ಎಲ್ಲೋ ಓದಿದ ಚೆನ್ನವೀರ ಕಣವಿ ಅವರ ಕವನದ ಸಾಲುಗಳು ನನಗೆ ಇಷ್ಟವಾಗಿ ನನ್ನ ಪುಟ್ಟ ಡೈರಿಯಲ್ಲಿ ಬರೆದಿಟ್ಟಿದ್ದೆ. ನೀವೂ ಓದಿಕೊಳ್ಳಿ.
"ಬರೆದ ಕವಿತೆಯ ಭಾರ ಬರೆಯದ ಕವಿತೆಗಳಿಗಿಂತ ಹೆಚ್ಚಲ್ಲ"
"ಪ್ರಕೃತಿ ತನ್ನೆದೆಯ ಮಧುವಾಟಿಕೆಯ ತೆರೆದಿರಲು
ಅದನು ಹೀರದೆಯೆ ಸಾಗಬಹುದೇ?
ಯಾರಿಗೀ ಸುಂದರತೆ ಯಾರಿಗೀ ಪರವಶತೆ?
ಯಾರ ಸುಖಕೀ ಸೃಷ್ಟಿ ನಿನಗಲ್ಲದೇ?"
"ಮಾಯೆಯಿಕ್ಕುವ ಕರದ ತಾಲಲಯಕ್ಕೆ
ದೇಶಕಾಲಗಳು ನರ್ತಿಸುತ ಸಾಗಿವೆ"
"ಬಾಲ್ಯದಿಂದಲೂ ಮುಗಿಲ ಕಂಡು
ಮೈಮರೆತ ದಿನಗಳೆನಿತು!
ಅವುಗಳಾಟದಲ್ಲಿ ಮೈಯಮಾಟದಲ್ಲಿ
ಜೀವ ತುಂಬಿಬಂತು"
"ಮುಗಿಲ ಬೆಳಕಿನ ಬೀಜ ಮರವಾಗಿ ನೆಲವ ತಬ್ಬಿತ್ತು"
"ಏನಾದರೂ ಆಗಲಿ, ಹಾಡು ನಿಲ್ಲಿಸಬೇಡ
ದೀಪ ಪಟ್ಟನೆ ಆರಿ ಹೋಗಬಹುದು
ನನ್ನೆದೆಯ ಕತ್ತಲೆಯ ಕಣ್ಣುಕಪ್ಪಡಿ ಮತ್ತೆ
ಮೂಲೆ-ಮೂಲೆಗೆ ಹೋಗಿ ಹಾಯಬಹುದು"
"ಬಾಳಪುಟದಲ್ಲಿ ಬಾಲ್ಯವೆಂಬುವುದೊಂದು
ಅಳಿಸಲಾರದ ಮಧುರ ಭಾವಗೀತ"
"ಬದುಕು ಸೋಲಾದರೂ ಕಾಡು ಪಾಲದರೂ
ಹಾಡು ಬಿಟ್ಟುಳಿದವನ ಪಾಡು ಬೇಡ
ನೀನೆನ್ನ ದೈವತವು ಹಾಡೆನ್ನ ಜೀವಿತವು
ಮತ್ತೆ ಮತ್ತುಳಿದವರ ಮಾತು ಬೇಡ"
"ಮೆಲ್ಲದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ
ಹೆಣ್ಣ ಕಣ್ಣಂಚಿನಲ್ಲಿ ತುಳುಕುವಂತೆ"
"ಹೊಗೆ ನಟ್ಟು ಹೋಗಿರುವ ಮನದ ಮನೆಗೋಡೆಗಳು
ಸುಣ್ಣ-ಬಣ್ಣವನೆಂದು ಕಾಣಬಹುದು?
ಇಲ್ಲಣವು ಜೋತಿರುವ ಜೇಡಬಲೆ ನೇತಿರುವ
ಬೆಳಕಿಂಡಿಯಲ್ಲಿ ಬೆಳಕದೆಂತುಬಹುದು?"
"ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ"
Subscribe to:
Post Comments (Atom)
8 comments:
ಧರಿತ್ರಿ,
ಒಂದೊಂದು ಸಾಲೂ ನುಡಿಮುತ್ತಿನ ಹಾರಗಳು!! ಚೆನ್ನವೀರ ಕಣವಿಯವರು ನವ ಕರ್ನಾಟಕ ಕಂಡ ಅದ್ಭುತ ಕವಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರಿಗೆ ಮತ್ತು ಅವರು ಬರೆದ ಈ ನುಡಿಮುತ್ತುಗಳನ್ನು ಓದುವ ಅವಕಾಶ ಮಾಡಿಕೊಟ್ಟ ನಿಮಗೆಧನ್ಯವಾದಗಳು.
- ಉಮೇಶ್
ಧರಿತ್ರಿ,
ಕಣವಿಕಾವ್ಯದ ಸುಂದರವಾದ ಸಾಲುಗಳನ್ನು ಹೆಕ್ಕಿ ನಮ್ಮ ಮನಸ್ಸನ್ನು ಅರಳಿಸಿದ್ದೀರಿ. ನಿಮಗೆ ಧನ್ಯವಾದಗಳು.
ನಿಮ್ಮ title pageದಲ್ಲಿರುವ ಮಗುವಿನ ಚಿತ್ರ ಸುಂದರವಾಗಿದೆ.
ಧರಿತ್ರಿ ಈ ಸಾಲುಗಳು ಸೊಗಸಾಗಿವೆ ಅವುಗಳದೇ ಧ್ವನಿ ಹೊಮ್ಮಿಸುತಿವೆ ...
ಯಾಕೆ ಹೀಗೆ ಮತ್ತೆ ನನ್ನ ಬ್ಲಾಗ್ ಗೆ ಬರಲು ಕರೆಯಬೇಕೆ...?
ಕಣವಿಯವರ ಕವನಗಳು ಮನಸಿಗೆ ಮುದ ನೀಡುವ೦ತಿವೆ. ಚೆನ್ನಾಗಿದೆ.
Dharithri
Bengaloorige bandu nimma blog noduttiddene, thumbaa aparoopa aaguttideyalla nimma blog na postingu...yaake...?? kelasada ottadana..?? biDisada sootrana..??
kanaviyaara nudigala moolaka bahu sundara vichaaragalalli nammannu mulugisidiri...
sorry kannada annu englishinalli responsisuttiddene..browsing centre ninda...
sumadhura
ಯಾಕ್ರೀ, ಹುಷಾರಿಲ್ವಾ? ಯಾರ ಬ್ಲಾಗಲ್ಲೂ ನಿಮ್ಮ ಉಪಸ್ಥಿತಿ ಕಾಣಿಸ್ತಿಲ್ಲಾ!?
oh!! enta adhbuta kavana tumba dhanyavadagaLu nimge...
Post a Comment