂ ತಂದುಕೊಟ್ಟಿದ್ದಳು. ಇನ್ನೊಂದ್ಸಲ ಅಮ್ಮ ತಾವರೆ ಕೊಡೆ ತಂದಿದ್ದಳು.ತಾವರೆ ಕೊಡೆಯ ಕಡ್ಡಿಗಳು ತಾವರೆ ಆಕಾರಗಳವು. ಮಳೆಗಾಲದಲ್ಲಿ ಮೂರು ಮೈಲಿ ನಡೆದು, ಹೊಲ -ಗದ್ದೆ ದಾಟಿದ್ದು, ತುಂಬಿದ ಹೊಳೆಯಲ್ಲಿ ಭಯಪಡುತ್ತಲೇ ದಡ ಸೇರಿದ್ದು., ಭಾರೀ ಗಾಳಿಗೆ ಕೊಡೆ ಕೈಕೊಟ್ಟಾಗ ಗೆಳೆಯ-ಗೆಳತಿಯರ ಜೊತೆ ಒಂದೇ ಕೊಡೆಯೊಳಗೆ ಹೆಜ್ಜೆ ಹಾಕಿದ್ದು...ಅಬ್ಬಾ! ಮಳೆಗಾಲದ ಕೊಡೆ ನೆನಪು ಅದ್ಭುತ.

2 comments:
ನೆನಪಿನ ಮಳೆಗೆ ನಿಮ್ಮ ಕೊಡೆ ತೊಯ್ದೇ ಹೋಗಿದೆ! ಮದುವೆಯ ಕೊಡೆ ಎಂದು ಜೋಪಾನವಾಗಿ ಇಟ್ಟಿದ್ದೀರಾ?
ಚಿತ್ರ: ನಿನ್ನ ಬಾಲ್ಯದ ಕೊಡೆ ಕಿತ್ತಾಟ...ಇತರ ನೆನಪುಗಳೆಲ್ಲಾ ಇಷ್ಟವಾಯ್ತು. ರೈನ್ ಕೋಟ್ ಓದಿದಾಗ ನಾನು ಪೇಪರ್ ಹಾಕುವಾಗ ಬಳಸುವ ರೈನ್ ಕೋಟ್ ಬಗ್ಗೆ ಬರೆಯಬೇಕೆನಿಸಿದೆ..
Post a Comment