Wednesday, March 18, 2009

ಧರಿತ್ರಿ ನನ್ನ ಕನಸು..

ನಾನು ಧರಿತ್ರಿ..
ಕರಾವಳಿಯ ಪುಟ್ಟ ಹಳ್ಳಿ ನನ್ನೂರು. ಬದುಕು, ಅಮ್ಮ, ಪ್ರೀತಿ ಅಂದ್ರೆ ಅಕ್ಕರೆ ಜಾಸ್ತಿ. ಬದುಕಂದ್ರೆ ತುಂಬಾನೇ ಪ್ರೀತಿಸ್ತೀನಿ..ಪ್ರೀತಿಸುವುದೆಂದರೆ ಅದು ಬದುಕಂತೀನಿ. ಧರಿತ್ರಿ ನನ್ನ ಭಾವದಲೆಗಳಿಗೆ ವೇದಿಕೆಯಾಗಲಿದ್ದಾಳೆ. ನಿಮ್ ಥರ ನನ್ನದೂ ಒಂದು ಬ್ಲಾಗ್. ಧರಿತ್ರಿ ನನ್ನ ಅದಮ್ಯ ಕನಸು. ಸದಾ ಏನಾದ್ರೂ ಬರೀಬೇಕು ಅನ್ನೋದು ನನ್ ಮನಸ್ಸಿನ ತುಡಿತ. ಬರವಣಿಗೆ ಅನ್ನೋದು ನಿಂತ ನೀರಾಗಬಾರದು..ಅದಕ್ಕೆ ಈ ಧರಿತ್ರಿ ಆಸರೆಯಾಗುತ್ತಾಳೆ ಅನ್ನೋ ನಂಬಿಕೆ. ನಿಮ್ಮ ಪ್ರೋತ್ಸಾಹ, ಬೆನ್ನು ತಟ್ಟೋದು, ಕೆಟ್ಟದು ಅನಿಸಿದ್ರೆ ಥೂ! ಎಂದು ಉಗಿದ್ರೂ ನಾ ಸಹಿಸಬಲ್ಲೆ..ತಪ್ಪಾದ ಹೆಜ್ಜೆಗಳನ್ನು ತಿದ್ದಿ ಮತ್ತೆ ಸರಿಪಡಿಸಿಕೊಳ್ಳಬಲ್ಲೆ.
ಭಾವನೆ, ಬದುಕು, ನೆನಪುಗಳ ಕನವರಿಕೆ, ಕನಸು, ಅನುಭವದ ಪಿಸುಮಾತುಗಳು, ಸಿಹಿ-ಕಹಿ ನುಡಿಗಳು ಎಲ್ಲವೂ ಈ ಧರಿತ್ರಿಯಲ್ಲಿ ನಿರಂತರ ಚೆಲ್ಲಿಬಿಡ್ತೀನಿ. ಖಂಡಿತ ಪುರುಸೋತ್ತು ಮಾಡಿಕೊಂಡು ಓದುತ್ತೀರಲ್ಲಾ..
ಇಂತೀ, ನಿಮ್ಮ
ಧರಿತ್ರಿ

17 comments:

ತೇಜಸ್ವಿನಿ ಹೆಗಡೆ- said...

Wish u All the Best :)

PARAANJAPE K.N. said...

ಧರಿತ್ರಿ,
ನಿನ್ನ ಕನಸು ನನಸಾಗಲಿ, ಪ್ರೀತಿ ಅಕ್ಕರೆಯ ಜೇನು ಸಕ್ಕರೆ ಜೊತೆಗೆ ನಿನ್ನೆಲ್ಲ ತುಡಿತ,ಮಿಡಿತ,ಅನುಭವದ ಮಾತುಗಳು ಧುಮ್ಮಿಕ್ಕಿ ಹೊರಹೊಮ್ಮಲಿ, ಅಕ್ಷರಜಾತ್ರೆ ಮು೦ದುವರೆಯಲಿ, ಶುಭವಾಗಲಿ ಎ೦ದು ಹಾರೈಸುವೆ.

ಶಿವಪ್ರಕಾಶ್ said...

ಧರಿತ್ರಿ,
ಬ್ಲಾಗ್ ಲೋಕಕ್ಕೆ ನಿಮಗೆ ಸ್ವಾಗತ.
Wish you all the best...
ನಿಮ್ಮಿಂದ ಕಥೆ, ಕವಿತೆ, ಕಾದಂಬರಿಗಳನ್ನು ನೀರಿಕ್ಷಿಸುತ್ತಿರುವ...
ಶಿವಪ್ರಕಾಶ್

PaLa said...

ನಿಮ್ಮ ಪ್ರೀತಿಯ ಬದುಕಿನ ಸವಿ ನಮಗೂ ಬಡಿಸಿ, all the best
--
PaLa

ಸಿಮೆಂಟು ಮರಳಿನ ಮಧ್ಯೆ said...

ಧರಿತ್ರಿಯವರೆ...

ಸುಸ್ವಾಗತ..
ನಿಮ್ಮ ಲೇಖನಕ್ಕಾಗಿ ಕಾಯುತ್ತಿರುವೆ..
ಬೇಗ ಬರೆಯಿರಿ...

ಶರಶ್ಚಂದ್ರ ಕಲ್ಮನೆ said...

ಧರಿತ್ರಿ ಅವರೇ,

ನನ್ನ ಬ್ಲಾಗ್ ಅಲ್ಲಿ ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಬರಹಗಳಿಗೆ ಕಾಯುತ್ತಿರುವೆ... ಶುಭವಾಗಲಿ :)

ಆಲಾಪಿನಿ said...

ಒಳ್ಳೆ ಹೆಸರು ಧರಿತ್ರಿ. ಬರೀರಿ ಬೇಗ...

shivu said...

ಧರಿತ್ರಿ,

ನನ್ನ ಬ್ಲಾಗಿಗೆ ಬಂದು ಶಿವಣ್ಣ ಅಂದು ಕಾಮೆಂಟಿಸಿದಾಗಲೇ...ಗೊತ್ತಾಗಿದ್ದು...
ಸ್ವಾಗತ....ಶುರುವಾಗಲಿ ನಿನ್ನ ಆಕ್ಷರಗಳ ಮೆರವಣಿಗೆ....
all the best..

sunaath said...

ಧರಿತ್ರಿ,
ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿರುವೆ.
ನಿಮಗೆ ಶುಭಾಶಯಗಳು.

ಶಂಕರ ಪ್ರಸಾದ said...

ಭೂಮಿ ಅಕ್ಕ... ಯಾಕೆ? ಟಾಯ್ಲೆಟ್ ಪುರಾಣ ಓದಿ ಬೇಜಾರಾಯ್ತಾ? ನನ್ನ ಅಭ್ಯಾಸ ಏನಂದ್ರೆ, ಕಣ್ಣಿಗೆ ಕಂಡೂ ಕಾಣದ ವಿಚಾರಗಳ, ವಸತುಗಳ ಬಗ್ಗೆ ಬರೀತೀನಿ. ಸಿಂಪಲ್ ಟಾಯ್ಲೆಟ್ಟಲ್ಲೂ ಎಷ್ಟು ವೈವಿಧ್ಯತೆ ಇದೆ ಅನ್ನೋದನ್ನ ತೋರಿಸ್ತಾ ಇದೀನಿ ಅಷ್ಟೆ.

ಕಟ್ಟೆ ಶಂಕ್ರ

ಅಂತರ್ವಾಣಿ said...

ಧರಿತ್ರಿ ಅವರೆ,
ಬ್ಲಾಗ್ ಲೋಕಕ್ಕೆ ಸ್ವಾಗತ.
ನಿಮ್ಮ ಕವನಗಳು, ಲೇಖನಗಳು, ಕಥೆಗಳನ್ನು ನಿರೀಕ್ಷಿಸುತ್ತಿದ್ದೇನೆ.

Rajesh Manjunath - ರಾಜೇಶ್ ಮಂಜುನಾಥ್ said...

ಧರಿತ್ರಿಗೆ,
ಪ್ರೀತಿಯ ಸ್ವಾಗತ....
ಬರವಣಿಗೆಯ ಚಿತ್ತಾರ ಹರಿದು ಬಿಡಲಿ.

ಶಂಕರ ಪ್ರಸಾದ said...

ಕ್ಷಮಯಾ ಧರಿತ್ರಿ...
ತಪ್ಪಾಗಿದ್ರೆ ಕ್ಷಮಿಸು ಅಕ್ಕಾ..

ಕಟ್ಟೆ ಶಂಕ್ರ

ಧರಿತ್ರಿ said...

@ತೇಜಕ್ಕ, ಜಯಶಂಕರ್, ಶಿವಪ್ರಕಾಶ್, ರಾಜೇಶ್, ಪರಾಂಜಪೆಯಣ್ಣ, ಆಲಾಪಿನಿ, ಶಿವಣ್ಣ. ಸುನಾಥ್ ಸರ್, ಪಾಲಚಂದ್ರ, ಪ್ರಕಾಶ್ ಹೆಗಡೆ ಸರ್, ಶರತ್ಚಂದ್ರ...ನನ್ನ ಬೆನ್ನು ತಟ್ಟಿದ್ದಕ್ಕೆ ಕೃತಜ್ಞತೆಗಳು.

@ಶಂಕ್ರಣ್ಣ..ಇಲ್ಲಪ್ಪ ಬೇಜಾರಾಗಿಲ್ಲ. ಬರೇ ಟಾಯ್ಲೆಟ್ ಕುರಿತಾಗಿಯೇ ಮಾಹಿತಿ ಒಗ್ಗೂಡಿಸುವುದೂ ಒಂದು ಕಲೆ. ನಾ ಸುಮ್ನೆ ಹಾಗಂದಿದ್ದು. ನೀವು ಏನೂ ಬರೆದ್ರೂ ಚೆನ್ನಾಗಿರುತ್ತೆ. ನಗಿಸಿ ಮನ ಹಗುರಾಗಿಸುತ್ತೆ.

-ಧರಿತ್ರಿ

ಸುಶ್ರುತ ದೊಡ್ಡೇರಿ said...

ಶುಭಾಶಯ ತಂಗೀ...

ಧರಿತ್ರಿ said...

ಥ್ಯಾಂಕ್ಯೂ ಅಣ್ಣ...ಮತ್ತೆ ಬರ್ತೀಯಲ್ಲಾ
-ಧರಿತ್ರಿ

Anonymous said...

ಧರಿತ್ರಿ, ಚಂದ ಇದೆ ನಿಮ್ಮನೆ.. ಖಂಡಿತಾ ಭೇಟಿ ಕೊಡುತ್ತಾ ಇರುತ್ತೇನೆ. ಸೊಗಸಾಗಿ ಬರೆಯುತ್ತೀ.. Good Luck.