ಅಂದು ಜಡಿಮಳೆ. ರಸ್ತೆ ಇಕ್ಕೇಲಗಳಲ್ಲಿ ನೀರು ತುಂಬಿ ಹರಿಯುತ್ತಿತ್ತು. ಎಲ್ಲಿ ನೋಡಿದ್ರೂ ಸಾಗರವೇ. ಸಾಗರದ ಮೇಲೆಯೇ ವಾಹನಗಳ ಸವಾರಿ. ನೋಡಿದರೂ ಟ್ರಾಫಿಕ್ ಜಾಮ್. ಬೆಂಗಳೂರಂದ್ರೆ ಇದೇನಾ? ಎಂದು ಅಚ್ಚರಿಯ ಕಣ್ಣುಗಳಿಂದ ದಿಟ್ಟಿಸುತ್ತಿದ್ದ ದಿನಗಳು. ರಾತ್ರಿ ಒಂಬತ್ತೂವರೆ. ನಾ ಕುಳಿತ ಬಸ್ಸು ಟಾ್ರಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಬಸ್ಸಲ್ಲಿ ಕುಳಿತೇ ಬೆಂಗಳೂರು ನೋಡುವ ತವಕ. ಮನೆ ಸೇರಲು ತಡವಾಯಿತು ಎನ್ನುವ ಭಯ ಮನದೊಳಗೆ. ಆದರೇನು ಇಷ್ಟು ಮಂದಿ ಬಸ್ಸಿನಲ್ಲಿದ್ದಾರಲ್ಲ ಎಂಬ ಭಂಡ ಧೈರ್ಯ ಬೇರೆ.
ಅದೇ ಪಕ್ಕದ ದಾರಿಯಲ್ಲಿ ಹಿಂಡು ಹಿಂಡು ಹುಡುಗರು. ಆ ಧಾರಾಕಾರ ಮಳೆಯಲ್ಲಿ ಚೆಂದದ ಹುಡುಗಿಯರು ಅಲ್ಲಲ್ಲಿ ನಿಂತಿದ್ದರು. ಬಿರುಸಿನಿಂದ ಸುರಿವ ಮಳೆಯನ್ನೂ ಲೆಕ್ಕಿಸದೆ! ಹಿಂಡು ಹಿಂಡಾಗಿ ಸಾಗುತ್ತಿದ್ದ ಹುಡುಗರು ಅವರ ಬಳಿಯಲ್ಲಿ ಅದೇನೋ ಮಾತನಾಡಿಕೊಳ್ಳುತ್ತಿದ್ದರು. ಪಿಸುಗುಟ್ಟುತ್ತಿದ್ದರು. ಕೆಲವು ಗಂಡಸರು ಬೈಕ್, ಕಾರು ನಿಲ್ಲಿಸಿ ಮಾತನಾಡಿಕೊಳ್ಳುತ್ತಿದ್ದರು. ಪಕ್ಕದಲ್ಲೇ ಸಾಗುತ್ತಿದ್ದ ಆಟೋ ಚಾಲಕರು ಅವರನ್ನು ಕಂಡು ಛೇಡಿಸುತ್ತಿದ್ದರು. ಆಗಿದ್ದರೂ ಆ ಹುಡುಗಿಯರ ಕಣ್ಣುಗಳು ಭರವಸೆಯಿಂದ ಸುತ್ತಲೂ ದಿಟ್ಟಿಸುತ್ತಿದ್ದರು. ಬಸ್ಸಿನಲ್ಲಿ ಕುಳಿತವರೆಲ್ಲ ಅವರತ್ತ ಅಸಹ್ಯ ದೃಷ್ಟಿಯಿಂದ ನೋಡಿ, ಅಶ್ಲೀಲ ಭಾಷೆಯಿಂದ ಬೈಯುತ್ತಿದ್ದರು ಆ ಹುಡುಗಿಯರನ್ನು, ಅವರ ಬಳಿ ಚೌಕಾಸಿ ಮಾಡುತ್ತಿದ್ದ ಗಂಡುಜೀವಗಳನ್ನಲ್ಲ!
ಮೊನ್ನೆ ಮೊನ್ನೆ ಯಾವುದೋ ಬರಹ ಓದುತ್ತಿದ್ದೆ. ಕುಸುಮಾ ಶಾನಭಾಗ ಅವರು ಬರೆದ ‘ಕಾಯಕ ಕಾರ್ಪಣ್ಯ’ ಪುಸ್ತಕದ ಕುರಿತು ಅಲ್ಲಿ ಪ್ರಸ್ತಾಪಿಸಲಾಗಿತ್ತು. ಆ ಕ್ಷಣ ಬೆಂಗಳೂರಿಗೆ ಬಂದ ಆರಂಭದಲ್ಲಿ ನಾ ಕಂಡ ಈ ದೃಶ್ಯಗಳು ಕಣ್ಣಮುಂದೆ ಮತ್ತೊಮ್ಮೆತೇಲಿಬಂದವು.
ಅಬ್ಬಾ! ನನ್ನೊಳಗೆ ಹುಟ್ಟಿದ ‘ಬದುಕೆಷ್ಟು ಕ್ರೂರ?’ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಎಂ.ಜಿ. ರೋಡ್, ಮುಂಬೈನ ಕಾಮಾಟಿಪುರ, ಪುಣೆಯ ಬುಧವಾರ ಪೇಟೆ ಕೂಡ ಉತ್ತರ ನೀಡಲಿಲ್ಲ!! ಆ ಬಗ್ಗೆ ಬಹಳಷ್ಟು ಓದಿದ್ದೆ, ಕೇಳಿದ್ದೆ. ಕೇಳಿದಾಗಲೆಲ್ಲ ಅಚ್ಚರಿಯ ಕಣ್ಣುಗಳಿಂದ ದಿಟ್ಟಿಸುತ್ತಿದ್ದೆ. ಆದರೆ, ಅಂದು ನಾ ಕಂಡ ದೃಶ್ಯವನ್ನು ನೆನೆಸಿಕೊಂಡಾಗ ನಮ್ಮ ಇಡೀ ವ್ಯವಸ್ಥೆಯ ಮೇಲೆಯೇ ಕೆಟ್ಟ ಸಿಟ್ಟು ಬಂದುಬಿಡುತ್ತದೆ.
ಹೌದು, ಮಾತೆಯರ ಕುರಿತಾಗಿ ಗೌರವದ ಮಾತುಗಳನಾಡುತ್ತೇವೆ. ಆದರೆ ಇನ್ನೊಂದೆಡೆ ಅವಳನ್ನು ಕಂಡು ಹೀಯಾಳಿಸುತ್ತೇವೆ. ಅವಳ ಆಂತರ್ಯವನ್ನು, ಅವಳ ಬದುಕನ್ನು ಕಂಡರಿಯಲು ಹೋಗುವುದಿಲ್ಲ. ಅಂದು ಬಸ್ಸಿನಲ್ಲಿ ಕುಳಿತವರೆಲ್ಲ ವ್ಯಂಗ್ಯವಾಗಿ ನಗುತ್ತಿದ್ದರೆ, ಆ ಒಂದು ಹುಡುಗಿಯ ಸುತ್ತ ಕನಿಷ್ಠ ನಾಲ್ಕೈದು ಹುಡುಗರು ಚೌಕಾಸಿ ಮಾಡುತ್ತಿದ್ದರು. ಅವಳೊಬ್ಬಳ ಬದುಕು ನಾಲ್ಕೈದು ಮಂದಿಯನ್ನು ಬಲಿತೆಗೆದುಕೊಳ್ಳುತ್ತಿತ್ತೇನೋ! ಎಂಬ ಭಾವ ಮನದೊಳಗೆ. ಥತ್, ಇದು ಬದುಕಿನ ವಿರೂಪವೇ? ಅವಳ ತಪ್ಪೇ? ಅಥವಾ ವ್ಯವಸ್ಥೆಯ ತಪ್ಪೇ? ಉತ್ತರ ಸಿಗಲೇ ಇಲ್ಲ.
Subscribe to:
Post Comments (Atom)
19 comments:
ನಿಮ್ಮ ಲೇಖನ ಬಹಳ ಅರ್ಥಪೂರ್ಣವಾಗಿದೆ, ಮಾತೆಯರ ಕುರಿತಾಗಿ ಗೌರವದ ಮಾತುಗಳನಾಡುತ್ತೇವೆ ಆದರೆ ಇನ್ನೊಂದೆಡೆ ಅವಳನ್ನು ಕಂಡು ಹೀಯಾಳಿಸುತ್ತೇವೆ. ಇದು ನಿಜ!!!.
ಬೆಂಗಳೂರಿನಲ್ಲೇ ಅಲ್ಲ ಪುಟ್ಟ ಹಳ್ಳಿಗಳಲ್ಲೂ ನೆಡೆಯುತ್ತವೆ ಆದರೆ ಕಣ್ಣಿಗೆ ಬೀಳುವುದಿಲ್ಲ ಅಷ್ಟೆ..
ಇಂತಹ ವ್ಯವಸ್ಥೆಗೆ ಉತ್ತರಗಳು ಸಿಗುವುದೇ ಇಲ್ಲ
ಸತ್ಯಾಸತ್ಯತೆಗಳ ಮೂಸೆಯಲ್ಲಿ ಒಬ್ಬರೊಬ್ಬರ ಅಭಿಪ್ರಾಯ ಅವರವರ ದೃಷ್ಠಿಕೋನದ೦ತೆ ಹೊಮ್ಮಿ, ಇನ್ನೊ೦ದೆಡೆಯಿ೦ದ ನೋಡಿದಾಗ ವಿರ್‍ಓಧಾರ್ಥವೇ ಹೊಮ್ಮಿ ಯಾವ ಅಭಿಪ್ರಾಯಗಳು ಸಾರ್ವತ್ರಿಕ ಸತ್ಯ ಅಥವಾ ಅಸತ್ಯ-ವಾಗುವದಿಲ್ಲ.
ಇ೦ಥಹ ಸಮಯದ ಅಭಿಪ್ರಾಯಗಳು ವೈಯುಕ್ತಿಕ ಮಟ್ಟದ್ದಾಗಿ ಬಿಡುತ್ತವೆ.
ಪರಿಸ್ಥಿತಿ, ಸಮಯ, ಸ೦ಧರ್ಭ, ಸನ್ನಿವೇಶದಲ್ಲಿರುವ ವ್ಯಕ್ತಿಗಳು, ಅವರ ಸ೦ಭ೦ಧ, ಅವರ ಮನೋಸ್ಥಿತಿ, ಅವರ ಸ್ಥೈರ್ಯ-ಗಳು ಅವರ ಅಭಿಪ್ರಾಯಗಳನ್ನು ನಿಯ೦ತ್ರಿಸುವದರಿ೦ದ ಒ೦ದೇ ಸನ್ನಿವೇಶದಲ್ಲಿ ವಿರ್‍ಓಧಾಭಾಸದ ಅಭಿಪ್ರಾಯಗಳು ಸಾಮಾನ್ಯ.
ಅವಳು , ಅವನು, ಅವರು, ಎಲ್ಲರೂ, ಇವನು, ಇವಳು, ಇವರೂ, ನಾನು, ನಾವೂ ಮತ್ತು ಎಲ್ಲಾ ವ್ಯವಸ್ಥೆಯ ಅ೦ಗವಾಗುವದರಿ೦ದ ವ್ಯವಸ್ಥೆಯನ್ನು ಬೇರೆಯದಾಗಿ ನೋಡಲಾಗುವದಿಲ್ಲ. ವ್ಯವಸ್ಥೆಯ ವಿಮರ್ಶೆ ನಮ್ಮದೇ!!
hmm.. no comments...
ಬೆಂಗಳೂರಿನ ಎಂ ಜಿ ರಸ್ತೆಯಲ್ಲಿ ಈ ಪರಿಸ್ಥಿತಿಯನ್ನ ಹಲವು ಬಾರಿ ಕಂಡಿದ್ದೇನೆ! ಮತ್ತು ಏನೂ ಬರೆಯಲಾಗದೆ ಸುಮ್ಮನಾಗಿದ್ದೇನೆ
ಬರಹ ಚೆನ್ನಾಗಿದೆ.
ಅರ್ಥಪೂರ್ಣ ಲೇಖನ ....
ಇದು ಬದುಕಿನ ವಿರೂಪವೇ...? ಅವಳ ತಪ್ಪೇ....? ಅಥವಾ ವ್ಯವಸ್ಥೆಯ ತಪ್ಪೇ....?
ಉತ್ತರ ಹುಡುಕುವುದು ಬಹಳ ಕಷ್ಟ....
ಬದುಕೆ೦ದರೆ ಹೀಗೇನೆ ತ೦ಗಿ !!!!!
ಹೌದು, ನಾವು ಕಾಣದ ಬದುಕು ವಿರೂಪವಷ್ಡೇ ಅಲ್ಲ... ತುಂಬಾ ಕ್ರೂರವೂ ಹೌದು, ಆದರೆ ಅದು ಈ ಬದುಕಿನ ವಾಸ್ತವ ಕೂಡ............
ಧರಿತ್ರಿ ನಗರದ ಥಳುಕಿನ ರಾತ್ರಿ ಬದುಕು ಅದು ನಿಮ್ಮ ಕಳಕಳಿಸೇರಿತು
:( :( BerenU helalu tochuttilla!
ಬಹಳ ಅರ್ಥಪೂರ್ಣ ಬರಹ
ತುಂಬಾ ಯೋಚಿಸುವಂತೆ ಮಾಡುತ್ತದೆ ನಮ್ಮ ಬಗ್ಗೆಯೇ
ಒಳ್ಳೇ ಬರಹ. ಚಿಂತನಾರ್ಹ ವಿಷಯ. ಉತ್ತರ ಇದ್ದೂ ಗುರುತಿಸಲಾಗದ ಅನೇಕ ಪ್ರಶ್ನೆಗಳು ನಮ್ಮ ಮುಂದೆ ಇವೆ.. ಹೀಗೆ ಹುಳು ಬಿಟ್ಟುಕೊಂಡು ಯೋಚಿಸಿ ಯೋಚಿಸಿ ಸುಮ್ಮನಾಗುವುದು ( ಅನಿವಾರ್ಯವಾಗಿ) ವಾಡಿಕೆಯಾಗಿಹೋಗಿದೆ..
ಬದುಕು ಕೆಲವರ ಪಾಲಿಗೆ ಕ್ರೂರಿಯಾಗಿರುವುದಂತೂ ನಿಜ. ಲೇಖನ ವಿಚಾರ ಪ್ರಚೋದಕ.
xcbcbxcbxcb
uttarave illada prashne....
mundhondu dina sigabahude?
i have started blogging chitra..visit and comment on it..
http://maatu-muttu.blogspot.com/
waiting for ur comments..
chitra, visit my blog and comment on it ..
http://maatu-muttu.blogspot.com/
waiting for ur comments..
ಅರ್ಥಪೂರ್ಣ ಬರಹ. ಹೇಗಿದ್ದೀರಾ. ಬಹಳ ದಿನಗಳಾಯ್ತು ನಿಮ್ಮ ಬ್ಲಾಗ್ ಕಡೆ ಬಂದು.
ಪ್ರಶ್ನೆ ಪ್ರಶ್ನೆಯಾಗೇ ಉಳಿಯುತ್ತೆ, ಉತ್ತರವಿಲ್ಲದ ಪ್ರಶ್ನೆ ಕೇಳಿದರೆ ಹೇಗೆ? ಮತ್ತೊಂದು ಪ್ರಶ್ನೆ~!
ಚಿತ್ರಾ ಕೆಲವು ವಿಷಯಗಳಿಗೆ ಕಾರಣ ಹುಡುಕಹೊರಟರೆ ಹೆಚ್ಚು ಗೊಂದಲಗಳು...ಅದಕ್ಕೇ ಅವುಗಳನ್ನು ಇದ್ದಲ್ಲೇ ಸ್ವೀಕರಿಸಿ ಅದರಿಂದಾಗುವ ಇಅತರೆ ತೊಂದರೆ ಗಳಿಗೆ ನಿವಾರಣೋಪಾಯ ಹುಡುಕುವುದೇ ಜಾನತನ...ಏನಂತೀ?
Post a Comment