ಓಶೋ ಬರೆದ ಪ್ರೇಮ ಧ್ಯಾನದ ಪಥದಲ್ಲಿ ಪುಸ್ತಕ ಓದುತ್ತಿದ್ದೆ. ಯಾಕೋ ನೆನಪಾಯಿತು. ನಾನು ಧರಿತ್ರಿ ಬ್ಲಾಗ್ ಆರಂಭಿಸುವಾಗ ಮೊದಲು ಬರೆದ ಬರಹ ಒಂಟಿತನದ ಬಗ್ಗೆ ಎಂದು.
ಈ ಪುಸ್ತಕದಲ್ಲಿ 'ಒಂಟಿತನದಿಂದ ಪ್ರೇಮದೆಡೆಗೆ' ಎಂಬ ವಿಷಯದ ಮೇಲೆ ಬರೆಯುತ್ತಾ ಒಂಟಿತನ ಮತ್ತು ಏಕಾಂತ ಕುರಿತು ಬಹಳ ಚೆನ್ನಾಗಿ ಹೇಳಿದ್ದಾರೆ.
"ಮೊದಲು ಏಕಾಂತರಾಗಿ, ಏಕಾಂಗಿಗಳಾಗಿ. ಮೊದಲು ನಿಮ್ಮೊಂದಿಗೆ ನೀವು ಸಂತೋಷಿಸಲು ಆರಂಭಿಸಿ. ಮೊದಲಿಗೆ ನಿಮ್ಮನ್ನು ನೀವು ಪ್ರೀತಿಸಿ. ಎಷ್ಟರಮಟ್ಟಿಗೆ ಎಂದರೆ ನಿಮ್ಮ ಬಳಿ ಯಾರೂ ಬರದಿದ್ದರೂ ಸರಿಯೇ. ಅತ್ಯಂತ ಪ್ರಾಮಾಣಿಕತೆಯಿಂದ ನಿಮ್ಮಲ್ಲೇ ನೀವು ಆನಂದಿತರಾಗಿ. ನಿಮ್ಮ ಬಾಗಿಲನ್ನು ಯಾರೂ ತಟ್ಟದಿದ್ದರೂ ಪರವಾಗಿಲ್ಲ. ಯಾರಾದರೂ ನಿಮ್ಮ ಬಳಿ ಬರಲಿ ಎಂದು ನೀವು ಕಾಯುತ್ತಿರುವುದಿಲ್ಲ. ನೀವು ನಿಮ್ಮ ಮನೆಯಲ್ಲಿರುವಿರಿ. ಹೌದು, ಯಾರಾದರೂ ಬಂದರು ಒಳ್ಳೆಯದೇ. ಪ್ರೀತಿಕರವೇ ಸುಂದರವೇ. ಯಾರೂ ಬರದಿದ್ದರೂ ಒಳ್ಳೆಯದು, ಪ್ರೀತಿಕರವೇ ಸುಂದರವೇ. ತದನಂತರ ನೀವು ಬೇರೆಯವರೊಂದಿಗೆ ಸಂಬಂಧಿತರಾಗಿ, ನೀವೀಗ ಭಿಕ್ಷುಕರಂತೆ ಇರುದಿಲ್ಲ.ರಾಜನಂತಿರುವಿರಿ"
ಈ ಮಾತನ್ನು ಅದೆಷ್ಟು ಬಾರಿ ಓದುತ್ತೇನೋ ನನಗೆ ಗೊತ್ತಿಲ್ಲ. ಅಷ್ಟರಮಟ್ಟಿಗೆ ಈ ಮಾತುಗಳು ನನ್ನ ಆಕರ್ಷಿಸಿವೆ. ಒಬ್ಬಳೇ ಇದ್ದಾಗ ಮನಸ್ಸು ಬೇಜಾರಾದರೆ ತಕ್ಷಣ ಈ ಸಾಲುಗಳನ್ನು ಓದುತ್ತೇನೆ. ಯಾಕೋ ಮನಸ್ಸಿಗೆ ತುಂಬಾ ಖುಷಿಯಾಗುತ್ತೆ, ಮನಸ್ಸು ನಿರಾಳವಾಗುತ್ತೆ. ಎಲ್ಲಾ ಕಾಡುವ ನೆನಪುಗಳು ಬದಿಗೆ ಸರಿದು ಮನಸ್ಸು ಪರಿಶುದ್ಧತೆಯಿಂದ ಸಂಭ್ರಮಿಸುತ್ತೆ. ಅದಕ್ಕೆ ಹೇಳೋದು ಒಳ್ಳೆಯ ಪುಸ್ತಕಗಳು ಆತ್ಮೀಯ ಸ್ನೇಹಿತರಂತೆ ಅಂತ ಅಲ್ವಾ?
ನಾನು ಒಬ್ಬಳೇ ಇರುವುದನ್ನು ತುಂಬಾ ದ್ವೇಷಿಸುತ್ತೇನೆ. ಏಕೆಂದರೆ ನಾವು ಒಬ್ಬರೇ ಕುಳಿತಾಗ ಕಾಡುವ ನೆನಪುಗಳು, ಅಸಂಬದ್ಧ ಚಿಂತೆಗಳು ನಾವು ಇತರರ ಜೊತೆ ಕೂಡಿ ನಲಿದಾಗ ನಮ್ಮನ್ನು ಕಾಡುವುದಿಲ್ಲ. ಇಲ್ಲದ ಟೆನ್ಯನ್ ಕೊಡೋದಿಲ್ಲ. ನಾವು ಖಿನ್ನರಾಗುವುದಿಲ್ಲ. ಅದಕ್ಕೆ ಒಬ್ಬಳೇ ಇರುವಾಗ ಪುಸ್ತಕ ಓದುವುದು ಮತ್ತು ಹಾಡು ಕೇಳುವುದು ಒಂಥರಾ ನಮ್ಮೊಳಗೆ ಹೊಸ ಚೈತನ್ಯ ಮೂಡಿಸುತ್ತೆ.ಉತ್ಸಾಹ ತುಂಬುತ್ತೆ. ಮನಸ್ಸನ್ನು ಖುಷಿಗೊಳಿಸುತ್ತೆ.
ಬಹುಶಃ ಓಶೋ ಹೇಳಿರುವಂತೆ ನಮ್ಮನ್ನು ನಾವು ಪ್ರೀತಿಸುವ ಕಲೆ ಮಾನವನಿಗೆ ತಿಳಿದುಬಿಟ್ಟರೆ, ಪ್ರಪಂಚದಲ್ಲಿ ಮನುಷ್ಯನಷ್ಟು ನೆಮ್ಮದಿ, ಖುಷಿಯಿಂದ ಇರುವ ಜೀವ ಮತ್ತೊಂದಿರಲಾರದು.
17 comments:
ಧರಿತ್ರಿ ಯವರೇ,
ಒಂಟಿತನ ವನ್ನು ಆನಂದಿಸಿದರೆ ಅದಕ್ಕಿಂತ ಸಂತಸ ಬೇರೊಂದಿಲ್ಲ ಹಾಗೆಯೇ ಅದು ಇಷ್ಟವಾಗದಿದ್ದರೆ ಅದೊಂದು ಘೋರ ನರಕ ಕೂಡಾ.
ಓಶೋ ರ ಕೆಲವು ಲೇಖನಗಳು ಒಂಟಿತನದ ಬಗೆಗೆ ಇರುವುದನ್ನು ನಾನು ಓದಿದ್ದೇನೆ.
ಒಳ್ಳೆಯ ಲೇಖನ
HMM.. TRUE.
ಧರಿತ್ರಿ
ನಾನ್ಯಾವಗಲೂ ನಮ್ಮ ವಿದ್ಯಾರ್ಥಿಗಳಿಗೆ ಹೇಳುತ್ತಿರುತ್ತೇನೆ
"if you don't believe yourself then no one can believe you"
ಅದನ್ನೇ ನಮ್ಮನ್ನ ನಾವೇ ಪ್ರೀತಿಸುವುದಕ್ಕೂ ಅನ್ವಯಿಸಬಹುದು ಅಲ್ಲವೇ?
ಧರಿತ್ರೀ ಗೆ ತ್ರೀ-ಸೂತ್ರ ತಿಳಿದಹಾಗೆ ಇದೆ...ಒಬ್ಬರೇ ಇದ್ದಾಗ ಏನು ಮಾಡಬೇಕು? ಎಲ್ಲರೊಡನೆ ಹೇಗಿರಬೇಕು ಮತ್ತು ಟೆನ್ಶನ್ ಹೇಗೆ ಅವಾಯ್ಡ್ ಮಾಡಬಹುದು...ನಿನ್ನ ಮಟ್ಟಿಗೆ ಹೇಳೋದಾದರೆ..ಬ್ಲಾಗ್ ನಲ್ಲಿ ಬರೀದೇ ಹೋದ್ರೆ ನಿನ್ನ ಟೆನ್ಶನ್ ಜಾಸ್ತಿಯಾಗುತ್ತೆ...ಹಹಹ...
ಚನ್ನಾಗಿದೆ ಲೇಖನ
ನಿಜ.. ನಮ್ಮನ್ನು ನಾವು ಮೊದಲು ಪ್ರೀತಿಸಬೇಕು...
ನಾನು ಓಶೋ ಅವರ ಯಾವುದೇ ಪುಸ್ತಕಗಳನ್ನು ಓದಿಲ್ಲ.
ಆದರೆ ನನಗೊಬ್ಬ ಸ್ನೇಹಿತನಿದ್ದ... "ಯೆದು" ಅಂತ ಅವನ ಹೆಸರು..
ಅವನು ಯಾವಾಗಲು ಓಶೋ ಬರೆದ ಪುಸ್ತಕಗಳನ್ನು ಓದುತ್ತಿದ್ದ...
good one :)
ನಿಜ ಒಂಟಿತನಕ್ಕೂ ಏಕಾಂತಕ್ಕು ತುಂಬ ವ್ಯತ್ಯಾಸವಿದೆ. ಒಂಟಿತನವನ್ನು ಮಧುರ ಏಕಾಂತವಾಗಿಸಿಕೊಳ್ಳುವ ಕಲೆ ಸಿದ್ಧಿಸಿದರೆ ದುಖಃವನ್ನು ಸಾಧ್ಯವಾದಷ್ಟು ದೂರವಿಡಬಹುದು.
ಧರಿತ್ರಿ,
ಬದುಕುವ ಕಲೆಯನ್ನು ಓಶೋ ಮಾದರಿಯಲ್ಲಿ ನಮ್ಮೆದುರು ಹರವಿದ್ದೀರಿ. ಆದರೆ ಇದನ್ನು ಅಳವಡಿಸಿ ಕೊಳ್ಳುವುದು ಅಷ್ಟು ಸುಲಭ ಅಲ್ಲ ಅಲ್ವ.
ಧರಿತ್ರಿ ಈಗೆಲ್ಲ ಸಂತೆಯೊಳಗಿದ್ದು ಏಕಾಕಿತನ ರೂಢಿಸಿಕೊಬೇಕಾಗಿದೆ ಇಲ್ಲವಾದರೆ ಗುಂಪಿನಲ್ಲಿ ನಾವು ಕಳೆದು ಹೋಗುತ್ತೇವೆ...
ನನ್ನ ಬ್ಲಾಗ್ ನಲ್ಲಿ ಹೊಸ ಕತೆ ಇದೆ ಓದಿ ಅಭಿಪ್ರಾಯ ತಿಳಿಸಿ
:)
ನಮ್ಮನ್ನು ನಾವು ಪ್ರೀತಿಸಬೇಕು ನಿಜ.....
ಚೆನ್ನಾಗಿದೆ...
beautiful lines....
ಉತ್ತಮ ಲೇಖನ...
ಚಿನ್ನದಂತಹ ಮಾತುಗಳು. ಓಶೋ ಇನ್ನಷ್ಟು ಮಹತ್ತ್ವದ್ದು ಬರೆದಿದ್ದಾರೆ. ಓದ್ತ ಓದ್ತ ನಮಗೂ ಸ್ವಲ್ಪ ಬಡಿಸಿ. ನಮ್ಮ ಓದಿನ ಹಸಿವು ತಣಿದೀತು.
ಚಿನ್ನದಂತಹ ಮಾತುಗಳು. ಓಶೋ ಇನ್ನಷ್ಟು ಮಹತ್ತ್ವದ್ದು ಬರೆದಿದ್ದಾರೆ. ಓದ್ತ ಓದ್ತ ನಮಗೂ ಸ್ವಲ್ಪ ಬಡಿಸಿ. ನಮ್ಮ ಓದಿನ ಹಸಿವು ತಣಿದೀತು.
hm right:)
ಒಂಟಿತನ, ಏಕಾಂತ...GOOD Writeup
Post a Comment