Tuesday, March 23, 2010

ಮರಳಿ ಭಾವದೊಡಲಿಗೆ....



ಮದುವೆ ಕರೆಯೋಲೆ ಕೊಟ್ಟಾಯ್ತು. ಮದುವೆನೂ ಆಗೋಯ್ತು. ಕೆಲವರು ಇಲ್ಲೇ ವಿಶ್ ಮಾಡಿದ್ರು. ಕೆಲವರು ಮದುವೆಗೂ ಬಂದರು. ಐತಣಕೂಟಕ್ಕೂ ಬಂದರು. ಅದು ನಮಗೆ ಖುಷಿ. ಎಲ್ಲರಿಗೂ ನಬ್ಬಿಬ್ಬರ ಧನ್ಯವಾದಗಳು. ಹಾಗೇ ಇಟ್ಟಿಗೆ ಸಿಮೆಂಟಿನ ಪ್ರಕಾಶ್ ಹೆಗ್ಡೆ ತಮ್ಮ ಬ್ಲಾಗಿನಲ್ಲಿ "ಬ್ಲಾಗ್ ಲೋಕದ ಪರಿಣಯ' ಎಂದು ಬರೆದಿದ್ದರು. ಥ್ಯಾಂಕ್ಯೂ ಸರ್.


ಮದುವೆ ಗಡಿಬಿಡಿ ಎಲ್ಲಾ ಮುಗಿದುಹೋಯ್ತು. ಎಲ್ಲವೂ ಚೆನ್ನಾಗೇ ನಡೆಯಿತು. ಹಳೆಯ ಬದುಕು ಏನೋ ಹೊಸ ರೂಪ ಪಡೆದಂತೆ. ಮನೆಯವರ ಜವಾಬ್ದಾರಿನೂ ಮುಗಿದುಹೋಯ್ತು. ಈಗ ಮಾಮೂಲಿ ಆಫೀಸ್. ಮತ್ತೆ ಕೆಲಸ, ಅದೇ ಪತ್ರಿಕೆ, ಅದೇ ಆಫೀಸು, ಅದೇ ಜನರು, ಅದೇ ಓಡಾಟ, ಮನಸ್ಸು ಎಲ್ಲದಕ್ಕೂ ಮತ್ತೆ ಹೊಂದಿಕೊಳ್ಳಬೇಕನಿಸುತ್ತೆ. ಆದರೂ ಏನೋ ಖುಷಿಯ ಗುಂಗು. ಮದುವೆಗೆ ಮೊದಲು ದೇವರನ್ನು ನೀನೆಕೆ ಕಲ್ಲಾಗಿಬಿಟ್ಟೆ ಅಂತ ಬೈದಿದ್ದೆ. ತವರು ಬಿಡಬೇಕೆ? ಎಂದು ನೂರಾರು ಪ್ರಶ್ನೆಗಳ ಮಳೆ ಸುರಿದಿದ್ದೆ. ಆದರೆ, ದೇವರೇ ನಿನಗೆ ಬೈದುಬಿಟ್ಟೆ ಅಲ್ವ? ಅಂತ ಸಾರಿ ಅಂತ ಕೇಳ್ತಾ ಇದ್ದೀನಿ.


ಮದುವೆ ಗುಂಗಿನಿಂದ ಆಫೀಸು ಕೆಲಸಗಳನ್ನಷ್ಟೇ ಮಾಡುತ್ತಿದ್ದೆ. ಬ್ಲಾಗ್ ಬರಹಗಳತ್ತ ತಿರುಗಿ ನೋಡಲು ಸಮಯವಿರಲಿಲ್ಲ. ಇನ್ನು ಮತ್ತೆ ಬ್ಲಾಗ್ ಮುಂದುವರಿಸಬೇಕು. ನಾವಿಬ್ಬರೂ ಬ್ಲಾಗ್ ಬರಿಯಬೇಕು. ಇನ್ನು ಚೆನ್ನಾಗಿ ಬರೀಬೇಕು ಅಂತ ನಮ್ಮಾಸೆ. ನನ್ನ ಧರಿತ್ರಿ ಮತ್ತು ಶರಧಿ ಎರಡೂ ಬ್ಲಾಗ್ ಗಳು ನನ್ನ ಆತ್ಮೀಯು ಗೆಳತಿಯರು. ಇನ್ನು ಇವೆರಡನ್ನು ಚೆನ್ನಾಗಿ ಮುಂದುವರಿಸಬೇಕು. ಮತ್ತೆ ನಿಮ್ಮೆದುರಿಗೆ ಅದೇ ಪುಟ್ಟ ಪುಟ್ಟ ಬರಹಗಳೊಂದಿಗೆ ಕಾಣಿಸಿಕೊಳ್ಳುತ್ತೇವೆ. ಭಾವಗಳಿಗೆ ಬರವಿಲ್ಲ, ಅವುಗಳಿಗೇ ಅಕ್ಷರ ರೂಪ ತುಂಬುವಾಸೆ. ಎಲ್ಲೋ ಕಂಡ ಹಕ್ಕಿ, ಮುಗಿಲಲ್ಲಿ ತೇಲಾಡುವ ಮೋಡ, ನೆನಪಾಗುವ ಹುಟ್ಟೂರು, ಪ್ರೀತಿ ನೀಡಿದ ಒಡನಾಡಿಗಳು, ಗಂಡನ ಜೊತೆಗಿನ ಪುಟ್ಟ ಹುಸಿಮುನಿಸು, ಆಫೀಸ್ ನಲ್ಲಿನ ಕಿರಿಕಿರಿ, ಜಗತ್ತಿನಾಚೆಗಿನ ಭಾಷೆಯಿಲ್ಲದ ಭಾವಗಳು...ಎಲ್ಲವೂ ಅಕ್ಷರ ರೂಪ ಪಡೆಯಲಿವೆ. ಓದುತ್ತೀರಲ್ಲಾ...



ಪ್ರೀತಿಯಿಂದ
ಚಿತ್ರಾ ಸಂತೋಷ್

11 comments:

ಗೌತಮ್ ಹೆಗಡೆ said...

ಖಂಡಿತ ಓದುತ್ತೇವೆ :)

ಸೀತಾರಾಮ. ಕೆ. / SITARAM.K said...

I wish happy married life to you couple & also wish all best.
Expecting articles more on the blog from both of you.
Nimma naeyavra blog0na link nimma blognalli haaki.

ಸವಿಗನಸು said...

ಮರಳಿ ಭಾವದೊಡಲಿಗೆ ಬಂದಿದ್ದೀರ....
ಮತ್ತೆ ಹಳೆಯ ಬದುಕೆ ಆದರೂ ಹೊಸ ರೂಪ ಇದ್ದೆ ಇರುತ್ತೆ.....
ಬರಹ ಮುಂದುವರೆಯಲಿ....
ಮತ್ತೊಮ್ಮೆ ಚಿತ್ರಾ ಸಂತೋಷ್ ಇಬ್ಬರಿಗೂ ಶುಭಾಶಯಗಳು....

ಸಾಗರದಾಚೆಯ ಇಂಚರ said...

ಧರಿತ್ರಿ
ನಿಮ್ಮ ಹೊಸ ಬಾಳಿಗೆ ಶುಭ ಹಾರೈಕೆ
ಬದುಕಿನ ಹೊಸ ಜೀವನ ಸುಂದರವಾಗಿರಲಿ
ನಿಮ್ಮಿಬ್ಬರ ಬ್ಲಾಗ್ ನಲ್ಲಿ ಹೊಸ ಹೊಸ ಬರಹಗಳು ಕಾಣಲಿ
ಮತ್ತೊಮ್ಮೆ ಶುಭಾಶಯಗಳೊಂದಿಗೆ
ಗುರು

Naveen ಹಳ್ಳಿ ಹುಡುಗ said...

ಚಿತ್ರ ಅಕ್ಕ.. ಹೊಸ ಜೀವನ ಸರಾಗವಾಗಿ ಸಂತೋಷವಾಗಿ ಸಾಗಲಿ ಎಂದು ಆಶಿಸುತ್ತ ಬರಹಗಳಿಗೆ ಕಾಯುತ್ತಿರುವೆ...

ತೇಜಸ್ವಿನಿ ಹೆಗಡೆ said...

ಮೊದಲಿಗೆ ನಿಮಗಿಬ್ಬರಿಗೂ ಹಾರ್ದಿಕ ಶುಭಾಶಯಗಳು.

ನೀನು ಬರೆಯುವುದು ಹೆಚ್ಚೋ ನಾವು ಓದುವುದು ಹೆಚ್ಚೋ? :) ಬರವಣಿಗೆಗಳ ನಾಗಾಲೋಟ ಶುರುವಾಗಲಿ ಬೇಗ.

ಶುಭ ಹಾರೈಕೆಗಳು.

Ramesh said...

Chitra.. Modalige, nimage shubhashayagalannu helutta, nimma blog na oadutteve anno bharavaseyannu koduttene.. hosa barahagalondige nimma "blog"ism na matte punararambhisi... abhinandanegalu.. haage samaya sikkaaga namma blog nu nodteeralla?.. :)

Unknown said...

ಮತ್ತೊಮ್ಮೆ ನಿಮಗೆ ಶುಭಾಶಯಗಳು...

ಮನದಾಳದಿಂದ............ said...

ಏನ್ರಿ ಮದುಮಗಳೇ.......
ಇನ್ನು ಮದುವೆಯ ಗುಂಗಿನಿಂದ ಹೊರಬರಲಿಲ್ವಾ?
ಬೇಡ ಬಿಡಿ.
ಹೊಸ ಜೀವನದ ಹೊಸ ಕನಸಿಗೆ ಇನ್ನಷ್ಟು ಮೆರುಗು ತುಂಬಲಿ.
ಆ ಹುರುಪಿನಲ್ಲೇ ಒಂದಷ್ಟು ಬಾವನೆಗಳು ಮೂಡಲಿ,
ಆ ಬಾವನೆಗಳು ಬರಹದ ರೂಪ ತಾಳಲಿ,
ಆ ಬರಹಗಳನ್ನು ಓದುವ ಭಾಗ್ಯ ನಮಗೇ ಬೇಗ ಸಿಗಲಿ...............
haapy maareid life to you

sunaath said...

ಮೊದಲು ನಿಮಗೆ ಹಾರ್ದಿಕ ಶುಭಾಶಯಗಳು. ನಿಮ್ಮ ಲೇಖನಕ್ಕಾಗಿ ಕಾಯ್ತಾನೆ ಇರ್ತೀನಿ. ಬಿಡುವು ಮಾಡ್ಕೊಂಡು ಬರೀರಿ.

Unknown said...

ಖಂಡಿತಾ ಓದುತ್ತೇನೆ ಅಕ್ಕ :) ಹಾಗೆಯೇ ನಿಮಗಿಬ್ಬರಿಗೂ ಹಾರ್ದಿಕ ಶುಭಾಶಯಗಳು.